ಫೆ.11ರಿಂದ 14ರ ತನಕ ಕದಿಕೆ ಹಳೆಯಂಗಡಿ ಹರ್ಝತ್ ಸೈಯದ್ ಮೌಲಾನವಲಿಯುಲ್ಲಾಹಿ ದರ್ಗಾದಲ್ಲಿ ಸಂಭ್ರಮದ ಉರೂಸ್ ಆಚರಣೆ

ಮಂಗಳೂರು:ಕದಿಕೆ ಹಳೆಯಂಗಡಿಯ ಹಝತ್ ಸೈಯದ್ ಮೌಲಾನವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಇದರ ವಾರ್ಷಿಕ ಉರೂಸ್ ಸಮಾರಂಭವು ಫೆಬ್ರವರಿ 11ರಿಂದ 14ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನಗಳು, ಸ್ವಲಾತ್ ಮಜ್ಜಿಸ್, ಸಂದಲ್ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಉರೂಸ್ ಉದ್ಘಾಟನಾ ಸಮಾರಂಭವು ಫೆಬ್ರವರಿ 11ರ ಬುಧವಾರ…

Read More

ಜಿಲ್ಲೆಯ ಶಾಸಕರುಗಳಿಗೆ ಪ್ರತಿಷ್ಟೆಗೆ ಕಂಬಳ ಬೇಕು, ಸರಕಾರಿ ಆಸ್ಪತ್ರೆಗಳು ಬೇಡ: ಸಂತೋಷ್ ಬಜಾಲ್ ಆರೋಪ

ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮಂಗಳೂರು ಸೇರಿದಂತೆ 5 ತಾಲೂಕುಗಳಲ್ಲಿ ಸರಕಾರಿ ತಾಲೂಕು ಆಸ್ಪತ್ರೆಗಳೇ ಇಲ್ಲ. ಆದರೆ ಈ ಎಲ್ಲಾ ಕ್ದೇತ್ರದಲ್ಲಿರುವ ಶಾಸಕರುಗಳ ಪ್ರತಿಷ್ಟೆಗೆ ಕಂಬಳ ಬೇಕು ಅಲ್ಲಿಗೆ ಸರಕಾರಿ ಆಸ್ಪತ್ರೆ ಇರಬೇಕೆಂಬ ಇಚ್ಚಾಶಕ್ತಿಯೇ ಇಲ್ಲದಿರೋದು ಖೇದಕರ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ, ಜಯದೇವ, ಕಿದ್ವಾಯಿ, ನಿಮಾನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಗೆ ಒತ್ತಾಯಿಸಿ,…

Read More

ಫೆ 23 ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘TEDxStAloysius’ ಕಾರ್ಯಕ್ರಮ … !

ಮಂಗಳೂರು:ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ವತಿಯಿಂದ ಫೆ 23 ರಂದು “ಅಲಿಖಿತ ಆಲೋಚನೆಗಳ ಎಳೆಗಳು ” (Threads of Unwritten Thoughts) ಎಂಬ ಪರಿಕಲ್ಪನೆಯ ಅಡಿಯಲ್ಲಿ ‘TEDxStAloysius’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಸಹಕುಲಪತಿ ರೆ. ಡಾ. ಮೆಲ್ವಿನ್ ಡಿ. ಕುನ್ಹಾ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ಸಹ-ಸಂಚಾಲಕಿ ಕು. ಅನಾ ಮಾತನಾಡಿ , 146 ವರ್ಷಗಳ ಶೈಕ್ಷಣಿಕ ಇತಿಹಾಸ ಹೊಂದಿರುವ ಅಲೋಶಿಯಸ್ ಸಂಸ್ಥೆಯು ನವೀನ ಆಲೋಚನೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಈ…

Read More

ಕ್ಯಾನ್ಸರ್ ಬಗ್ಗೆ ಭಯ ಬೇಡ, ಅರಿವು ಇರಲಿ – ಡಾ. ಹೆಚ್. ಆರ್ ತಿಮ್ಮಯ್ಯ

ಮಂಗಳೂರು-ಕ್ಯಾನ್ಸರ್ ಎಂಬ ಮಾರಕ ಖಾಯಿಲೆಗೆ ಭಯ ಪಡದೆ ಆರಂಭದಲ್ಲಿಯೇ ಶೀಘ್ರ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ. ಕ್ಯಾನ್ಸರ್ ಶೀಘ್ರ ಪತ್ತೆ ಮತ್ತು ತಪಾಸಣೆಯಿಂದ ತಡೆಗಟ್ಟಬಹುದು. ಈ ರೋಗದ ವಿರುದ್ಧ ಹೋರಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ಆರ್ ತಿಮ್ಮಯ್ಯ ಹೇಳಿದರು.ಅವರು ಶನಿವಾರ ನಗರದ ಜಿಲ್ಲಾ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್‍ಲಾಕ್…

Read More

“ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ

ಮಂಗಳೂರು:- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಿಲ್ಲಾಡಳಿತ ಹಾಗೂ ವಿವಿಧ ಬ್ಯಾಂಕ್‍ಗಳ ಒಕ್ಕೂಟ, ದಕ್ಷಿಣ ಕನ್ನಡ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ ಶೆಟ್ಟಿ ಮಾತನಾಡಿ,…

Read More

ಹರೇಕಳ ನ್ಯೂಪಡ್ಪು ಪಿಯು ಕಾಲೇಜು ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಪರಿಶ್ರಮದಿಂದ ನೂತನವಾಗಿ ಆರಂಭಗೊಂಡಿರುವ ಹರೇಕಳ ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿಗೆ ದಗನೆಪಡ್ಪುವಿನಲ್ಲಿ ಸರಕಾರದಿಂದ ಮಂಜೂರುಗೊಂಡಿರುವ ಜಾಗದಲ್ಲಿ ಎಂಆರ್ ಪಿಎಲ್ ಕಂಪೆನಿ ಮಂಗಳೂರು ಇದರ 45 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡದ 2 ಕೊಠಡಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕರ್ನಾಟಕ ವಿಧಾನಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಫರೀದ್ ಎಂಆರ್ ಪಿಎಲ್ ಕಂಪೆನಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಗೈದರು.ಬಳಿಕ ಮಾತನಾಡಿದ ಅವರು ,ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿನ ಮುಂದಿನ…

Read More

ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆ ಬೆಂಕಿ.ತಪ್ಪಿದ ದೊಡ್ಡ ಅನಾಹುತ

ಮಂಗಳೂರು:ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದಕ್ಕೆ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋಗಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ನಡೆದಿದೆ.ಘಟನೆ ವೇಳೆ ಕಾರು ಚಾಲಕ ಸಮಯಕ್ಕೆ ಸರಿಯಾಗಿ ವಾಹನದಿಂದ ಇಳಿದುಕೊಂಡ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಜನ ನಿಬಿಡ ಹಾಗೂ ವಾಹನ ದಟ್ಟಣೆಯ ಪ್ರದೇಶದಲ್ಲೇ ಘಟನೆ ಸಂಭವಿಸಿದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಕಾರಿನ ಅರ್ಧಭಾಗ ಸುಟ್ಟು ಹಾನಿಯಾಗಿದೆ.ಘಟನೆಯ ಕುರಿತು ಹೆಚ್ಚಿನ…

Read More

ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ …. !

ಮಂಗಳೂರು:ನಗರದ ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿಯು ಕೊಟ್ಟಾರಚೌಕಿ ಜಂಕ್ಷನ್ ಬಳಿ ಇಂದು ಸ್ಥಳೀಯ ಜನಹಿತರಕ್ಷಣಾ ಸಮಿತಿಯ ವತಿಯಿಂದ ನಡೆಯಿತು . ಜನಹಿತರಕ್ಷಣಾ ಸಮಿತಿಯ ಪ್ರಮುಖ ಹೋರಾಟಗಾರದ ವಿಜಯ್ ಕುಮಾರ್ ಸಮಿತಿಯ ಬೇಡಿಕೆಯನ್ನು ಮುಂದಿಟ್ಟು , ಮಾಲೆಮಾರ್ ಚೌಕಿ ಸರ್ವಿಸ್ ರಸ್ತೆ ನಿರ್ಮಾಣ , ಮಾಲೆಮಾರ್ – ಕುಂಟಿಕಾನ ಸರ್ವಿಸ್ ರಸ್ತೆ ನಿರ್ಮಾಣ, ಚೌಕಿಯಿಂದ ಮಾಲಾಡಿ ರಸ್ತೆ ಕಡೆ ರಸ್ತೆಯ ತಿರುವು ದಿಕ್ಕನ್ನು ಸರಾಗಪಡಿಸುವ ಬಗ್ಗೆ, ಕೊಟ್ಟಾರ ಚೌಕಿ…

Read More

ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪತ್ನಿಗೆ ಅವಮಾನ: ಬಂಟ್ವಾಳದ ಶರಣ್ ರೈ ಬಂಧನ

ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಪತ್ನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಬಂಟ್ವಾಳ ತಾಲೂಕಿನ ಶರಣ್ ರೈ(29) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದನ್ನೇ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಶರಣ್ ರೈ ಎಂಬಾತನು ಶಾಸಕರ ಪತ್ನಿಯನ್ನು ಅವಮಾನಿಸುವ ರೀತಿಯಲ್ಲಿ ಹಾಗೂ ಮಹಿಳೆಯರ ಗೌರವ…

Read More

ಶ್ರವಣ ದೋಷದ ಬಗ್ಗೆ ಜಾಗೃತಿ ಅಗತ್ಯ -ಖಾದರ್ ಶಾ*ಶ್ರವಣ ತಪಾಸಣಾ ಶಿಬಿರಕ್ಕೆ ಚಾಲನೆ

ಮಂಗಳೂರು, ಫೆ.7; ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಸಹಯೋಗದೊಂದಿಗೆ ಮಂಗಳೂರು ಪ್ರೆಸ್ ಕ್ಲಬ್ ,ಪತ್ರಿಕಾ ಭವನ ಟ್ರಸ್ಟ್ ಸಹಕಾರ ದೊಂದಿಗೆ ‌‌‌ ಮಂಗಳೂರಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಶ್ರವಣ ತಪಾಸಣಾ ಶಿಬಿರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಶನಿವಾರ ಚಾಲನೆ ನೀಡಿ ಮಾತನಾಡುತ್ತಾ, ಶ್ರವಣ ದೋಷದ ಬಗ್ಗೆ ನಿರ್ಲಕ್ಷ್ಯ ಬೇಡ.ಸಮಾಜದಲ್ಲಿ ಸಾಕಷ್ಟು ಮಂದಿ ಶ್ರವಣ…

Read More
error: Content is protected !!