ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

ಮಂಗಳೂರು: ಶೃಂಗೇರಿ ಶಾರದಾ ಪೀಠದ ವೈಭವ, ವೀಣೆಯ ನುಡಿಸುತ್ತಾ ಮುಗುಳ್ನಗುವ ಕಂದಮ್ಮಗಳು, ಕೈಯೊಲು ತಾವರೆ, ಪುಸ್ತಿಕೆಗಳಿಂದ ಶೋಭಿಸುವ ವಿದ್ಯಾಧಿದೇವತೆ. ಈ ಮಧ್ಯೆ ನವರೂಪಗಳಲ್ಲಿ ಶೋಭಿಸುವ ನವದುರ್ಗೆಯರು. ಇದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ಬುಧವಾರ ನಡೆದ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆಯ ಝಲಕ್.ಪಿ.ಕೆ.ಲೋಹಿತ್ ಸ್ಮರಣಾರ್ಥ ಪಿ.ಕೆ ದೂಜ ಪೂಜಾರಿ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಆಭರಣ ಜುವೆಲರ್ಸ್ ಮತ್ತು ಅದಿರಾ ಪ್ರಾಪರ್ಟಿಸ್ ಸಹಕಾರದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಮಂದಿ…

Read More

ಧರ್ಮಸ್ಥಳ ಪ್ರಕರಣ. ನಾವು ಅವರ ಪರ, ಇವರ ಪರ ಇಲ್ಲ. ನಾವು ಸತ್ಯದ ಪರ ಇದ್ದೇವೆ-; ಪ್ರಿಯಾಂಕ್ ಖರ್ಗೆ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ಆರೋಪದ ಕುರಿತು ತನಿಖೆ ಮಾಡಲೆಂದು ನಾವೇ ಎಸ್‌ಐಟಿ ರಚನೆ ಮಾಡಿದ್ದು. ನಾವು ಅವರ ಪರ, ಇವರ ಪರ ಇಲ್ಲ. ನಾವು ಸತ್ಯದ ಪರ ಇದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಂಗಳೂರಿನಲ್ಲಿ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇಂದು ಆಗಮಿಸಿದ್ದ ಅವರನ್ನು ಸುದ್ದಿಗಾರರು ಎಸ್‌ಐಟಿ ತನಿಖೆ ಕುರಿತಂತೆ ಪ್ರಶ್ನಿಸಿದಾಗ ಈ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣವನ್ನು ತನಿಖೆ…

Read More

ಮಂಗಳೂರು ಚಾಲಕರು ಸಮುದಾಯ ಚಾಲಿತ ಟ್ಯಾಕ್ಸಿ ಪರಿಹಾರವಾಗಿ ಟೌನೆರ್ ಅಪ್ಲಿಕೇಶನ್.

ಮಂಗಳೂರಿನ ಚಾಲಕರ ಸಮುದಾಯ, ಪೂರ್ಣೇಶ್ ಮತ್ತು ಸಂದೀಪ್ ಡಿಸಿಲ್ವಾ ಮತ್ತು ಅವರ ತಂಡದ ಪ್ರತಿನಿಧಿತ್ವದಲ್ಲಿ, ಸ್ಥಳೀಯ ಟ್ಯಾಕ್ಸಿ ಸೇವೆಗಳಿಗೆ ಆದ್ಯತೆಯ ಡಿಜಿಟಲ್ ಪರಿಹಾರವಾಗಿ ಟೌನೆರ್ ಮೊಬೈಲ್ ಟ್ಯಾಕ್ಸಿ ಮೀಟರ್ ಅಪ್ಲಿಕೇಶನ್ ಇಂದು ಅಳವಡಿಸಿಕೊಳ್ಳಲಿದೆ ಎಂದು ಒನ್ ಇಂಡಿಯಾ ಒನ್ ಟ್ಯಾಕ್ಸಿ ಇದರ ಕಾರ್ಯ ನಿರ್ವಹಣಾ ಅಧಿಕಾರಿಯಾದ ರಘು ತಿಳಿಸಿದರು . ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ ಅವರು , ಕಳೆದ ಒಂದು ತಿಂಗಳಿಂದ ಅಪ್ಲಿಕೇಶನ್ನನ್ನು ಪರಿಶೀಲಿಸಿದ ಬಳಿಕ, ಚಾಲಕರು ಇದರ ನ್ಯಾಯವಾದ ಬೆಲೆ ನಿಗದಿ, ಪಾರದರ್ಶಕತೆ…

Read More

ಶರಧಿ ಪ್ರತಿಷ್ಠಾನದಿಂದ ಮುದ್ದು ಶಾರದೆ, ನವದುರ್ಗೆ ವೇಷ ಸ್ಪರ್ಧೆ ಸೆಪ್ಟೆಂಬರ್ 28ರಂದು.

ಮಂಗಳೂರು: ಕರಾವಳಿಯಲ್ಲಿ ಆಚರಿಸಲಾಗುವ ನವರಾತ್ರಿ ಉತ್ಸವ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇಂತಹ ಪುಣ್ಯ ಪರ್ವಕಾಲ ನವರಾತ್ರಿಯ ಶುಭ ಸಂದರ್ಭದಲ್ಲಿ ತುಳುವರ ಸಂಸ್ಕೃತಿ, ಕಲೆ ಹಾಗೂ ಹಿಂದುತ್ವದ ಅರಿವು ಮೂಡಿಸುವ ಉದ್ದೇಶದಿಂದ ದಸರಾ ನವರಾತ್ರಿಯ ಸಂದರ್ಭದಲ್ಲಿ ಮಂಗಳೂರಿನ ಶರಧಿ ಪ್ರತಿಷ್ಠಾನವು ಸೆಪ್ಟೆಂಬರ್ 28 ರಂದು ಶಾರದಾ ವಿದ್ಯಾಲಯ,ಮಂಗಳೂರು ಇಲ್ಲಿ ಮೂರನೇ ವರ್ಷದ ಅದ್ದೂರಿ ಮಕ್ಕಳ ಮುದ್ದು ಶಾರದೆ ಮತ್ತು ನವದುರ್ಗೆಯರ ವೇಷ ಸ್ಪರ್ಧೆಯು 1 ರಿಂದ 14 ತನಕದ ವಯೋಮಾನ ಹೊಂದಿರುವ ಮಕ್ಕಳಿಗೆ ಆಯೋಜಿಸಲಾಗುವುದೆಂದು ಆಯೋಜಿಸಲಿದೆ ಎಂದು…

Read More

ಶ್ರೀ ಆದಿಶಕ್ತಿ ದೇವಿ ದೇವಸ್ಥಾನದ ಪುನ‌ರ್ ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ. ಮುಸ್ಲಿಮ್ ಬಾಂಧವರ ಭಾವೈಕ್ಯತೆ ಯ ಸ್ವಾಗತ.

ಮಂಗಳೂರು: ಬಜಾಲ್ ನಂತೂರಿನ ಅಮೇವು ಶ್ರೀ ಆದಿಶಕ್ತಿ ದೇವಿ ದೇವಸ್ಥಾನದ ಪುನ‌ರ್ ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಸಂಜೆ ಇಲ್ಲಿ ನಡೆದ ಹೊರೆ ಕಾಣಿಕೆ ಮೆರವಣಿಗೆಯನ್ನು ಮುಸ್ಲಿಮ್ ಬಾಂಧವರು ಸ್ವಾಗತಿಸಿ ಭಾವೈಕ್ಯತೆ ಮೆರದಿದ್ದಾರೆ. ಶ್ರೀ ಕ್ಷೇತ್ರಕ್ಕೆ ದೇವಸ್ಥಾನದ ಮುಖ್ಯಸ್ಥ ವಿಠಲ್ ಪೂಜಾರಿ ನೇತೃತ್ವದ ಹೊರೆ ಕಾಣಿಕೆ ಮೆರವಣಿಗೆ ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಎದುರಾಗಿ ಸಾಗುತ್ತಿದ್ದ ವೇಳೆ ಜಮಾಅತ್ ಆಡಳಿತ ಕಮಿಟಿ ಮುಖಂಡರು ಭಕ್ತಾದಿಗಳನ್ನು ಸ್ವಾಗತಿಸಿ ಸಿಹಿ ತಿಂಡಿ,ತಂಪು ಪಾನೀಯ, ಐಸ್ ಕ್ರೀಮ್ ವಿತರಿಸಿ ಸೌಹಾರ್ದತೆ ಸಾರಿದ್ದಾರೆ….

Read More

ನಕಲಿ ಮದ್ಯ ತಯಾರಿಕಾ ಅಡ್ಡೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು.ಆರೋಪಿಯ ವಿರುದ್ಧ ಪ್ರಕರಣ ದಾಖಲು.

ನಕಲಿ ಮದ್ಯ ತಯಾರಿಕಾ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಂಗಳೂರು‌ ನಗರದ ಕದ್ರಿ ಲೋಬೊ ಲೇನ್‌ನಲ್ಲಿ ನಡೆದಿದೆ. ಸುಮಾರು 5,57,690 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಮೈಕಲ್ ಬ್ಲೈಸ್ ಮಿನೇಜಸ್ ಎಂಬಾತನ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತದೆ ಎಂಬ ಖಚಿತ ವರ್ತಮಾನ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು. ಮೈಕಲ್ ಬ್ಲೈಸ್ ಮಿನೇಜಸ್‌ನ ಮನೆಯಲ್ಲಿ ತಯಾರಿಸಿಟ್ಟಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ – 1,500 ಲೀಟರ್ , ಮದ್ಯ –…

Read More

ಧರ್ಮಸ್ಥಳ ಬುರುಡೆ ಪ್ರಕರಣ .ಜಡ್ಜ್‌ ಮುಂದೆ ಚಿನ್ನಯ್ಯನ ಹೇಳಿಕೆ.

ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಹೇಳಿಕೆ ನೀಡಲು ಮಂಗಳವಾರ ಶಿವಮೊಗ್ಗ ಜೈಲಿನಿಂದ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆದುಕೊಂಡು ಬಂದು ಹಾಜರುಪಡಿಸಿದರು.ಈ ಪ್ರಕರಣದ ಬಗ್ಗೆ ಚಿನ್ನಯ್ಯ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಆರೋಪಿ ಚಿನ್ನಯ್ಯ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸುವ ಕಾರ್ಯ ಆರಂಭಿಸಲಾಗಿತ್ತು. ಸಂಜೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮುಗಿಸಿ ಆತನನ್ನು ವಾಪಸ್ ಶಿವಮೊಗ್ಗ…

Read More

‘ಎಲ್ಲ ಭಾಷೆಗಳ ಉದ್ದೇಶ ಮನುಕುಲದ ಉದ್ಧಾರ. ಇಲ್ಲಿ ಯಾವುದೇ ಭಾಷೆಯನ್ನು ಸಾಯಲು ಬಿಡಬಾರದು’ – ಡಾ.ಪುರುಷೋತ್ತಮ ಬಿಳಿಮಲೆ

ಮಂಗಳೂರು: ಭಾರತ ಹಲವು ಭಾಷೆಗಳ ರಂಗೋಲಿ. ಎಲ್ಲ ಭಾಷೆಗಳ ಉದ್ದೇಶ ಮನುಕುಲದ ಉದ್ಧಾರ. ಇಲ್ಲಿ ಯಾವುದೇ ಭಾಷೆಯನ್ನು ಸಾಯಲು ಬಿಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ- 2025ರ ಅಂಗವಾಗಿ ರಂಗ ಸಂಗಾತಿ‌ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾದ 2ನೇ ವರ್ಷದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕೆಲವು ಭಾಷೆಗಳು ಪತನಮುಖಿಯಾಗಿವೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಬಹುಭಾಷಾ ಕವಿಗೋಷ್ಠಿ ಪೂರಕ. ಕವಿಗಳು ಹೊಸಲೋಕವನ್ನು…

Read More

ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ ನಿಧನ.

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ (72) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನ ಫ್ರೇಜರ್ ಟೌನ್ ನಗರದ ನಿವಾಸದಲ್ಲಿ ನಿಧನರಾದರು. ಭಟ್ಕಳ ಮೂಲದವರಾಗಿದ್ದ ಅಬ್ದುಲ್ ರಹ್ಮಾನ್ ಅವರು ಮಂಗಳೂರಿನ ಭಟ್ಕಳ ಬಜಾರ್ ನಲ್ಲಿ ವಾಸವಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ತಿಂಗಳುಗಳಿಂದ ಪತ್ನಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನೇರ ನಡೆ ನುಡಿಯ ಸರಳ ಸಜ್ಜನಿಕೆಯ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜಿಲ್ಲೆಯ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ದೂರದರ್ಶಿತ್ವ,…

Read More

ಫಿಶ್ ಕಟ್ಟಿಂಗ್ ಕಾರ್ಖಾನೆ ಮೇಲೆ ಕಾರ್ಮಿಕ ಇಲಾಖೆಯಿಂದ ಮಿಂಚಿನ ದಾಳಿ: 10 ಅಪ್ರಾಪ್ತ ಬಾಲ ಕಾರ್ಮಿಕರು ಪತ್ತೆ.

ಮಂಗಳೂರು: ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಫಿಶ್ ಕಟ್ಟಿಂಗ್ ಯೂನಿಟ್ ಸಂಸ್ಥೆಗೆ ದಾಳಿ ನಡೆಸಿ, 10 ಬಾಲಕಾರ್ಮಿಕ/ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಮಕ್ಕಳು ಬಿಹಾರ ಮತ್ತು ನೇಪಾಳ ಮೂಲದವರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ನಾಜಿಯಾ ಸುಲ್ತಾನ, ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ, ಯೋಜನಾ ನಿರ್ದೇಶಕ…

Read More
error: Content is protected !!