ದಕ್ಷಿಣಕನ್ನಡದ ಜಿಲ್ಲಾಧಿಕಾರಿ, ಮಕ್ಕಳ ‘ರಜೆ ಕೊಡುವ ಡಿಸಿ’ ಮುಲೈ ಮುಗಿಲನ್ ವರ್ಗಾವಣೆ, ನೂತನ ಡಿಸಿ ದರ್ಶನ್!
ಮಂಗಳೂರು: ಕರಾವಳಿಯ ಪ್ರೀತಿಯ ಮಕ್ಕಳ ರಜೆ ಕೊಡುವ ಡಿಸಿಯ ವರ್ಗಾವಣೆಯಾಗಿದೆ. ರಾಜ್ಯದಲ್ಲಿ 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಅದರಲ್ಲಿ ಕಳೆದ 2 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಗಿಲನ್ ಅವರನ್ನು ಕೂಡಾ ದಿಢೀರ್ ಆಗಿ ವರ್ಗಾಯಿಸಿದೆ. ಅವರನ್ನು ಬೆಂಗಳೂರಿನ ನೋಂದಣಿ ಇಲಾಖೆಯ ಐಜಿ ಮತ್ತು ಸ್ಟಾಂಪ್ಸ್ ವಿಭಾಗದ ಕಮಿಷನರ್ ಆಗಿ ವರ್ಗಾಯಿಸಲಾಗಿದೆ. ರಾಜ್ಯದಲ್ಲಿ ಒಟ್ಟು 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ…
