ಡಿ. 14 ರಂದು ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಸಂಗೀತೋತ್ಸವ … !
ಮಂಗಳೂರು: ಖ್ಯಾತಗಾಯಕಿ ಲತಾ ಮಂಗೇಶ್ವರ್ ಅವರ ಹಿಂದಿ ಹಾಡುಗಳನ್ನೊಳಗೊಂಡ ಒಟ್ಟು 24 Solo ಮತ್ತು Duet ಹಾಡುಗಳನ್ನು ಆಯ್ಕೆ ಮಾಡಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಎಂಬ ಕಾರ್ಯಕ್ರಮವನ್ನು ಡಿ 14 ರಂದು ನಗರದ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶೋಭಾ ಭಾಸ್ಕರನ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಕಾರ್ಯಕ್ರಮದ ವಿಶೇಷವೇನೆಂದರೆ, ನಾನು ನಡೆಸುತ್ತಿರುವ ಸಿಂಚನಮೆಲೊಡಿಸ್ ತಂಡದ ಗಾಯಕರನ್ನೇ ಗಾಯನ ಸ್ಪರ್ಧೆಯಲ್ಲಿ ಧ್ವನಿಯಾಗಲಿದ್ದಾರೆ…