ಎಸ್.ಕೆ. ಗೋಲ್ಡ್ ಸ್ಮಿತ್‌ನ 60 ವರ್ಷಗಳ ಕನಕ ಯಾತ್ರೆ : ನ. 9 ರಂದು ನೂತನ ವಿಶ್ವಸೌಧ ಲೋಕಾರ್ಪಣೆ , ವಜ್ರ ಮಹೋತ್ಸವದ ಸಮಾರೋಪ ಸಮಾರಂಭ
ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ನವೆಂಬರ್ 9ರಂದು ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ ನವೀಕೃತ ವಿಶ್ವಸೌಧ ಕಟ್ಟಡದ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ ಜರಗಲಿದೆ ಎಂದು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾಹಿತಿ ನೀಡಿದರು. ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ -ಆಪರೇಟಿವ್ ಸೂಸೈಟಿ 60 ಸಂವತ್ಸರಗಳನ್ನು ಪೂರೈಸಿ ವಜ್ರಮಹೋತ್ಸವ ವರ್ಷಾಚರಣೆಯನ್ನು ಆಚರಿಸುತ್ತಿದೆ. ಆ ಪ್ರಯುಕ್ತ 60 ಸಾಮಾಜಿಕ, ಧಾರ್ಮಿಕ ಮತ್ತು…