Avatar

Shramitha bejja

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದ್ದ ಕಾರು: ಮಂಗಳೂರಿನ ಗೌಜಿ ಇವೆಂಟ್ಸ್ ಮಾಲೀಕ ಅಭಿಷೇಕ್ ದುರಂತ ಅಂತ್ಯ .. !

ಉಡುಪಿ:ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಉರುಳಿಬಿದ್ದ ಪರಿಣಾಮ ಉದ್ಯಮಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ಡಿ.10ರಂದು ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ನಡೆದಿದೆ.ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿಷೇಕ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದು, ಸಹಪ್ರಯಾಣಿಕರು ಯಾರೂ ಇರಲಿಲ್ಲ. ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದರು ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ…

Read More

ರಾಜಕೀಯ ವ್ಯಕ್ತಿಗಳಿಗೆ ಸಿಗುವ ಸೌಲಭ್ಯ , ಸೈನಿಕರಿಗೆ ಏಕೆ ಇಲ್ಲ… ? ,ಮಾಜಿ ಸೈನಿಕರಾದ ಸೆಬಾಸ್ಟೀನ್ ಪ್ರಶ್ನೆ .. ?

ಮಂಗಳೂರು: ನಮ್ಮ ಹೆಚ್ಚಿನ ಯವ್ವನವನ್ನು ಗಡಿಯಲ್ಲೇ ಕಳೆಯುತ್ತೇವೆ ಅಲ್ಲಿಂದ ನಿವೃತ್ತಿ ಪಡೆದು ಇಲ್ಲಿಗೆ ಬರುವಾಗ ಯಾವುದೇ ರೀತಿಯ ಮರ್ಯಾದೆ ಸಿಗುವುದಿಲ್ಲ . ಇದು ತುಂಬಾನೇ ನೋವು ಉಂಟು ಮಾಡುತ್ತದೆ . ಸರಕಾರವು ಯಾವುದೇ ಸವಲತ್ತನ್ನು ನೀಡುವುದಿಲ್ಲ ಎಂದುಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕಡಬ ತಾಲ್ಲೂಕು ಘಟಕದ ಅಧ್ಯಕ್ಷರು ,ಮಾಜಿ ಸೈನಿಕರಾದ ಸೆಬಾಸ್ಟೀನ್ ತಮ್ಮ ಅಳಲನ್ನು ತೋಡಿಕೊಂಡರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಂವಿಧಾನ ಹೇಳುತ್ತದೆ ಸೈನಿಕರಿಗೆ ಗೌರವ, ಅನುಕೂಲವನ್ನು ನೀಡಬೇಕೆಂದು…

Read More

ಡಿ 13 ರಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ದ.ಕ ಜಿಲ್ಲಾ ಮಹಾಸಮ್ಮೇಳನ ಹಾಗೂ ವಿಜಯ ದಿವಸ್ ಆಚರಣೆ

ಮಂಗಳೂರು:ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ದ.ಕ ಜಿಲ್ಲಾ ಮಹಾಸಮ್ಮೇಳನ ಹಾಗೂ ವಿಜಯ ದಿವಸ್ ಜಂಟಿ ಆಚರಣೆಯು ಡಿ 13 ರಂದು ಬೆಳಿಗ್ಗೆ ೯.೩೦ ರಿಂದ ಕಡಬ ತಾಲ್ಲೂಕಿನ ನೆಲ್ಯಾಡಿ ಬಿರ್ವಾ ಸಭಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು , ಮಾಜಿ ಸೈನಿಕರಾದ ನೋಬರ್ಟ್ ರೋಡಿಗ್ರಾಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಸಭೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷರಾದ ಡಾ|…

Read More

ಡಿ.13 ರಂದು : ಜಿಎಸ್‌ಬಿ ಸೇವಾ ಸಂಘದ ” ವಾಗ್ದೇವಿ ಟವರ್ಸ್‌ ಕಟ್ಟಡದ ಶಿಲಾನ್ಯಾಸ

ಮಂಗಳೂರು :ನಗರದ ಕದ್ರಿ ಪರಿಸರದಲ್ಲಿ ಸುಮಾರು 60000 ಚದರ ಅಡಿಗಳ “ವಾಗ್ವೇವಿ ಟವರ್ಸ” ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಡಿ 13 ರಂದು ಬೆಳಿಗ್ಗೆ 8:31ಕ್ಕೆ ಉದ್ಯಮಿ ಡಾ.ಪಿ.ದಯಾನಂದ ಪೈ ಯವರು ಈ ಹೊಸ ಯೋಜನೆಯ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷರಾದ ಡಾ.ಕಸ್ತೂರಿ ಮೋಹನ್ ಪೈ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , 60000 ಚದರ ಅಡಿಗಳ ‘ವಾಗ್ದೇವಿ ಟವರ್ಸ್’ ಕಟ್ಟಡದ ಶಿಲಾನ್ಯಾಸ…

Read More

ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ : ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ಚತುರ್ಥ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ತಾ| 07-12-2025ನೇ ಅದಿತ್ಯವಾರದಂದು ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು. ಅಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ ಹಾಗೂ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಜನೆ ಹಾಗೂ ಹರಿನಾಮ…

Read More

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಉರುಳಿಬಿದ್ದ ಕಾರು:ಮಂಗಳೂರಿನ ಗೌಜಿ ಇವೆಂಟ್ಸ್ ಮಾಲೀಕಅಭಿಷೇಕ್ ಮೃತ್ಯು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಉರುಳಿಬಿದ್ದ ಪರಿಣಾಮ ಉದ್ಯಮಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ಡಿ.10ರಂದು ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ನಡೆದಿದೆ. ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿಷೇಕ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದು, ಸಹಪ್ರಯಾಣಿಕರು ಯಾರೂ ಇರಲಿಲ್ಲ. ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದರು ಎಂದು ತಿಳಿದು ಬಂದಿದೆ….

Read More

ಲಕ್ಷ ಲಕ್ಷ ಮೌಲ್ಯದ ಕಾಫಿ ಬೀಜದ ಗೋಣಿಚೀಲ ಕಳ್ಳತನ; ಐವರು ಆರೋಪಿಗಳು ಅರೆಸ್ಟ್

ಕಾಫಿ ಬೀಜದ ಲೋಡು ಕೊಂಡೊಯ್ಯುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪುತ್ತೂರು ನಿವಾಸಿ ಆಶ್ಲೇಷ ಭಟ್ ಹಾಗೂ ಅವರ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾ‌ರ್, ವಿಜಯ ಶೆಟ್ಟಿ ಮತ್ತು ಮುಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಪ್ರಕರಣದ ಪಿರ್ಯಾದಿದಾರರಾದ ಪುತ್ತೂರು ಕಬಕ ನಿವಾಸಿ ತೃತೇಶ್ (29) ಎಂಬವರ ದೂರಿನಂತೆ ಸದ್ರಿಯವರು KA 19 AB 2258 ನೇ…

Read More

ಕಂಬಳ ವಿಚಾರವಾಗಿ ಶಾಸಕ ಅಶೋಕ್ ರೈ ಹತ್ತು ಬಾರಿ ನನಗೆ ಮನವಿ ಮಾಡಿದ್ದರು; ಸಚಿವ ಎಚ್ ಕೆ ಪಾಟೀಲ್. ಸರಕಾರದಿಂದ 23 ಕಂಬಳಗಳಿಗೆ ತಲಾ 5 ಲಕ್ಷ ಪ್ರೋತ್ಸಾಹ ಧನ.

ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಒಟ್ಟು 23 ಕಂಬಳಗಳಿಗೆ ವಾರ್ಷಿಕವಾಗಿ ತಲಾ 5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸರಕಾರ ಘೋಷಣೆ ಮಾಡಿದ್ದು, ಈ ವಿಚಾರವನ್ನು ಡಿ.8ರಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್‌ರವರು ಸದನದಲ್ಲಿ ತಿಳಿಸಿದ್ದಾರೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ವಿಚಾರವಾಗಿ ಮಾತನಾಡಿದರು. ಉಭಯ ಜಿಲ್ಲೆಗಳ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಕರ್ನಾಟಕ ರಾಜ್ಯ…

Read More

ತೇಜಸ್ವಿನಿ ಸಹೋದಯ ಶಾಲೆಗಳ ಸಿಬಿಎಸ್‌ಇ ಅಂತರ್ ಶಾಲಾ ಕಬಡ್ಡಿ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ಸಾಕ್ಷಿಯಾದ ಪಾಲಕುನ್ನಿನ ಅಂಬಿಕಾ ಇಂಗ್ಲಿಷ್ ಮಾಧ್ಯಮ ಶಾಲೆ … !

ಕಾಸರಗೋಡು:ತೇಜಸ್ವಿನಿ ಸಹೋದಯ ಶಾಲೆಗಳ ಸಿಬಿಎಸ್‌ಇ ಅಂತರ್ ಶಾಲಾ ಕಬಡ್ಡಿ ಚಾಂಪಿಯನ್‌ಶಿಪ್ ಕ್ರೀಡಾಕೂಟವು ಪಾಲಕುನ್ನಿನಲ್ಲಿರುವ ಅಂಬಿಕಾ ಇಂಗ್ಲಿಷ್ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಿತು. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಸಿಬಿಎಸ್‌ಇ ಶಾಲೆಗಳಿಂದ ಸುಮಾರು 240 ಕಬಡ್ಡಿ ಆಟಗಾರರು ಬಾಲಕರು ಮತ್ತು ಬಾಲಕಿಯರು ಭಾಗವಹಿಸಿದ್ದರು . ಮೂರು ವಿಭಾಗಗಳಲ್ಲಿ ಚಾಂಪಿಯನ್‌ಶಿಪ್‌ ಪಂದ್ಯಕೂಟವು ನಡೆಯಿತು . ಬೇಕಲ್ ಎಸ್‌ಐ ರೋಶಿತ್ ಯು ಕಬಡ್ಡಿ ಪಂದ್ಯಕೂಟಕ್ಕೆ ಚಾಲನೆಯನ್ನು ನೀಡಿದರು . ತೇಜಸ್ವಿನಿ ಸಹೋದಯ ಸಂಕೀರ್ಣದ ಉಪಾಧ್ಯಕ್ಷೆ ಎ ದಿನೇಶನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ…

Read More

ಗತ ವೈಭವದ ಬ್ರ್ಯಾಂಡ್ ಮಂಗಳೂರು ಕಟ್ಟಲು ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಸಹಯೋಗದಲ್ಲಿ ಡಿ. 27ರಂದು ‘ನಶೆ ಮುಕ್ತ ಮಂಗಳೂರು’ ಅಭಿಯಾನ

ಮಂಗಳೂರು: ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ನಶೆ ಮುಕ್ತ ಮಂಗಳೂರು ಅಭಿಯಾನವನ್ನು ಆಯೋಜಿಸಲಾಗಿದೆ.ಯುವ ಜನತೆಯಲ್ಲಿ ಮಾದಕ ದ್ರವ್ಯಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸೃಜನಾತ್ಮಕ ಸಮಾಜ ಕಟ್ಟುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಅಭಿಯಾನವನ್ನು ಡಿ. 27ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಮೇಕ್ ಎ ಚೇಂಜ್ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುಹೈಲ್ ಕಂದಕ್ ತಿಳಿಸಿದರು. ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ…

Read More
error: Content is protected !!