Avatar

Shramitha bejja

‘ಅಪ್ಪೆ ಪಾಷಣಮೂರ್ತಿಗ್ ಸುಗಿಪುದ ತುಡರ ಬೊಲ್ಪು’ ತುಳು ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ

‘ಸು ಫ್ರಮ್ ಸೊ’ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಅಭಿನಯದ ಶಿವಂ ಕ್ರಿಯೇಷನ್ಸ್ ಅರ್ಪಣೆ ಮಾಡುವ, ಶೆಟ್ಟಿ ಅಜಯ್ ರಾಜ್ ಸಾಹಿತ್ಯದ,ಭರತ್ ಗಟ್ಟಿ ಗಾಯನದ,ಉದಯ್ ಕುಮಾರ್ ಬೇಕೂರು ನಿರ್ದೇಶನದ ‘ಅಪ್ಪೆ ಪಾಷಣಮೂರ್ತಿಗ್ ಸುಗಿಪುದ ತುಡರ ಬೊಲ್ಪು’ ತುಳು ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ ಗೊಳ್ಳಲಿದೆ.ರಕ್ಷಿತ್ ಇದರ ಸಂಕಲನ ಮತ್ತು ಛಾಯಾಗ್ರಹಣ ಮಾಡಿದ್ದಾರೆ.

Read More

ದ.ಕ ಜಿಲ್ಲೆಯಲ್ಲಿ ಹಿಂದೂ ವಿರೋಧಿ ಕಾರ್ಯಪಡೆ ವ್ಯಾಪಕ . ಶಾಸಕ ವೇದವ್ಯಾಸ ಕಾಮತ್ ಆರೋಪ.

ದ.ಕ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿ ಅಸ್ಥಿತ್ವಕ್ಕೆ ತಂದಿರುವ ಕೋಮು ವಿರೋಧಿ ಕಾರ್ಯಪಡೆಯು ಹಿಂದೂ ವಿರೋಧಿ ಕಾರ್ಯಪಡೆಯಾಗಿ ಕಾರ್ಯನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ಕರಾವಳಿ ಭಾಗದಲ್ಲಿ ಗೋಕಳ್ಳರು ರಾಜಾರೋಷವಾಗಿ ತಲವಾರು ಸಹಿತ ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಅತೀ ಹೆಚ್ಚು ಶಿಕ್ಷಣ ಸಂಸ್ಥೆಯಿರುವ ಮಂಗಳೂರು, ಕೇರಳದ ಗಡಿಭಾಗವಾದ್ದರಿಂದ ವ್ಯಾಪಕವಾಗಿ ಡ್ರಗ್ಸ್ ಪ್ರಕರಣಗಳು ಕಂಡು ಬರುತ್ತಿವೆ. ಇವುಗಳೇ ಇಲ್ಲಿನ…

Read More

ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸ ಪೂರೈಕೆಯ ಆರೋಪ .ದೂರು ದಾಖಲು.

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸವನ್ನು ಬೆರೆಸಿ ಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ.ಪ್ರಶಾಂತ್ ಪೈಯವರು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹೊಸ ಗುತ್ತಿಗೆದಾರರೊಬ್ಬರು ಉದ್ಯಾನವನದ ಪ್ರಾಣಿಗಳಿಗೆ ಮಾಂಸ ಪೂರೈಕೆಯ ಗುತ್ತಿಗೆ ಪಡೆದಿದ್ದಾರೆ. ಮಾಂಸಕ್ಕೆ ಕೊಳೆತ ಅಥವಾ ವಿಷಪೂರಿತ ಮಾಂಸ ಬೆರೆಸಿ ಹೊಸ ಟೆಂಡರುದಾರರ ಮಾಂಸವನ್ನು ತಿರಸ್ಕರಿಸುವಂತೆ ಮಾಡುವ ಹುನ್ನಾರವನ್ನು ಹಿಂದಿನ ಟೆಂಡರುದಾರ ಮಾಡಿದ್ದಾನೆಂದು ಆತನ ನೌಕರನೊಬ್ಬ…

Read More

ಕೆಂಪುಕಲ್ಲು ಹಾಗೂ ಮರಳಿನ ತೀವ್ರ ಸಮಸ್ಯೆ. ಸದನದಲ್ಲಿ ಸರಕಾರದ ಗಮನ ಸೆಳೆದ ಶಾಸಕ ವೇದವ್ಯಾಸ ಕಾಮತ್.

ಬಿಜೆಪಿ ಹಿರಿಯ ಶಾಸಕ ಸುನಿಲ್ ಕುಮಾರ್ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕರು, ಗಣಿ ಇಲಾಖೆಯ ಅಧಿಕಾರಿಗಳು ಮಂಗಳೂರಿನ ವಸ್ತುಸ್ಥಿತಿ ಅರಿಯದೇ ಬೆಂಗಳೂರಿನಲ್ಲಿ ಕೂತು ಕಾನೂನು ರೂಪಿಸಿದರೆ ಇನ್ನಷ್ಟು ಗೊಂದಲಗಳೇ ಹೆಚ್ಚುವುದಲ್ಲದೇ ಪರಿಹಾರ ಸಿಗುವುದಿಲ್ಲ. ಎಲ್ಲಾ ಅಧಿಕಾರಿಗಳು ಮಂಗಳೂರಿಗೆ ಬಂದು ವಾಸ್ತವ ಅಂಶಗಳನ್ನು ತಿಳಿದುಕೊಂಡು ನೀತಿ ನಿಯಮ ರೂಪಿಸುವಂತಾಗಲಿ. ಜನಪ್ರತಿನಿಧಿಗಳಾದ ನಮ್ಮನ್ನು ಆಹ್ವಾನಿಸದೇ ಈ ಬಗ್ಗೆ ಎರಡು ಮೂರು ಸಭೆಗಳನ್ನು ನಡೆಸಲಾಗಿದೆ. ಕಲ್ಲುಗಳನ್ನು ತೆಗೆಯುವಾಗ ಎಷ್ಟು ಜಾಗಗಳನ್ನು ಲೀಸ್ ಗೆ ಪಡೆಯಲಾಗುತ್ತದೆ, ಅದರಿಂದ ಎಷ್ಟು ಕಲ್ಲು ಉತ್ಪಾದಿಸಲಾಗುತ್ತದೆ, ಅಲ್ಲಿರುವ…

Read More

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ – ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್ ಪುತ್ತೂರು

ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ಶಾಸಕ ಶ್ರೀ ಕಿಶೋರ್ ಕುಮಾರ್ ಅವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾನ್ಯ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ – ಕಾಡು ಪ್ರಾಣಿ ಸಂಘರ್ಷದ ಕುರಿತು ಸೂಕ್ತವಾದ ಕ್ರಮವನ್ನು ಕೈಗೊಂಡು ಈ ಭಾಗದ ಜನರ ಬಹುಮುಖ್ಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು…

Read More

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ದೈವಾರಾಧಕ ಒಕ್ಕೂಟ. ಕರ್ನಾಟಕ ವಿಧಾನ ಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಕೆ.

ಅಖಿಲ ಭಾರತ ದೈವಾರಾಧಾಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ವತಿಯಿಂದ ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಹಾಗೂ ಕ್ಷೇತ್ರದ ಶಾಸಕರಾದ ಯು ಟಿ ಖಾದರ್ ಅವರನ್ನು ಒಕ್ಕೂಟದ ಸದಸ್ಯರು ಭೇಟಿಯಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆ ಕ್ಷೇತ್ರದಲ್ಲಿ ಚಾಕ್ರಿ ಮಾಡುವ ಸುಮಾರು 16 ವರ್ಗಗಳಿವೆ ಹಾಗೂ ಸುಮಾರು 20 ಸಾವಿರದ ಜನ ದೈವಚಕ್ರಿಯನ್ನು ಕುಲ ಕಸುಬು ವಾಗಿ ಅವಲಂಬಿಸಿದ್ದಾರೆ ದೈವಚಾಕ್ರಿ ವರ್ಗವನ್ನು ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಗೆ ಸೇರ್ಪಡಿಸುವುದು. 60…

Read More

ಧರ್ಮಸ್ಥಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆರೋಪಿಗಳ ದಸ್ತಗಿರಿ

ಮಂಗಳೂರು : ಧರ್ಮಸ್ಥಳ ಪಾಂಗಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಯ ವೇಳೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ:47/2025 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ . ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್ (32),ಸುಹಾಸ್ (22),ಶಶಿಧರ್(30),ಉಜಿರೆ ನಿವಾಸಿ ಖಲಂದರ್ ಪುತ್ತುಮೋನು (42),ಕಳೆಂಜ ನಿವಾಸಿ ಚೇತನ್ (21),ಕಳ್ಮಂಜ ನಿವಾಸಿ ಗುರುಪ್ರಸಾದ್ (19) ಎಂಬವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಪಡಿಸಲಾಗಿದೆ.ನ್ಯಾಯಾಲಯವು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Read More

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿ ದೇವಸ್ಥಾನದಲ್ಲಿ ದೇವರಿಗೆ ಪೂಜೆಯ ನಂತರ ದೇವಸ್ಥಾನದ ವಠಾರದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಮಹಾವಿಷ್ಣು ಮೂರ್ತಿ ಯುವಕ ಮಂಡಳಿ ಹಾಗೂ ಊರಿನ ಮಹಿಳಾ ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯಿತು. ಊರಿನ ಮಹಿಳೆಯರು ಬಗೆ ಬಗೆಯ ತಿಂಡಿ ತಿನಿಸು ತಯಾರಿಸಿ ತಂದು ಭಕ್ತರಿಗೆ ಉಣಬಡಿಸಿದರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಸಾಮಾನಿ ಸುಳ್ಯಮೆ ಅವರು ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು…

Read More

ಕೇರಳ ತುಳು ಅಕಾಡೆಮಿ ವತಿಯಿಂದ ಪೈವಳಿಕೆಯಲ್ಲಿ ನಡೆದ ಆಟಿಡೊಂಜಿ ದಿನ ಆಚರಣೆ

“ಕೇರಳ ತುಳು ಅಕಾಡೆಮಿ ವತಿಯಿಂದ ಪೈವಳಿಕೆಯಲ್ಲಿ ನಡೆದ ಆಟಿಡೊಂಜಿ ದಿನ ಆಚರಣೆ ನಿಜವಾಗಿಯೂ ಶ್ಲಾಘನೀಯ, ಮುಂದಿನ ದಿನಗಳಲ್ಲಿ ವಿಶ್ವ ತುಳು ಆಯನ ಮಂಜೇಶ್ವರದಲ್ಲಿ ನಡೆಯಲಿ….” ಪೈವಳಿಕೆಯಲ್ಲಿ ತುಳು ಅಕಾಡೆಮಿ ಕಾರ್ಯಕ್ರಮ “”ಆಟಿಡೊಂಜಿ ದಿನ ” ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಂಜೇಶ್ವರ ಶಾಸಕರಾದ ಎ ಕೆ ಎಂ ಅಶ್ರಫ್ ನುಡಿದರು. ಪೈವಳಿಕೆಯಲ್ಲಿ ಕೇರಳ ತುಳು ಅಕಾಡೆಮಿಯ ವತಿಯಿಂದ (10-8-2025 ) ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾ ಮಂಜೇಶ್ವರ MLA AKM ಅಶ್ರಫ್, ಸಮಾಜದ ಸ್ವಾಸ್ತ್ಯಕ್ಕೆ ಅನುಕರಣೀಯ ಸಂದೇಶ…

Read More

ಅಗ್ನಿಬ್ರಿಗೇಡ್ ಮಜೀರ್ ಪಳ್ಳ ಮತ್ತು ಕೆ. ಎಂ. ಸಿ ರಕ್ತನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ.

ಮಂಜೇಶ್ವರ: ರಕ್ತದಾನವು ಶ್ರೇಷ್ಠ ದಾನ ವಾಗಿದ್ದು, ನಮ್ಮ ಎಲ್ಲಾ ಸಂಪತ್ತಿಗಿಂತಲೂ ನಮ್ಮ ಸುರಕ್ಷಿತ ಆರೋಗ್ಯದ ಸಂಪತ್ತು ಮುಖ್ಯ ವಾಗಿದೆ. ಇಂದಿನ ಜೀವನ ಶೈಲಿ ಮತ್ತು ಕಲಬೆರಕೆಯ ಆಹಾರ ಸೇವನೆಯೇ ಅನಾರೋಗ್ಯ ಕ್ಕೆ ಕಾರಣವಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತನ್ ಹೇಳಿದ್ದಾರೆ.ಅವರು ಅಗ್ನಿಬ್ರಿಗೇಡ್ ಮಜೀರ್ ಪಳ್ಳ ಮತ್ತು ಕೆ. ಎಂ. ಸಿ ರಕ್ತನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಕೋಳ್ಯೂರು ಆಡಿಟೋರಿಯಂ ನಲ್ಲಿ ಉಧ್ಘಾಟಿಸಿ ಮಾತನಾಡಿದರು. ಅಗ್ನಿಬ್ರಿಗೇಡ್ ಮಜೀರ್ ಪಳ್ಳ ರವರ ಈ ಕಾರ್ಯವು ಸಮಾಜಕ್ಕೆ…

Read More
error: Content is protected !!