ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲು . ಉಸಿರುಗಟ್ಟಿಸಿ ಕೊಂದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿ ಬಂಧನ

ಮಂಗಳೂರು :ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲಾಗಿದ್ದು, ಉಸಿರುಗಟ್ಟಿಸಿ ಕೊಂದಿದ್ದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಳನ್ನು ಕೊಂದಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶರ್ಮಿಳಾ ಕಳೆದ ವಾರ ಬೆಂಗಳೂರಿನ ತಮ್ಮ ಫ್ಲಾಟ್‌ನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಮೊದಲು ಶಂಕಿಸಲಾಗಿತ್ತು. ಶರ್ಮಿಳಾ ಅವಿವಾಹಿತೆಯಾಗಿದ್ದು ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದಲ್ಲಿ ಎರಡು ಬೆಡ್ರೂಮ್ ಫ್ಲಾಟ್‌ನಲ್ಲಿ ವಾಸವಿದ್ದರು. ಬೆಂಗಳೂರಿನ ಪ್ರಮುಖ…

Read More

“ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮಂಗಳೂರಿನ ಕಾವೂರಿನಲ್ಲಿ ನಾಲ್ವರು ವಿರುದ್ಧ ಪ್ರಕರಣ”

ಮಂಗಳೂರು:ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಆರೋಪಿಸಿ ದಾಖಲೆ ತೋರಿಸು ಎಂದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ತಾನು ಬಾಂಗ್ಲಾದೇಶಿ ಅಲ್ಲ ಎಂದು ಹೇಳಿದಾಗಲೂ ಅವನ ತಲೆಯ ಮೇಲೆ…

Read More

ಜನವರಿ 13 ರಿಂದ 22 ರ ತನಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ , 140 ಕ್ಕೂ ಅಧಿಕ ತಂಡಗಳು, 3೦೦೦ ಅಧಿಕ ಕಲಾವಿದರು ಭಾಗಿಯಾಗುವ ನಿರೀಕ್ಷೆ … !

ಮಂಗಳೂರು:ಮಲ್ಲಿಕಾ ಕಲಾ ಕಲಾವೃಂದವು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ದೇವಳದ ನೂತನ ವೇದಿಕೆಯಲ್ಲಿ 76ನೇ ವರ್ಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವು ಜನವರಿ 13 ರಿಂದ 22 ರ ತನಕ 10 ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯಧ್ಯಕ್ಷರಾದ ಸುಧಾಕರ್ ರಾವ್ ಪೇಜಾವರ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , 10 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 140 ಕ್ಕೂ ಅಧಿಕ ತಂಡಗಳು 3೦೦೦ ಅಧಿಕ…

Read More

ಅಯ್ಯಪ್ಪ ಸ್ವಾಮಿಗಳ ಪೂಜೆ ವೇಳೆ ದನಕ್ಕೆ ಚೂರಿ ಇರಿತ ಪ್ರಕರಣ:ರಸ್ತೆಗೆ ದನ ಬಿಟ್ಟವರ ಮೇಲೂ ಸುಮೊಟೋ ಕೇಸು

ಮಂಗಳೂರು :ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯ ಚರುಮುರಿ ಸ್ಟಾಲ್ ಬಳಿ ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿದ ಪ್ರಕರಣದಲ್ಲಿ ರಸ್ತೆಗೆ ದನ ಬಿಟ್ಟವರ ಮೇಲೂ ಸುಮೊಟೋ ಕೇಸು ದಾಖಲಾಗಿದೆ.ಎಡಪದವು ಬಳಿಯ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಾಲಾಧಾರಿಗಳ ಪೂಜಾ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಚರುಮುರಿ ಹಾಕಿದ್ದು ಈ ವೇಳೆ ಅಲ್ಲಿಗೆ ಬಂದ ದನದ ಮುಖಕ್ಕೆ ಚೂರಿಯಿಂದ ಇರಿದ ಘಟನೆ ನಡೆದಿತ್ತು. ಚರುಮುರಿ ಸ್ಟಾಲ್ ಇರಿಸಿದ್ದಾಗ ಅಲ್ಲಿಗೆ ದನವೊಂದು ಬಂದಿದ್ದು ಟೊಮೆಟೋ ತಿನ್ನಲು ಮುಂದಾಗಿತ್ತು….

Read More

ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೊಜನ ” ಕಾರ್ಯಕ್ರಮ

ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೊಜನ ” ಕಾರ್ಯಕ್ರಮ ನಡೆಯಿತು.ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಮಾಣಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆಯ ಮೊದಲು ಮಾಣಿ ಗ್ರಾಮದ ಉಳ್ಳಾಲ್ತಿ  ದೇವಸ್ಥಾನದ ವಠಾರದಲ್ಲಿ ಹಾಗೂ ಅರೆಬೆಟ್ಟುವಿನಲ್ಲಿ ಒಂದೇ ದಿನ ವನಭೊಜನ ಕಾರ್ಯಕ್ರಮ ನಡೆಯುತ್ತದೆ. ಅರೆಬೆಟ್ಟು ಗುತ್ತುವಿನಲ್ಲಿ ವರ್ಷಂಪ್ರತಿ ಯಂತೆ ಜರಗುವ ಕಂಬಳಕೋರಿಯಂದು ಈ ಎರಡು ಗ್ರಾಮದ ವನಭೋಜನಕ್ಕೆ ದಿನ ನಿಗದಿಯಾಗುತ್ತದೆ.ಅ ಪ್ರಕಾರ ಒಂದೇ ದಿನ ಎರಡು ಕಡೆಗಳಲ್ಲೂ ವನಭೋಜನಕ್ಕೆ ಮೀಸಲಿರಿಸಿದ ಜಾಗದಲ್ಲಿ ಮಾಣಿಗುತ್ತು ಮತ್ತು…

Read More

ಜಿಲ್ಲೆಯ ಬಿಜೆಪಿ ಶಾಸಕರು ಎಸ್ಪಿ ಮತ್ತು ಕಮೀಷನರ್ ನನ್ನು ಎತ್ತಂಗಡಿ ಮಾಡಲು ಆಡಳಿತ ಪಕ್ಷ ಹುನ್ನಾರ ನಡೆಸುತ್ತಿದೆ ಎಂಬ ಹೇಳಿಕೆ ಶುದ್ಧ ಸುಳ್ಳು : ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ

ಮಂಗಳೂರು:ಈ ಜಿಲ್ಲೆಯಲ್ಲಿ ಶಾಂತಿ , ಸಮೃದ್ಧಿ ,ಸ್ಥಾಪನೆಗೆ ಶ್ರಮಿಸುತ್ತಿರುವ ಎಸ್ಪಿ ಮತ್ತು ಕಮೀಷನರ್ ನನ್ನು ಎತ್ತಂಗಡಿ ಮಾಡಲು ಆಡಳಿತ ಪಕ್ಷ ಪ್ರಯತ್ನ ಮಾಡುತ್ತಾ ಇದೆ ಎಂದು ನಮ್ಮ ಜಿಲ್ಲೆಯ ಬಿಜೆಪಿ ಶಾಸಕರು ಅಲ್ಲಿಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ . ಅವರಿಗೆ ನಾನೊಂದು ಸ್ಪಷ್ಟತೆಯನ್ನು ನೀಡಲು ಬಯಸುತ್ತೇನೆ. ಈ ಜಿಲ್ಲೆಯಲ್ಲಿ ಅಶಾಂತಿ ಉಂಟಾದ ಸಮಯದಲ್ಲಿ ದಕ್ಷ ಅಧಿಕಾರಿಗಳನ್ನು ಇಲ್ಲಿಗೆ ಕಳಿಸಿದ್ದು ಸಿದ್ದರಾಮ್ಯರ ನೇತೃತ್ವದ ಸರ್ಕಾರ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ ಸ್ಪಷ್ಟನೆ ನೀಡಿದರು…

Read More

ಜನವರಿ 17 ರಿಂದ 19 ರ ತನಕ ದ ದಾಪರ್ ಎಕ್ಸ್ಪೋ ಚಿತ್ರ ಕಲಾ ಪ್ರದರ್ಶನ…. !

ಮಂಗಳೂರು:ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ಪೋ ನಾಮದ ಚಿತ್ರ ಕಲಾ ಪ್ರದರ್ಶನವು ಜನವರಿ 17 ರಿಂದ 19 ರ ತನಕ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದರಾದ ಉದಯ ಕೃಷ್ಣ ಜಿ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು , ಕಾರ್ಯಕ್ರಮದ ಉದ್ಘಾಟನೆಯು ಜನವರಿ 17 ರಂದು…

Read More

ಬ್ಯಾರಿ ಪರಂಪರೆಯನ್ನು ಎತ್ತಿ ಹಿಡಿಯೋಣ: ಕುಲಪತಿ ಎ.ಎಂ.ಖಾನ್ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಮಂಗಳೂರು,ಜ.10: ಱಬ್ಯಾರಿಱ ಕೇವಲ ಒಂದು ಭಾಷೆಯಲ್ಲ. ಅದು ಸಂಸ್ಕೃತಿಯೂ ಆಗಿದೆ. ಜಾನಪದ ಹಿನ್ನಲೆಯೂ ಅದಕ್ಕಿದೆ. ಹಾಗಾಗಿ ಬ್ಯಾರಿಯನ್ನು ಭಾಷೆ ಮತ್ತು ವ್ಯಾಪಾರ ಪರಿಧಿಗೆ ಸೀಮಿತಗೊಳಿಸದೆ ಬ್ಯಾರಿಗಳ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಎ.ಎಂ.ಖಾನ್ ಅಭಿಪ್ರಾಯಪಟ್ಟರು.ನಗರದ ಹೋಟೆಲ್ ಶ್ರೀನಿವಾಸ್‌ನ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾರಿಗಳ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ವಿಭಿನ್ನವಾಗಿದೆ. ಪ್ರಾದೇಶಿಕ ಭಿನ್ನತೆಯೂ ಇದೆ. ವ್ಯಾಪಾರ, ಉದ್ದಿಮೆಯಲ್ಲೂ…

Read More

ಮಲಯಾಳಂ ಕಡ್ಡಾಯ ಭಾಷಾ ಮಸೂದೆ-2025 ನ್ನು ಸರಕಾರ ಹಿಂದಕ್ಕೆ ಪಡೆಯುವ ಭರವಸೆ ನನಗಿದೆ:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ

ಮಂಗಳೂರು:ಕೇರಳ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಮಲಯಾಳಂ ಕಡ್ಡಾಯ ಭಾಷಾ ಮಸೂದೆ-2025*”ಯನ್ನು ಮರುಪರಿಶೀಲನೆ ನಡೆಸುವುದಾಗಿ ಕೇರಳ ರಾಜ್ಯಪಾಲರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಭರವಸೆ ನೀಡಿದ್ದಾರೆ ಅದಕ್ಕೆ ಅಂಕಿತವನ್ನು ಹಾಕುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ತಿಳಿಸಿದರು. ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದೆ ಈ ಹಿನ್ನೆಲೆಯಲ್ಲಿ ಕಾಸರಗೋಡು…

Read More

ಕೌಟುಂಬಿಕ ಕಥಾ ಹಂದರ “ಹೆಜ್ಜಾಲದ ಬಿಳಲುಗಳು” ಕೃತಿ ಲೋಕಾರ್ಪಣೆ:

ಮಂಗಳೂರು: ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಇದರ ಆಶ್ರಯದಲ್ಲಿ 49 ನೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 10.01.2026 ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು ಇವರ ಹನ್ನೆರಡನೆಯ ಕೃತಿ “ಹೆಜ್ಜಾಲದ ಬಿಳಲುಗಳು” ಕೌಟುಂಬಿಕ ಕಥಾ ಹಂದರವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ.ಮಹಾಬಲ ತಿಲಕ ಮಂಗಳೂರು ಇವರು ಬಿಡುಗಡೆಗೊಳಿಸಿ ಅಮ್ಮನ ಸಾಹಿತ್ಯ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದರು….

Read More
error: Content is protected !!