ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರ ಕಾಂ.ಸಂಜೀವ ಬಂಗೇರ ಇನ್ನಿಲ್ಲ….

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರೂ,CPIM ಪಕ್ಷದ ಮಾಜಿ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಕಾಂ.ಸಂಜೀವ ಬಂಗೇರ(87ವರ್ಷ) ರವರು ನಿನ್ನೆ ತಡರಾತ್ರಿ ನಿಧನರಾದರು. ಯೌವ್ವನದಲ್ಲಿ ಬಂಟ್ವಾಳ ಪೇಟೆಯಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಸಂಜೀವ ಬಂಗೇರರವರಿಗೆ ಬಡವರ ಕಾರ್ಮಿಕರ ಶೋಷಿತ ಜನತೆಯ ಬಗ್ಗೆ ಅಪಾರವಾದ ಕಾಳಜಿ.ಈ ಕಾರಣದಿಂದಲೇ ಸಂಜೀವ ಬಂಗೇರರವರಿಗೆ ತನ್ನೆದುರು ಬೀಡಿ ಕಾರ್ಮಿಕರಿಗೆ ಆಗುವಂತಹ ಅನ್ಯಾಯ ಶೋಷಣೆಯನ್ನು ಸಹಿಸಲು ಸಾಧ್ಯವಾಗದೆ ಅವರನ್ನು ಸಂಘಟಿಸಲು ಮುಂದಾದರು.ಆ ಮೂಲಕ ಬೀಡಿ ಕಾರ್ಮಿಕರ ಕಣ್ಮಣಿಯಾಗಿ ಮೆರೆದು ಜಿಲ್ಲೆಯಾದ್ಯಂತ ಬೀಡಿ ಕಾರ್ಮಿಕರನ್ನು ಸಂಘಟಿಸಲು…

Read More

ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳ ನೂತನ ಮಹಾದ್ವಾರ ಲೋಕಾರ್ಪಣೆ … !

ಮಂಗಳೂರು:ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳು ಹಾಗೂ ಅಮೀನ್ ಕುಟುಂಬಿಕರ ಕಂಚಿದೀಪಾಲೆ ಮೂಲಸ್ಥಾನದಲ್ಲಿ ಗೀತಾ ಸುಕುಮಾರನ್ ಅವರ ಕೊಡುಗೆಯಲ್ಲಿ ನಿರ್ಮಾಣವಾದ ನೂತನ ಮಹಾದ್ವಾರವನ್ನು ಕದ್ರಿ ಯೋಗೀಶ್ವರ ಪೀಠಾಧಿಪತಿಗಳಾದ ಶ್ರೀ ನಿರ್ಮಾಲಾನಾಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು , ದೇವಾಲಯಗಳು , ಮಠಗಳು , ಮಂದಿರಗಳು ಶಕ್ತಿ ಕೇಂದ್ರಗಳ ಆರಾಧನೆ ತಾಣವಾಗಿದೆ . ಇವುಗಳು ಧರ್ಮ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತದೆ . ಧರ್ಮದ ರಕ್ಷಣೆಯ ಉದ್ದೇಶದಿಂದ ಇಂತಹಾ…

Read More

ತುಳು ಕ್ರೈಂ ಥ್ರಿಲ್ಲರ್ ‘ಕಟ್ಟೆಮಾರ್’ ಟ್ರೇಲರ್‌ಗೆ ಅದ್ಧೂರಿ ಬಿಡುಗಡೆ: ಜ.23ರಂದು ತೆರೆಗೆ

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಸಂಸ್ಥೆಯ ಲಂಚುಲಾಲ್ ಕೆ.ಎಸ್. ನಿರ್ಮಾಣದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ತುಳು ಸಿನಿಮಾ ‘ಕಟ್ಟೆಮಾರ್’ ಇದೇ ಜನವರಿ 23ರಂದು ತೆರೆಗೆ ಬರಲಿದ್ದು, ಅದರ ಟ್ರೇಲರ್ ಬಿಡುಗಡೆ ಸಮಾರಂಭ ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಲಂಚುಲಾಲ್ ಕೆ.ಎಸ್., “ಜನವರಿ 23ರಂದು ಕಟ್ಟೆಮಾರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳಿಗಿಂತ ತುಳು ಚಿತ್ರವೂ ಯಾವುದಕ್ಕೂ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ಭರ್ಜರಿಯಾಗಿ ನಿರ್ಮಿಸಿದ್ದೇವೆ. ತುಳು…

Read More

ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

ಮಂಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ಜನವರಿ 18ರಂದು ಯುವಶಕ್ತಿಯ ಸಾಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ, ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ. ಜನವರಿ 18 ರಂದು ಡಾ. ಬಿ.ಆರ್ ಅಂಬೇಡ್ಕರ್…

Read More

ಪ್ರತಿಷ್ಠಿತ ಶ್ರೀ ಕುಂದೇಶ್ವರ ಪ್ರಶಸ್ತಿ ಪ್ರಕಟ … !

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ರಂಗದ ಅಗ್ರಮಾನ್ಯ ಮಹಿಳಾ ಭಾಗವತೆಯಾದ ಕಾವ್ಯಶ್ರೀ ಅಜೇರನ್ನು ಮತ್ತು ರಂಗಭೂಮಿ ಕ್ಷೇತ್ರಕ್ಕೆ ನೀಡಲಾಗುವ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಹಿರಿಯ ಕಲಾವಿದ ಉಮೇಶ್ ಮಿಜಾರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು , ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿ, ಯಕ್ಷಗಾನ ಮೇಳ…

Read More

ರಸ್ತೆ ವಿಚಾರದ ಗಲಾಟೆ ಹೊಡೆದಾಟಕ್ಕೆ ತಿರುಗು; ಬಿಸಿರೋಡಿನಲ್ಲಿ ಕುಟುಂಬದವರು ಪತ್ರಿಕಾಗೋಷ್ಠಿ ಮೂಲಕ ರಕ್ಷಣೆ ಮನವಿ

ಬಂಟ್ವಾಳ: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಇದೀಗ ಹೊಡೆದಾಟದವರೆಗೆ ತಲುಪಿದ್ದು ನಮಗೆ ರಕ್ಷಣೆ ಕೊಡಿ ಎಂದು ಕುಟುಂಬವೊಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಕುಟುಂಬದ ಪರವಾಗಿ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಣ್ಣಂಗಳ ನಾಗರಾಜ ಮತ್ತು ಸುರೇಶ್ ನಾಯ್ಕ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಾಗರಾಜ…

Read More

ಅನಿಲ ಸಾಗಾಟದ ಟ್ಯಾಂಕರ್‌ಗೆ ಟೆಂಪೋ ಡಿಕ್ಕಿ; ಚಾಲಕ ಗಾಯ, ಅನಿಲ ಸೋರಿಕೆ ಭೀತಿಯಲ್ಲಿ ರಕ್ಷಣೆ ಕಾರ್ಯಾಚರಣೆ

ಬಂಟ್ವಾಳ : ಖಾಸಗಿ ಸಂಸ್ಥೆಗೆ ಸೇರಿದ ಟೆಂಪೋ ವಾಹನವೊಂದು ಅನಿಲ‌ ಸಾಗಾಟದ ಟ್ಯಾಂಕರ್ ವಾಹನಕ್ಕೆ‌ ಹಿಂಬದಿಯಿಂದ‌ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ಫ್ಲೈ ಓವರ್ ನಲ್ಲಿ‌ ಅತಿವೇಗದಿಂದ ಬಂದ‌ ಟೆಂಪೋ ವಾಹನ‌ ಸಮುದ್ರ ಹೋಟೆಲ್ ಬಳಿ ಚಾಲಕನ‌ ನಿಯಂತ್ರಣ ತಪ್ಪಿ‌ ಟ್ಯಾಂಕರ್ ಗೆ‌‌ ಹಿಂದಿನಿಂದ‌ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಕೈ ವಾಹನಗಳ‌ನಡುವೆ ಸಿಲುಕಿಕೊಂಡಿತ್ತು. ಗ್ಯಾಸ್ ಟ್ಯಾಂಕರ್ ಗೆ ವಾಹನ‌‌ ಡಿಕ್ಕಿಯಾಗಿದ್ದರಿಂದ, ಅನಿಲ‌ ಸೋರಿಕೆಯ ಭಯದಿಂದ‌ ಯಾರೂ ವಾಹನಗಳ‌…

Read More

ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಪುತ್ತೂರು: ಆಂದ್ರಪ್ರದೇಶದಲ್ಲಿ ಜನವರಿ 15 ರಿಂದ ನಡೆಯಲಿರುವ ಜ್ಯೂನಿಯರ್ ವಿಭಾಗ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ತಾಲೂಕಿನ ಕುಂಬ್ರದ ಯುವಕ ಅದೀಶ್ ಶೆಟ್ಟಿ ಆಯ್ಕೆಯಾಗಿರುವರು. ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವರು. ಪ್ರಸ್ತುತ ಇವರು ಮಂಗಳೂರಿನ ತೃಷಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಆಗಿದ್ದು, ತನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಶಕ್ತಿ ಕಾಲೇಜ್ ನಲ್ಲಿ , ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೂ ಮತ್ತು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ವಿದ್ಯಾರ್ಥಿಯಾಗಿರುವರು….

Read More

ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿ ಪೂರ್ಣ; ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಉದ್ಘಾಟನೆ

ಮ.ನ.ಪಾ ವ್ಯಾಪ್ತಿಯ ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ರವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. ನಂತರ ಮಾತನಾಡಿದ ಶಾಸಕರು, ಚಿಕಿತ್ಸೆಗಾಗಿ ಇಲ್ಲಿ ಬರುವ ಎಲ್ಲಾ ರೋಗಿಗಳಿಗೆ ಉತ್ತಮ ಸೌಲಭ್ಯ ನೀಡುವಂತಾಗಲು ನೂತನ ಕೊಠಡಿ ಹಾಗೂ ಸುಸಜ್ಜಿತ ಮೇಲ್ಚಾವಣಿಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಸಹಾಯದಿಂದ ನಿರ್ಮಿಸಲಾಗಿದ್ದು ಸ್ಥಳೀಯ ನಿವಾಸಿ ಹಾಗೂ ನನ್ನ ಶಾಲಾ ದಿನಗಳ ಶಿಕ್ಷಕಿ ಲತಾ ಟೀಚರ್ ರವರು ಉದ್ಘಾಟನೆಗೊಳಿಸಿರುವುದು ಅತ್ಯಂತ ಸಂತೋಷ ತಂದಿದೆ. ಅಳಪೆ, ಕಣ್ಣೂರು, ಮರೋಳಿ, ಬಜಾಲ್, ಶಕ್ತಿನಗರ,…

Read More

‘ನೀ ಬಾಂಗ್ಲಾದೇಶದವನಾ’ ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ಹಲ್ಲೆ: ಜೈ ಶ್ರೀರಾಮ್ ಹೇಳುವಂತೆ ಒತ್ತಾಯ

ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ…

Read More
error: Content is protected !!