ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಆತಂಕ – ಜನಪ್ರಿಯ ರೈಲು ಸಮಯ ಬದಲಾವಣೆಯ ಚರ್ಚೆ
ಮಂಗಳೂರು : ಅದ್ಯಾಕೋ ಏನೋ ರೈಲ್ವೇಗೆ ಮಂಗಳೂರಿಗರೆಂದರೆ ಭಾರಿ ಸದರ, ಏನು ಮಾಡಿದರೂ ಮಾತನಾಡುವುದಿಲ್ಲ ಎಂಬ ನಂಬಿಕೆ. ಆದ್ದರಿಂದ ಅದು ಇರುವ ಸೌಲಭ್ಯಗಳನ್ನು ಮೊಟಕು ಮಾಡಲು ಹೊರಟಿದೆ. ಆ ಕುರಿತ ಒಂದು ಸ್ಟೋರಿ ಇದು.ಮಂಗಳೂರು ರೈಲು ನಿಲ್ದಾಣ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದು. ಮಂಗಳೂರಿನ ಹಂಚು ಸಾಗಾಟಕ್ಕಾಗಿ ಇಲ್ಲಿಗೆ ರೈಲು ಮಾರ್ಗ ಬಂತು. ಹಂಚಿನ ಕಾಲ ಮುಗಿಯಿತು. ರೈಲು ಪ್ರಯಾಣ ಮರುರೂಪಿಸಲ್ಪಟ್ಟ ಕಾಲಘಟ್ಟ ಇದು.ಆದರೆ ಮಂಗಳೂರಿನ ಮಟ್ಟಿಗೆ ನೆಮ್ಮದಿಯ ರೈಲು ಪ್ರಯಾಣ ಎಂದರೆ ಅದೊಂದು ಕನಸು ಎಂಬಂತಾಗುತ್ತಿದೆ….