ಅಹ್ಮದ್ ರಾಶಿದ್ ನೂರಾನಿಗೆ ಸೈಕಾಲಜಿಯಲ್ಲಿ ಪಿಎಚ್‌ಡಿ
ಮಂಗಳೂರು: ಕೇರಳದ ಪೂನೂರ್ ಜಾಮಿಅ ಮದೀನತುನ್ನೂರ್‌ನ ಹಳೆ ವಿದ್ಯಾರ್ಥಿ ಅಹ್ಮದ್ ರಾಶಿದ್ ನೂರಾನಿ ಅವರು ಸೈಕಾಲಜಿ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾ ಗಾಂಧಿ ನ್ಯಾಷನಲ್ ಟ್ರೈಬಲ್ ಯೂನಿವರ್ಸಿಟಿಯಲ್ಲಿ (IGNTU) ‘ಎಪಿಸ್ಟೆಮಿಕ್ ಕಾಗ್ನಿಷನ್ ಇಂಟರ್ವೆನ್ಶನ್‌ನ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಾಮರ್ಥ್ಯದ ಮೇಲಿನ ಅದರ ಪರಿಣಾಮ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿದ್ದರು. ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಲಲಿತ್ ಕುಮಾರ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರ್ಣಗೊಳಿಸಿದ ಅವರಿಗೆ ‘ಡಾಕ್ಟರ್ ಆಫ್ ಫಿಲಾಸಫಿ’ (Ph.D.)…
