ಬಂಟ್ವಾಳ ಬಸ್‌ ನಿಲ್ದಾಣದಲ್ಲಿ ಯುವತಿಯ ಮೇಲೆ ಮಾರಕಾಸ್ತ್ರ ದಾಳಿ; ಚಿಕಿತ್ಸೆ ಫಲಿಸದೆ ಸಾವು

ಬಂಟ್ವಾಳ ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣದ ಸಮೀಪ ಬಸ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳ ಮೇಲೆ ಅಪರಿಚಿತ ಯುವಕನೋರ್ವ ಹರಿತವಾದ ಆಯುಧದಿಂದ ದಾಳಿ ನಡೆಸಿದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿರುವ ದುರ್ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಯುವತಿ ಕಕ್ಯಪದವು ಗ್ರಾಮದ ನಿವಾಸಿಯಾಗಿದ್ದು, ದಾಳಿ ನಡೆದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯನ್ನು ಚೇತನ್ ಎಂದು…

Read More

ಕಾಂಗ್ರೆಸ್ ಏಕಪಕ್ಷೀಯ ಮೀಸಲಾತಿ ಪ್ರಕಟಿಸಿದೆ: ಸತೀಶ್ ಕುಂಪಲ

ಮಂಗಳೂರು : ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಚುನಾವಣೆ ಕಾಂಗ್ರೆಸ್ ಸರಕಾರ ಏಕ ಪಕ್ಷೀಯವಾಗಿ ಮೀಸಲಾತಿ ಪ್ರಕಟಿಸಿದೆ. ಇದಕ್ಕೆ ಆಕ್ಷೇಪ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧತೆ ಈಗಾಗಲೇ ನಡೆಸಲಾಗಿದ್ದು, ಪ್ರಮುಖರಾದ ಕಿಶೋರ್ ಕುಮಾರ್, ಪ್ರತಾಪಸಿಂಹ ನಾಯಕ್, ಪ್ರೇಮಾನಂದ ಶೆಟ್ಟಿ ಸಂಜೀವ ಮಠಂದೂರು ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದರು.

Read More

ಲಯನ್ಸ್ ಜಿಲ್ಲೆ 317ಡಿ: ತಾರಾನಾಥ್ ಎಚ್.ಎಂ. ಅವರಿಗೆ ಅಧಿಕಾರ ಹಸ್ತಾಂತರ

ಮಂಗಳೂರು:ಲಯನ್ಸ್ ಜಿಲ್ಲೆ 317ಡಿ ವತಿಯಿಂದ 2025-26ನೇ ಸಾಲಿನ ಜಿಲ್ಲಾ ರಾಜ್ಯಪಾಲರಾಗಿದ್ದ ಕುಡುಪಿ ಅರವಿಂದ್ ಶೆಣೈ ಅವರು 2026-27ನೇ ಸಾಲಿನ ನೂತನ ಜಿಲ್ಲಾ ರಾಜ್ಯಪಾಲ ತಾರಾನಾಥ್ ಎಚ್.ಎಂ. ಅವರಿಗೆ ಜಿಲ್ಲಾ ಕಚೇರಿಯಲ್ಲಿ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಪ್ರಥಮ ಉಪ ಜಿಲ್ಲಾ ರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪ…

Read More

ಮಳೆಗಾಗಿ ಕದ್ರಿ ದೇವಾಲಯದಲ್ಲಿ ಪರ್ಜನ್ಯ ಜಪ

ಮಂಗಳೂರು: ರಾಜ್ಯ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಶುಕ್ರವಾರ ಪರ್ಜನ್ಯ ಜಪ ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಸಂಭಾವ್ಯ ಬರ ಪರಿಸ್ಥಿತಿ ನಿವಾರಣೆ, ಸಮರ್ಪಕ ಮಳೆ ಹಾಗೂ ನೀರಿನ ಕೊರತೆ ನೀಗಿಸುವಂತೆ ವರುಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕದ್ರಿ ದೇವಾಲಯದ ಗೋಮುಖ ತೀರ್ಥದಲ್ಲಿ ವೇದ ಪಾರಾಯಣದೊಂದಿಗೆ ಪರ್ಜನ್ಯ ಜಪ ನಡೆಯಿತು. ಈ ಕುರಿತು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕರಾವಳಿಯಲ್ಲಿ…

Read More

ಉಪ್ಪಿನಂಗಡಿಯಲ್ಲಿ ಖೋಟಾ ನೋಟು ಮುದ್ರಣ ಘಟಕ ಪತ್ತೆ: 8 ಮಂದಿ ಬಂಧನ, ಮುದ್ರಣ ಯಂತ್ರ ಸೇರಿ ಅಪಾರ ಸಾಮಗ್ರಿ ವಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟು ಮುದ್ರಣ ಘಟಕವನ್ನು ಜಿಲ್ಲಾ ಪೊಲೀಸರು ಭೇದಿಸಿದ್ದು, ಕಾರ್ಯಾಚರಣೆಯಲ್ಲಿ ಏಳು ಆರೋಪಿಗಳನ್ನು ಹಾಗೂ ಬಾಡಿಗೆ ಕಟ್ಟಡ ಒದಗಿಸಿದ್ದ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಅಧಿಕಾರಿಗಳು ಪದ್ಮುಂಜ ಗ್ರಾಮದ ಅಡೆಂಜದಲ್ಲಿರುವ ಬಾಡಿಗೆ ಕಟ್ಟಡದ ಮೇಲೆ ತಡರಾತ್ರಿ ದಾಳಿ ನಡೆಸಿದ ವೇಳೆ ಖೋಟಾ ನೋಟು ತಯಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ಆರೋಪಿಗಳನ್ನು…

Read More

ದೆಹಲಿ-ಮಂಗಳೂರು ಡ್ರಗ್ಸ್ ಜಾಲ ಭೇದಿಸಿದ ಸಿಸಿಬಿ: ₹5.20 ಕೋಟಿ ಮೌಲ್ಯದ 5.196 ಕೆಜಿ ಎಂಡಿಎಂಎ ವಶ, ಇಬ್ಬರ ಬಂಧನ

ಮಂಗಳೂರು: ನಗರ ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದೆಹಲಿಯಿಂದ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಂಗಳೂರಿಗೆ ಸಾಗಿಸಿ ಕರಾವಳಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕ ವಸ್ತು, ಒಂದು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್…

Read More

ಮುನಿರಾಜು ಕೆ.ಸಿ.ಗೆ ‘ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್–2026’

ಮಂಗಳೂರು:ಕೋಲಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಅಧಿಕಾರಿ (ಸಿಆರ್‌ಪಿ) ಹಾಗೂ ಅತ್ಯುತ್ತಮ ಸಿಆರ್‌ಪಿ ಪ್ರಶಸ್ತಿ ಪುರಸ್ಕೃತ ಮುನಿರಾಜು ಕೆ.ಸಿ. ಅವರನ್ನು ಕನ್ನಡ ಭವನ ನೀಡುವ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್–2026’ಗೆ ಆಯ್ಕೆ ಮಾಡಲಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ‘ಕರ್ನಾಟಕ ಗಡಿನಾಡು…

Read More

ಡಾ. ಶರಣಪ್ಪ ಗಬ್ಬೂರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಸಾಹಿತಿ ಹಾಗೂ ಬೆಂಗಳೂರು ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶರಣಪ್ಪ ಗಬ್ಬೂರು (ಕೋಲಾರ) ಅವರಿಗೆ ಕನ್ನಡ ಭವನ ನೀಡುವ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಘೋಷಿಸಲಾಗಿದೆ. ಜುಲೈ 26ರಂದು ನಡೆಯಲಿರುವ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ…

Read More

ಎ. ಚಂದ್ರಶೇಖರ್‌ಗೆ ‘ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್–2026’

ಮಂಗಳೂರು, ಜು.16:ಕೋಲಾರದ ರಂಗ ನಿರ್ದೇಶಕ ಹಾಗೂ ಸಿನಿಮಾ ನಟ ಎ. ಚಂದ್ರಶೇಖರ್ ಅವರನ್ನು ಕನ್ನಡ ಭವನ ನೀಡುವ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್–2026’ಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಹಾಗೂ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಎ. ಚಂದ್ರಶೇಖರ್ ಅವರಿಗೆ ಪ್ರಶಸ್ತಿ…

Read More

ಡಾ. ಇಂಚರ ನಾರಾಯಣಸ್ವಾಮಿ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’

ಮಂಗಳೂರು:ಕೋಲಾರ ಜಿಲ್ಲೆಯ ಖ್ಯಾತ ಸಾಹಿತಿ, ರಂಗ ನಿರ್ದೇಶಕ ಹಾಗೂ ರಂಗ ಇಂಚರ ಟ್ರಸ್ಟ್‌ನ ಅಧ್ಯಕ್ಷ ಡಾ. ಇಂಚರ ನಾರಾಯಣಸ್ವಾಮಿ ಅವರನ್ನು ಪ್ರತಿಷ್ಠಿತ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’ಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ರಂಗಭೂಮಿ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಡಾ. ಇಂಚರ ನಾರಾಯಣಸ್ವಾಮಿ ಅವರು 2025ರಲ್ಲಿ ಕೋಲಾರ ಕನ್ನಡ ಭವನ ಜಿಲ್ಲಾ ಘಟಕ, ಮೇಘಮೈತ್ರಿ ಸಾಹಿತ್ಯ ಸಂಘ…

Read More
error: Content is protected !!