‘ನೀ ಬಾಂಗ್ಲಾದೇಶದವನಾ’ ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ಹಲ್ಲೆ: ಜೈ ಶ್ರೀರಾಮ್ ಹೇಳುವಂತೆ ಒತ್ತಾಯ

ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ…

Read More

ಅತ್ತಾವರ–ಪಾಂಡೇಶ್ವರ ಪ್ರದೇಶಗಳಲ್ಲಿ ಕೃತಕ ನೆರೆಯ ಶಾಶ್ವತ ಪರಿಹಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಸ್ಥಳ ವೀಕ್ಷಣೆ, ತುರ್ತು ಕ್ರಮಕ್ಕೆ ಸೂಚನೆ

ಮ.ನ.ಪಾ ವ್ಯಾಪ್ತಿಯ ಅತ್ತಾವರ 5ನೇ ಅಡ್ಡ ರಸ್ತೆ, ಪಾಂಡೇಶ್ವರ, ಶಿವನಗರ, ಸುಭಾಷ ನಗರ ಮೊದಲಾದೆಡೆ ಕಳೆದ ಮಳೆಗಾಲದಲ್ಲಿ ಕೃತಕ ನೆರೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು ಅದಕ್ಕೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಎಚ್ಚರವಹಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ರವರು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ನಡೆಸಿದರು. ರಾಜಕಾಲುವೆಯ ನೀರು ಹಾದು ಹೋಗಿ ಹೊಯ್ಗೆ ಬಜಾರ್ ಬಳಿ ನದಿ ಸೇರುವ ಭಾಗದಲ್ಲಿ ನೀರು ಸರಾಗವಾಗಿ ಹರಿಯಲು ಅಡಚಣೆಯಾಗದಂತೆ ತಕ್ಷಣ ಹೂಳೆತ್ತುವ…

Read More

“ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ 2026–27: ಪ್ರಶಾಂತ್ ಪೂಂಜಾಲಕಟ್ಟೆ ಅಧ್ಯಕ್ಷರಾಗಿ ಪದಗ್ರಹಣ”

ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೋಮವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲೆಯ ಪತ್ರಕರ್ತರ ಸಂಘವು ಗ್ರಾಮವಾಸ್ತವ್ಯದಂತಹ ಸಮಾಜಮುಖಿ ಕಾರ್ಯಗಳ ಮೂಲಕ ವಿಶೇಷ ಹೆಸರನ್ನು ಗಳಿಸಿಕೊಂಡಿದ್ದು, ಹಲವು ಸವಾಲುಗಳ ಮಧ್ಯೆ ಎಲ್ಲಾ ಪತ್ರಕರ್ತರ ಸಹಕಾರದೊಂದಿಗೆ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಶಾಂತ್ ಪೂಂಜಾಲಕಟ್ಟೆ ನೇತೃತ್ವದ ಬಂಟ್ವಾಳದ ಸಂಘವು…

Read More

ಬೆಳಗಾವಿಯ ಅಧಿವೇಶದಲ್ಲಿ ಚರ್ಚೆಯಾಗಿದ್ದು ಮುಖ್ಯ ಮಂತ್ರಿ ಬದಲಾವಣೆ ಬಗ್ಗೆ ಹೊರತು , ರಾಜ್ಯದ ಅಭಿವೃದ್ಧಿಯ ಕಾಮಗಾರಿಯ ಬಗ್ಗೆ ಅಲ್ಲ , ಅಲ್ಲಿ ನಡೆದದ್ದು ನಾಮಕಾವಸ್ತೆಯ ಅಧಿವೇಶನ : ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್

ಮಂಗಳೂರು:ಉತ್ತರ ಕರ್ನಾಟಕದ ಬೆಳಗಾವಿಯ ಅಧಿವೇಶದಲ್ಲಿ ರಾಜ್ಯದ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆಯದೆ ಮುಂದಿನ ಮುಖ್ಯಮಂತ್ರಿಗಳು ಯಾರು ಎನ್ನುವುದರ ಬಗ್ಗೆ ಚರ್ಚೆಗಳು ನಡೆದಿದೆ . ಈ ಮೂಲಕ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿದೆ ಎಂದು ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಆರೋಪಿಸಿದ್ದಾರೆ. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿಯ ಕಾಮಗಾರಿಯ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದ ರೈತರ , ಮಹಿಳೆಯರ ಕಲ್ಯಾಣ ಯೋಜನೆಗಳ ಬಗ್ಗೆ…

Read More

ಅಯ್ಯಪ್ಪ ಮಾಲಾಧಾರಿ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿ

ಉಳ್ಳಾಲ : ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಹೃದಯಾಘಾತದಿಂದ ನಿಧನರಾಗಿದ್ದಾರೆ.ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಂದ್ರಹಾಸ್ ಅವರು ಸಹಪಾಠಿ ಅಯ್ಯಪ್ಪ ಮಾಲಾ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಚಂದ್ರಹಾಸ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್…

Read More

ಜನವರಿ 15 ರಂದು ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ

ಮಂಗಳೂರು: ಅನುಪಮ ಮಹಿಳಾ ಮಾಸಿಕವು ತನ್ನ 25ನೇ ವರ್ಷಾಚರಣೆ ಆಚರಿಸುವ ಹೊಸ್ತಿನಲ್ಲಿದ್ದು ಈ ಪ್ರಯುಕ್ತ ಬೆಳ್ಳಿ ಹಬ್ಬವನ್ನು ಮಂಗಳೂರಿನ ಪುರಭವನದಲ್ಲಿ ಜನವರಿ 15 ರಂದು ಬೆಳಿಗ್ಗೆ 10 ರಿಂದ ಮಹಿಳೆಯರ ಬೃಹತ್ ಓದುಗರ ಸಮಾವೇಶವನ್ನಾಗಿ ಸಂಭ್ರಮಿಸಲಾಗುವುದೆಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 25ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದ್ದು . ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ…

Read More

“ಪುತ್ತೂರು ಕ್ಷೇತ್ರಕ್ಕೆ ಮೂರು ವರ್ಷದಲ್ಲಿ ₹2709 ಕೋಟಿ ಅನುದಾನ: 629 ಕಾಮಗಾರಿಗಳಿಗೆ ಟೆಂಡರ್, 20 ದಿನದಲ್ಲಿ ಕೆಲಸ ಆರಂಭ – ಶಾಸಕ ಅಶೋಕ್ ರೈ”

ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 23-24ರಲ್ಲಿ ರೂ.1479.59 ಕೋಟಿ, 24-25ರಲ್ಲಿ 529 ಕೋಟಿ ಹಾಗೂ 25-26ರ ಜನವರಿ ತನಕ 251.06 ಕೋಟಿ ಸನುದಾನವೂ ಸೇರಿ ಒಟ್ಟು ರೂ.2259.56 ಕೋಟಿ ಅನುದಾನ ಮಂಜೂರುಗೊಂಡಿದೆ. ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಶಾಸಕರಿಗೆ ನೀಡಿದ ರೂ.50 ಕೋಟಿಯಲ್ಲಿ 550 ರಸ್ತೆ ಕಾಮಗಾರಿ, 79 ಶ್ರದ್ಧಾಕೇಂದ್ರಗಳು ಸೇರಿದಂತೆ ಒಟ್ಟು 629 ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈ ಕಾಮಗಾರಿಗಳ ನಿರ್ವಹಣೆಗೆ 5 ಗುತ್ತಿಗೆದಾರರಿಗೆ ತಲಾ 10 ಕೋಟಿಯಂತೆ ವಿಭಾಗಿಸಿ ನೀಡಲಾಗಿದೆ. ಈಗಾಗಲೇ ಶೇ.13 ಅನುದಾನ ಮಂಜೂರುಗೊಂಡಿದೆ….

Read More

ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲು . ಉಸಿರುಗಟ್ಟಿಸಿ ಕೊಂದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿ ಬಂಧನ

ಮಂಗಳೂರು :ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲಾಗಿದ್ದು, ಉಸಿರುಗಟ್ಟಿಸಿ ಕೊಂದಿದ್ದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಳನ್ನು ಕೊಂದಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶರ್ಮಿಳಾ ಕಳೆದ ವಾರ ಬೆಂಗಳೂರಿನ ತಮ್ಮ ಫ್ಲಾಟ್‌ನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಮೊದಲು ಶಂಕಿಸಲಾಗಿತ್ತು. ಶರ್ಮಿಳಾ ಅವಿವಾಹಿತೆಯಾಗಿದ್ದು ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದಲ್ಲಿ ಎರಡು ಬೆಡ್ರೂಮ್ ಫ್ಲಾಟ್‌ನಲ್ಲಿ ವಾಸವಿದ್ದರು. ಬೆಂಗಳೂರಿನ ಪ್ರಮುಖ…

Read More

“ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮಂಗಳೂರಿನ ಕಾವೂರಿನಲ್ಲಿ ನಾಲ್ವರು ವಿರುದ್ಧ ಪ್ರಕರಣ”

ಮಂಗಳೂರು:ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಆರೋಪಿಸಿ ದಾಖಲೆ ತೋರಿಸು ಎಂದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ತಾನು ಬಾಂಗ್ಲಾದೇಶಿ ಅಲ್ಲ ಎಂದು ಹೇಳಿದಾಗಲೂ ಅವನ ತಲೆಯ ಮೇಲೆ…

Read More

ಜನವರಿ 13 ರಿಂದ 22 ರ ತನಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ , 140 ಕ್ಕೂ ಅಧಿಕ ತಂಡಗಳು, 3೦೦೦ ಅಧಿಕ ಕಲಾವಿದರು ಭಾಗಿಯಾಗುವ ನಿರೀಕ್ಷೆ … !

ಮಂಗಳೂರು:ಮಲ್ಲಿಕಾ ಕಲಾ ಕಲಾವೃಂದವು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ದೇವಳದ ನೂತನ ವೇದಿಕೆಯಲ್ಲಿ 76ನೇ ವರ್ಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವು ಜನವರಿ 13 ರಿಂದ 22 ರ ತನಕ 10 ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯಧ್ಯಕ್ಷರಾದ ಸುಧಾಕರ್ ರಾವ್ ಪೇಜಾವರ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , 10 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 140 ಕ್ಕೂ ಅಧಿಕ ತಂಡಗಳು 3೦೦೦ ಅಧಿಕ…

Read More
error: Content is protected !!