ಅಂಬಿತ್ತಾಡಿಯಲ್ಲಿ ಹೈಟೆಕ್ ಅಂಗನವಾಡಿ ಶಿಲಾನ್ಯಾಸ: ಜನರ ಹೋರಾಟಕ್ಕೆ ಸಾರ್ಥಕ ಅಂತ್ಯ .

ಮಂಜೇಶ್ವರಂ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿತ್ತಾಡಿ ಹೈಟೆಕ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಸಮಾರಂಭವು ಸಾಯಂಕಾಲ 4 ಗಂಟೆಗೆ ಉತ್ಸವದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಹಲವಾರು ವರ್ಷಗಳಿಂದ ಸ್ಥಳೀಯರು ಆತುರದಿಂದ ಕಾಯುತ್ತಿದ್ದ ಈ ಕ್ಷಣವು, ಅಂಬಿತ್ತಾಡಿಯ ಜನರ ದೀರ್ಘಕಾಲದ ಆಶಯಕ್ಕೆ ಸಾರ್ಥಕ ಅಂತ್ಯ ತಂದಿತು.

40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ನೂತನ ಹೈಟೆಕ್ ಅಂಗನವಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೈಕೆಯ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿನ್ ಲವೀನೂ ಮೊಂತೇರು ವಹಿಸಿದರು. ಶಿಲಾನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಪಂಚಾಯತ್ ಡೆವಲಪ್ಮೆಂಟ್ ಚೇರ್ಮನ್ ಹಮೀದ್ ಹೊಸಂಗಡಿ, DPC ಸದಸ್ಯ ವಿ.ವಿ. ರಮೇಶನ್, CDPO ಗೀತಾ ಕುಮಾರಿ ವಿ.ಜಿ., ICDS ಮೇಲ್ವಿಚಾರಕಿ ಸುಮತಿ ಕೆ., ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷೆ ರಾಧಕ್ಕ, ಹಾಗೂ ಪಂಚಾಯತ್ ಸದಸ್ಯರಾದ ಜಯಂತಿ ಮತ್ತು ವಿನಯ ಭಾಸ್ಕರ್ ಉಪಸ್ಥಿತರಿದ್ದರು.

ಸ್ವಾಗತ ಭಾಷಣವನ್ನು ಪಂಚಾಯತ್ ಸದಸ್ಯೆ ಕುಲ್ಸುಮ್ಮ ರವರು ನೆರವೇರಿಸಿದರು. ಅಂಗನವಾಡಿ ಶಿಕ್ಷಕಿ ಬೆಬಿ ತಾರಣಾಥ ಧನ್ಯವಾದಗಳ ಭಾಷಣ ಮಾಡಿದರು.ಸ್ಥಳೀಯರ ಸಹಕಾರ ಮತ್ತು ನಿರಂತರ ಹೋರಾಟದ ಫಲವಾಗಿ ಅಂಬಿತ್ತಾಡಿಯ ಈ ಹೈಟೆಕ್ ಅಂಗನವಾಡಿ ನಿರ್ಮಾಣ ಕಾರ್ಯವು ಪ್ರಾರಂಭವಾಗಿರುವುದು ಗ್ರಾಮದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!