ಸಂಚಾರಕ್ಕೆ ತೊಡಕಾಗಿರುವ ಡ್ರೈನೇಜ್ ನ ಗುಂಡಿ – ಮಳೆನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ
ಮಂಗಳೂರು: ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣ ಸಮೀಪದ ಮುತ್ತಪ್ಪ ದೇವಾಲಯದ ಮುಂದಿರುವ ಮಾರ್ಗದ ಡ್ರೈನೇಜ್ ನ ಸ್ಪಚ್ಚತೆಗಾಗಿ ತೋಡಲಾದ ಗುಂಡಿಯೊಂದನ್ನು ಮುಚ್ಚದೆ ಬಿಡಲಾಗಿದೆ. ಮಳೆನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿಲ್ಲ . ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ , ಪಾದಚಾರಿಗಳಿಗೆ , ದೇವಾಲಯಕ್ಕೆ ಬರುವ ಭಕ್ತರಿಗೆ ಈ ಗುಂಡಿ ತೊಂದರೆಯನ್ನುಂಟು ಮಾಡುತ್ತಿದೆ.
