Avatar

Shramitha bejja

ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ನೂತನ ಡಿಜಿಟಲ್ ಬೋರ್ಡ್ ಉದ್ಘಾಟನೆ .

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆಯಾಗಿ ನೂತನ ಡಿಜಿಟಲ್ ಬೋರ್ಡ್‌ನ್ನು ಸ್ಥಾಪಿಸಲಾಗಿದೆ. ಈ ಡಿಜಿಟಲ್ ಬೋರ್ಡ್‌ನ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮಾಂತೇರೋ ಲೋಕಾರ್ಪಣೆ ಗೈದರು.ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಅಧ್ಯಕ್ಷತೆ ವಹಿಸಿದರು. ಗ್ರಾಮದ ನಾಗರಿಕರಿಗೆ ನವೀನ ಮಾಹಿತಿ ತಕ್ಷಣ ಲಭ್ಯವಾಗುವಂತಾಗಿಸಲು ಹಾಗೂ ಪಾರದರ್ಶಕ ಆಡಳಿತಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಈ ಬೋರ್ಡ್‌ನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ದಿನನಿತ್ಯದ ಪಠ್ಯಗಳು, ಯೋಜನೆಗಳು, ಪ್ರಕಟಣೆಗಳು ಹಾಗೂ ಸರ್ಕಾರಿ ಸೂಚನೆಗಳ ಬಗ್ಗೆ ಈ ಮೂಲಕ…

Read More

ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ ನೇಮಕ .

ಕಾಸರಗೋಡು: ಕಾಸರಗೋಡಿನ ಮಹಿಳೆ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ಜಪಾನಿನ ಭಾರತೀಯ ರಾಯಭಾರಿಯಾಗಿ ನೇಮಿಸಿದೆ. ಈಕೆ ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸ್‌ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟುಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್‌ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು….

Read More

ಪಾಕಿಸ್ತಾನದ ವಾಯುದಾಳಿಯಲ್ಲಿ ಮೂವರು ಅಫ್ಘಾನ್‌ ಕ್ರಿಕೆಟಿಗರು ಮೃತ್ಯು

ಕಾಬೂಲ್: ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಘಾನ್ ದೇಶೀಯ ಕ್ರಿಕೆಟಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ಮುಂಬರುವ ತ್ರಿಕೋನ T20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ACB, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಈ ದಾಳಿಯನ್ನು “ಪಾಕಿಸ್ತಾನ ಆಡಳಿತದ ಹೇಡಿತನದ ಕೃತ್ಯ” ಎಂದು ಬಣ್ಣಿಸಿದೆ. ಮಾನವೀಯ ಮೌಲ್ಯಗಳ ವಿರುದ್ಧ ನಡೆದ ಈ ಕ್ರಮವು ಕ್ರೀಡಾ ಬಾಂಧವ್ಯದ ಆತ್ಮವನ್ನು…

Read More

ಅಂಬಿತ್ತಾಡಿಯಲ್ಲಿ ಹೈಟೆಕ್ ಅಂಗನವಾಡಿ ಶಿಲಾನ್ಯಾಸ: ಜನರ ಹೋರಾಟಕ್ಕೆ ಸಾರ್ಥಕ ಅಂತ್ಯ .

ಮಂಜೇಶ್ವರಂ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿತ್ತಾಡಿ ಹೈಟೆಕ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಸಮಾರಂಭವು ಸಾಯಂಕಾಲ 4 ಗಂಟೆಗೆ ಉತ್ಸವದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಹಲವಾರು ವರ್ಷಗಳಿಂದ ಸ್ಥಳೀಯರು ಆತುರದಿಂದ ಕಾಯುತ್ತಿದ್ದ ಈ ಕ್ಷಣವು, ಅಂಬಿತ್ತಾಡಿಯ ಜನರ ದೀರ್ಘಕಾಲದ ಆಶಯಕ್ಕೆ ಸಾರ್ಥಕ ಅಂತ್ಯ ತಂದಿತು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ನೂತನ ಹೈಟೆಕ್ ಅಂಗನವಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೈಕೆಯ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್…

Read More

1 ಕೋಟಿ ರೂ ವಷ್ಟು ಅನುದಾನ ಬಿಡುಗಡೆಗೊಳಿಸುವಲ್ಲಿ ಸಹಕರಿಸಿದ ಶಾಸಕರಾದ ವೇದವ್ಯಾಸ್ ಕಾಮತ್ ರ ನೇತೃತ್ವದಲ್ಲಿ ಗುದ್ದಲಿ ಪೂಜೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನಲ್ಲಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಹದಿನೈದಕ್ಕೂ ಹೆಚ್ಚು ಕಾಮಗಾರಿಗಳ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬಹುಕಾಲದ ಬೇಡಿಕೆಯಂತೆ ಅತೀ ಅಗತ್ಯವಿರುವ ರಸ್ತೆ ಕಾಂಕ್ರೀಟೀಕರಣ, ತಡೆಗೋಡೆ ನಿರ್ಮಾಣ, ಕಾಲುದಾರಿ, ಆರ್.ಸಿ.ಸಿ ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುದಾನವನ್ನು ಹೊಂದಿಸಿಕೊಂಡು ಸಕಲ ವ್ಯವಸ್ಥೆ…

Read More

ಮಂಗಳೂರಲ್ಲಿ‌ ಹನಿಟ್ರ್ಯಾಪ್ ಕೇಸ್ ಬಯಲು; ಉದ್ಯಮಿಯನ್ನು ಬೆದರಿಸಿ 44.80 ಲಕ್ಷ ದೋಚಿದ ತಂಡ .

ಮಂಗಳೂರಲ್ಲಿ ಇತ್ತೀಚಿಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿದೆ ಎಂದು ಬೆಂಗಳೂರಿನ ನ್ಯಾಯವಾದಿ ಸೌದಾ ಆರೋಪಿಸಿದ್ದಾರೆ. ಅವರು ಶುಕ್ರವಾರ ಮಂಗಳೂರಿನ ವುಡ್‌ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇರಳದ 53 ವರ್ಷದ ಮುಹಮ್ಮದ್ ಅಶ್ರಫ್ ತಾವರಕಡನ್ ಎಂಬುವವರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗೆ ಬಶೀರ್ ಕಡಂಬು, ಸಫಿಯಾ ಮಾಣಿ ಮತ್ತು ಇತರ ಆರೋಪಿಗಳು ಸೆ.24ರಂದು ಮಂಗಳೂರಿಗೆ ಕರೆಸಿ ಹೆಣ್ಣು ತೋರಿಸುವ…

Read More

ಮಂಚಿಕಟ್ಟೆ: ಗುಂಪು‌ ಕೂಡಿ ಗಲಾಟೆ: ಕೇಸ್ ದಾಖಲು

ಗುಂಪು ಕೂಡಿ ಗಲಾಟೆ‌ ಮಾಡಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ.‌ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮಂಚಿ ಗ್ರಾಮದಲ್ಲಿ ಬೀಟ್ ಸಂಚರಿಸುತ್ತಿರುವಾಗ ಮಂಚಿ ಕಟ್ಟೆ ಎಂಬಲ್ಲಿ ಯುವಕರು ಗಲಾಟೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸ್ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಜನರು ಗುಂಪು ಸೇರಿದ್ದರು. ಆ ಗುಂಪಿನಲ್ಲಿ ವಿಜೇತ್, ರಕ್ಷಿತ್‌ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್, ಮಹಮ್ಮದ್ ಮುಸ್ತಫ್ ರವರು ಗಲಾಟೆ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ದ್ವೇಷವನ್ನುಂಟು ಮಾಡುವ,…

Read More

ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಐಇಇಇ ಡಿಸ್ಕವರ್ 2025’ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ .

ಮಂಗಳೂರು : ನಡುಪದವು ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ “ವಿತರಣಾ ಕಂಪ್ಯೂಟಿಂಗ್, ವಿಎಲೆಸ್ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟಿಕ್ಸ್” ವಿಷಯಾಧಾರಿತ ‘ಐಇಇಇ ಡಿಸ್ಕವರ್ 2025’ 9ನೇ ಅಂತರಾಷ್ಟ್ರೀಯ ಸಮ್ಮೇಳನವು ಶುಕ್ರವಾರ ಭವ್ಯವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ವಾಸುದೇವ ಕಾಮತ್, ಉಪಾಧ್ಯಕ್ಷರು, ಇನ್ಫೋಸಿಸ್ ಮಂಗಳೂರು ಹಾಗೂ ಮುಖ್ಯಸ್ಥರು, ಡೆಲಿವರಿ ರಿಸ್ಕ್ ಮ್ಯಾನೇಜ್ಮೆಂಟ್, ಅವರು ನವೀನ ಆವಿಷ್ಕಾರಗಳ ಮಹತ್ವ ಮತ್ತು ತಂತ್ರಜ್ಞಾನಗಳ ಸುರಕ್ಷಿತ ಹಾಗೂ ನೈತಿಕ ಬಳಕೆಯ ಅಗತ್ಯತೆಯನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಒತ್ತಿ ಹೇಳಿದರು. “ಆವಿಷ್ಕಾರಗಳು…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಕೆಂಪುಕಲ್ಲುಗಳ ಸಹಿತ ಲಾರಿ ವಶ .

ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಕೆಂಪುಕಲ್ಲುಗಳ ಸಹಿತ ಲಾರಿಯನ್ನು ಪಡೀಲ್ ಬಳಿ ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಎಸ್‌ಐ ಆನಂದ್ ಅವರು ಪಿಸಿ ಹರಿಶ್ಚಂದ್ರ ರವರೊಂದಿಗೆ ರೌಂಡ್ಸ್ ಕರ್ತವ್ಯ ಮಾಡುವಾಗ ಪಡೀಲ್ ಜಂಕ್ಷನ್ ಬಳಿಯ ಪೆಟ್ರೋಲ್ ಪಂಪ್ ಪಕ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪ್ ವೆಲ್ ಕಡೆಯಿಂದ ಲಾರಿಯೊಂದು ಬಂದಿದೆ. ನಿಲ್ಲಿಸುವಂತೆ ಸೂಚನೆ ನೀಡಿದಾಗ ಸ್ವಲ್ಪ ದೂರ ಹೋಗಿ ನಿಲ್ಲಿಸಿ ಚಾಲಕ ಲಾರಿಯಿಂದ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ ಕೆಂಪು ಕಲ್ಲುಗಳು…

Read More

ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ರಿಕ್ಷಾ ಚಾಲಕ ಅರೆಸ್ಟ್ .

ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ರಿಕ್ಷಾ ‍ಚಾಲಕನನ್ನು ಪಾಣೆಮಂಗಳೂರು ಎಂಬಲ್ಲಿ ಬಂಧಿಸಲಾಗಿದೆ. ಮೊಹಮ್ಮದ್ ಇಮ್ತಿಯಾಜ್, ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸರು ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ರಿಕ್ಷಾದಲ್ಲಿ ಓರ್ವ ವ್ಯಕ್ತಿಯು ಅನುಮಾನಾಸ್ಪದವಾಗಿ ಇರುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸ್ಮಶಾನದ ಪಕ್ಕ ಆಟೋ ರಿಕ್ಷಾವನ್ನು ನಿಲ್ಲಿಸಿದ್ದು ಕಂಡುಬಂದಿದೆ. ರಿಕ್ಷಾದ ಒಳಗೆ ಚಾಲಕ ಸೀಟಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆ ವ್ಯಕ್ತಿಯು ಈ ಹಿಂದೆ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾದ ಅ.ಕ್ರ 50/2025 ರಲ್ಲಿ ದಾಖಲಾದ…

Read More
error: Content is protected !!