Avatar

Shramitha bejja

ಜಾನಪದ ಪರಿಷತ್ತು ಕೇರಳ ರಾಜ್ಯ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಆಯ್ಕೆ

ಕಾಸರಗೋಡು : ಜನಪ್ರಿಯ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಗಳಾದ ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕರ್ನಾಟಕ ದಿಂದ ಯಾ ಹೊರನಾಡಿನಿಂದ ಕಾಸರಗೋಡು ಪ್ರದೇಶಕ್ಕೆ ಬರುವ ಸಾಂಸ್ಕೃತಿಕ ರಾಯಬಾರಿಗಳಿಗೆ “ಉಚಿತ ವಸತಿ ವ್ಯವಸ್ಥೆ “ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಸ್ಥಾಪಕ ಸಂಚಾಲಕರಾಗಿರುವ ಡಾ. ವಾಮನ್ ರಾವ್ ಬೇಕಲರನ್ನು ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಎಸ್ ಬಾಲಾಜಿ…

Read More

ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣೆ

ಉಳ್ಳಾಲ : ತೌಡುಗೋಳಿ ಶ್ರೀ ದುರ್ಗಾ ದೇವಿ ಕ್ಷೇತ್ರ , ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಆಗಸ್ಟ್ 10, ರ ಭಾನುವಾರ ವನಮಹೋತ್ಸವ ಹಾಗೂ ಸಸಿ ವಿತರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಆಗಮಿಸಿದ ಭಕ್ತರಿಗೆ ಮಾಡಿ ಮಾತನಾಡುತ್ತಾ ಗಿಡ ನೆಟ್ಟು ಬಿಡಬಾರದು, ಅದನ್ನು ಪೋಷಣೆಮಾಡಿದರೆ ಅದು ಮುಂದೆ ಹೆಮ್ಮರವಾಗಿ ಬೆಳೆದು ಫಲ ಕೊಡುತ್ತದೆ, ನಮಗೆ ನೆರಳು ಕೊಡುತ್ತದೆ ಮನುಷ್ಯನಿಗೆ ಉಸಿರಾಡಲು ಸ್ವಚ್ಛ ಗಾಳಿಕೊಡುತ್ತದೆ ಈ ಕ್ಷೇತ್ರ…

Read More

ಮುದ್ದುಕಂದ ಕೃಷ್ಣರ ಮೋಹಕ ಲೀಲೆ: ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಗೋಕುಲಾಷ್ಟಮಿ- 2025

ಮಂಗಳೂರು, 10ಆಗಸ್ಟ್ 2025 –ಕೆನರಾ ಹೈ ಸ್ಕೂಲ್ ಅಸೋಸಿಯೇಷನ್, ಮಂಗಳೂರು, ಕೆನರಾ ಸಾಂಸ್ಕೃತಿಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಗೋಕುಲಾಷ್ಟಮಿ-2025 ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆವನ್ನು ಭವ್ಯವಾಗಿ ಆಯೋಜಿಸಲಾಯಿತು. ಭಾರತೀಯ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿ ಹಾಗೂ ಯುವ ಸಮುದಾಯದಲ್ಲಿ ಬೆಳೆಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಟಿವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೆನರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ವಾಸುದೇವ ಕಾಮತ್ ಉದ್ಘಾಟಿಸಿದರು….

Read More

ಶಕ್ತಿನಗರದ ನಾಲ್ಯಪದವಿನಲ್ಲಿ ಆಟೋ ರಿಕ್ಷಾ ಸ್ಟ್ಯಾಂಡ್ ಉದ್ಘಾಟನಾ ಕಾರ್ಯಕ್ರಮ.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ 21ನೇ ಪದವು ಪಶ್ಚಿಮ ವಾರ್ಡಿನ ಶಕ್ತಿನಗರದ ನಾಲ್ಯಪದವಿನಲ್ಲಿ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಅವರ ಸಂಪೂರ್ಣ ಸಹಕಾರದಿಂದ ನಿರ್ಮಾಣಗೊಂಡ ಆಟೋ ರಿಕ್ಷಾ ಸ್ಟ್ಯಾಂಡ್ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ದಿನನಿತ್ಯ ದುಡಿಯುವ ಆಟೋ ಚಾಲಕರದ್ದು ಶ್ರಮಿಕ ವರ್ಗವಾಗಿದ್ದು ಅವರುಗಳು ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುತ್ತಾರೆ. ತಾವು ಬಿಸಿಲಲ್ಲಿದ್ದರೂ ತಮ್ಮ ಆಟೋಗಳು ನೆರಳಲ್ಲಿ ಇರಬೇಕು ಎಂದು ಬಯಸುವ ಅವರಿಗೆ ಈ ನೂತನ ರಿಕ್ಷಾ ಪಾರ್ಕ್ ಉಪಯೋಗವಾಗಲಿದೆ. ಸಾರ್ವಜನಿಕರಿಗೆ ಅತ್ಯುತ್ತಮ…

Read More

ಈಜು ಪಟು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದ ಕೆ. ಚಂದ್ರಶೇಖರ್ ರೈ ದುರಂತ ಸಾವು

ಈಜುಕೊಳದಲ್ಲಿ ಮುಳುಗಿ ಕೋಚ್, ಲೈಫ್‌ಗಾರ್ಡ್ ಸಾವನ್ನಪ್ಪಿದ ಘಟನೆ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ರವಿವಾರ ಘಟನೆ ನಡೆದಿದೆ . ಮೃತರನ್ನು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಎಂದು ಗುರುತಿಸಲಾಗಿದೆ. ನಿರ್ವಹಣೆ ಕೆಲಸಗಳು ನಡೆಯುತ್ತಿದ್ದರಿಂದ ಭಾನುವಾರ ಈಜುಕೊಳಕ್ಕೆ ರಜೆ ಇತ್ತು. ಈ ಸಮಯದಲ್ಲಿ ಈಜಲು ನೀರಿಗಿಳಿದ ಅವರು ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಕೆ. ಚಂದ್ರಶೇಖರ್ ರೈ ಅವರು 2023 ರಲ್ಲಿ ಈಜುಕೊಳದ ನೀರಿನೊಳಗೆ ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ ಎಂಬ ಸ್ಟಂಟ್ ಮಾಡಿ ‘ವರ್ಲ್ಡ್ ವೈಡ್…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ಅಡ್ಕತ್ತಬೈಲು ಕಾರ್ಯ ಕ್ಷೇತ್ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವಲಯದ ಅಡ್ಕತ್ತಬೈಲು ಕಾರ್ಯ ಕ್ಷೇತ್ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಇತೀಚೆಗೆ ನಡೆಯಿತ್ತು . ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ಶ್ರೀ ದಿನೇಶ್ ಅವರು ದೇವಸ್ಥಾನದ ವಠಾರ ಸ್ವಚ್ಛತಾ ಇದ್ರೆ ಬರುವ ಭಕ್ತರ ಮನಸ್ಸಿಗೆ ನೆಮ್ಮದಿ , ಶಾಂತಿಯನ್ನ ನೀಡುತ್ತದೆ ಎoದು ತಿಳಿಸುತ್ತಾ , ತಾಲೂಕಿನಲ್ಲಿ ಪ್ರಥಮವಾಗಿ ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಕಾಸರಗೋಡು ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷರಾದ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ .ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವಲಯದ ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಶ್ರೀ ಗೋಪಾಲಕೃಷ್ಣ ಶಾಲೆ ಕೂಡ್ಲುನಲ್ಲಿ ನಿನ್ನೆ ನಡೆಯಿತ್ತು . ಕೂಡ್ಲು ಶಾಲಾ ಮುಖ್ಯೋಪಾಧ್ಯಾರಾದ ಶ್ರೀಮತಿ ಶ್ರೀಜಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು . ಕೂಡ್ಲು ಶಾಲೆಯ PTA ಅಧ್ಯಕ್ಷರಾದ ಶ್ರೀ ಶ್ರೀಧರ ಅಧ್ಯಕ್ಷ ಸ್ಥಾನ ವಹಿಸಿದರು . ಎಕ್ಸೈಸಸ್ ಆಫೀಸರ್ ಶ್ರೀ ಕಣ್ಣನ್ ಕುಂಞಿ ಅವರು ದುಶ್ಟಟಗಳ ಬಗ್ಗೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ…

Read More

ಸರ್ಕಾರದ ಬೊಕ್ಕಸದಿಂದ ಪಿಂಚಣಿ ಕೊಡಿ. ಜನರ ಜೇಬಿನಿಂದ ಅಲ್ಲ :- ಶಾಸಕ ಕಾಮತ್

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಮುಚ್ಚಿಕೊಳ್ಳಲು ಪ್ರಯತ್ನಿಸಿ, “ಆ ನಿರ್ಧಾರ ನಮ್ಮದಲ್ಲ, ಹಿಂದಿನ ಸರ್ಕಾರದ್ದು” ಎಂದು ಬಾಲಿಶ ಹೇಳಿಕೆ ನೀಡಿ ಜನತೆಯ ಮುಂದೆ ಇನ್ನಷ್ಟು ಬೆತ್ತಲಾಗುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ ಹೆಸರಿನಲ್ಲಿ ಒಂದೇ ಒಂದು…

Read More

ಮಂಜೇಶ್ವರ: ಗ್ರಾಮ ಪಂಚಾಯತ್ ನ ನೂತನ ಕಾಂಪ್ಲೆಕ್ಸ್‌ ಗೆ ಶಂಕುಸ್ಥಾಪನೆ

ಮಂಜೇಶ್ವರ: ಮಂಜೇಶ್ವರ ಜನತೆಯ ಬಹುಕಾಲದ ಕನಸು ಇಂದು ಸಾಕಾರಗೊಂಡಿದೆ! ಮಂಜೇಶ್ವರ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸದಸ್ಯರ ಬಹುದಿನಗಳ ನಿರೀಕ್ಷೆಯಾದ ನೂತನ ಪಂಚಾಯತ್ ಕಾಂಪ್ಲೆಕ್ಸ್‌ನ ಶಂಕುಸ್ಥಾಪನೆ ಇಂದು ವಿಜೃಂಭಣೆಯಿಂದ ನೆರವೇರಿತು. ₹1,30,86,923 ರೂಪಾಯಿ ವೆಚ್ಚದಲ್ಲಿ ಈ ಮೂರು ಅಂತಸ್ಥನ ನೂತನ ಕಟ್ಟಡವನ್ನು ಮಂಜೇಶ್ವರ ಮೀನು ಮಾರುಕಟ್ಟೆ ಪರಿಸರದಲ್ಲಿ ನಿರ್ಮಿಸಲಾಗುತ್ತಿದೆ. ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅವರು ನೆರವೇರಿಸಿದರು. ಈ ಕಾಮಗಾರಿ ಪೂರ್ಣಗೊಂಡ ನಂತರ, ಮಂಜೇಶ್ವರ ಗ್ರಾಮ ಪಂಚಾಯತ್‌ಗೆ ಉತ್ತಮ ಕಾರ್ಯನಿರ್ವಹಣೆ…

Read More

ಮಂಜೇಶ್ವರದ ಸಬಾಮರಿಯಂ ದೇರಳಕಟ್ಟೆ ನಿಟ್ಟೆ ಕಾಲೇಜಿನ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ : ಕಾಲೇಜಿನ ಟಾಪರ್ ಆಗಿ ಮೆರಗು.

ಮಂಜೇಶ್ವರ: ಮಂಜೇಶ್ವರ ಗುಡ್ಡಕ್ಕೇರಿ ನಿವಾಸಿ ಮೊಹಮ್ಮದ್ ಎಂ ಪಿ ಹಾಗೂ ಸಪ್ರೀನಾ ದಂಪತಿಗಳ ಪುತ್ರಿ ಸಬಾ ಮರಿಯಂ ದೇರಳಕಟ್ಟೆ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ನಿಟ್ಟೆ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವೈದ್ಯಕೀಯ ಚಿತ್ರಣ ತಂತ್ರಜ್ಞಾನ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಸಬಾ ಮರಿಯಂ ಅವರ ಈ ಸಾಧನೆಗೆ ಪಠ್ಯ ಮತ್ತು ಪ್ರಯೋಗಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಶ್ರಮದ ಫಲ ಎಂದು ಕಾಲೇಜಿನ ಪ್ರಾಧ್ಯಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಟ್ಟೆ ಸಂಸ್ಥೆಯು…

Read More
error: Content is protected !!