ಮಂಗಳೂರು ದಕ್ಕೆಯಲ್ಲಿ ದುರ್ಘಟನೆ: ಲೈಟ್ ಕಂಬ ಮುರಿದು ಬಿದ್ದು ಮೀನು ಕಾರ್ಮಿಕ ಸಾವು

ಮಂಗಳೂರು: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬವೊಂದು ಏಕಾಏಕಿ ಮುರಿದು ವ್ಯಕ್ತಿಯ ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ.ಮೃತರನ್ನು ತಮಿಳುನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಅವರು ದಕ್ಕೆಯಲ್ಲಿ ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.ಇಂದು ದಕ್ಕೆಯಲ್ಲಿ ಮೀನಿನ ಬಾಕ್ಸ್ ಹೊರುತ್ತಿದ್ದ ವೇಳೆ ಲೈಟ್ ಕಂಬ ಬುಡದಿಂದಲೇ ಮುರಿದು ಬಿದ್ದಿದೆ. ಅಚಾನಕ ಸಂಭವಿಸಿದ ಈ ಘಟನೆದಲ್ಲಿ ಕಂಬ ಮುರುಗನ್ ಅವರ ಮೇಲೆ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ…

Read More

ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಕರಾವಳಿಯ ರಕ್ತ ಕಣ್ಣೀರು….

ಮಂಗಳೂರು: ಕೋಮುದ್ವೇಷದಿಂದ ನಲುಗಿದ ಕರಾವಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕ ಯುವಕರ ಕುಟುಂಬಗಳ ಆಕ್ರಂದನವನ್ನು ಅಕ್ಷರ ರೂಪಕ್ಕಿಳಿಸಿದ ಯುವ ಪತ್ರಕರ್ತರಾದ ಇರ್ಷಾದ್ ಉಪ್ಪಿನಂಗಡಿಯವರ ಕಾರ್ಯವನ್ನು ಖಂಡಿತಕ್ಕೂ ಮೆಚ್ಚಲೇಬೇಕು. ಸ್ವಾತಂತ್ರ್ಯ ಪೂರ್ವದಿಂದಲೇ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆಗೆ ಕೊಳ್ಳಿ ಇಟ್ಟಿದ್ದೇ ಇಲ್ಲಿನ‌ ಸಂಘಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ 3 – 4 ದಶಕಗಳಿಂದ ತನ್ನ ರಾಜಕೀಯ ಬೇಳೆ ಬೇಯಿಸಲು ಕೋಮುವಾದದ ಅಸ್ತ್ರವನ್ನು ಉಪಯೋಗಿಸಿ ಅಮಾಯಕ ಯುವಕರ ಜೀವವನ್ನು ಬಲಿ ತೆಗೆದುಕೊಂಡು ತಾನು ಮಾತ್ರ ರಾಜಕೀಯದ…

Read More

ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ: 22 ಕೆ.ಜಿ 250 ಗ್ರಾಂ ತೂಕದ ಅಕ್ರಮ ಗಾಂಜಾ ವಶ

ಮಂಗಳೂರು: ಮಂಗಳೂರಲ್ಲಿ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧಿಸಲಾಗಿದೆ. ಇಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯ ದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದು ಉತ್ತರ ಉಪ ವಿಭಾಗದ ಎ.ಸಿ.ಪಿ. ರವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿತು. ಇದೇ ವೇಳೆ ಆರೋಪಿಗಳಾದ ಕರಣ್ ಬಾಬು ರಾಂ ಜಾದವ್ ,…

Read More

ಅಂತರ್ ರಾಜ್ಯ ಮಾದಕವಸ್ತು ಮಾರಾಟ ಜಾಲದ ಆರೋಪಿಗಳು ವಶಕ್ಕೆ

ಪುತ್ತೂರು: ಅಂತರ್ ರಾಜ್ಯ ಮಾದಕವಸ್ತು ಮಾರಾಟ ಜಾಲದ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಲಾಗಿದೆ. ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಅಕ್ರಮವಾಗಿ MDMA ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ತಡೆದು ಪರಿಶೀಲಿಸಲಾಗಿ ಆರೋಪಿಗಳಾದ ಕೇರಳದ ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು (30), ಇಸ್ಮಾಯಿಲ್‌ (28 ಹಾಗೂ ಸಂಶೀರ್‌ (27) ಎಂಬುವವರನ್ನು ಬಂಧಿಸಲಾಗಿದೆ. ಈ ಮೂವರು ವಾಹನದಲ್ಲಿ ಮಾರಾಕ ಆಯುಧವಾದ ತಲವಾರನ್ನು ಇಟ್ಟುಕೊಂಡು, ಸುಮಾರು 5,38,800 ಮೌಲ್ಯದ 53.58 ಗ್ರಾಂ MDMA ನಿಷೇದಿತ ಮಾದಕ ವಸ್ತುವನ್ನು…

Read More

ಮಂಗಳೂರಿನಲ್ಲಿ ಭಕ್ತಿಯ ಹೊನಲು: ಬ್ರಹ್ಮಶ್ರೀ ನಾರಾಯಣ ಗುರು ಸ್ಮರಣಾರ್ಥ ಕುದ್ರೋಳಿ ತೀರ್ಥಾಟನೆಗೆ ಭವ್ಯ ಸ್ಪಂದನೆ

ಮಂಗಳೂರು: ಮಂಗಳೂರಿನ ಮಣ್ಣಿನಲ್ಲಿ ಇಂದು ಅಕ್ಷರಶಃ ಭಕ್ತಿಯ ಹೊನಲು ಹರಿಯಿತು. ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಆ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕುದ್ರೋಳಿ ತೀರ್ಥಾಟನೆ’ ಕೇವಲ ಒಂದು ಪಾದಯಾತ್ರೆಯಾಗಿ ಉಳಿಯದೆ, ಸಾವಿರಾರು ಹೃದಯಗಳನ್ನು ಬೆಸೆಯುವ ಮಧುರ ಮಿಲನವಾಯಿತು. ಸಹಸ್ರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ಮಂತ್ರಘೋಷ, ಹಳದಿ ಸಾಗರದಂತೆ ಕಂಡ ಭಕ್ತಸಂದಣಿ—ಇವೆಲ್ಲವೂ ಮಂಗಳೂರಿನ ಬೀದಿಗಳಲ್ಲಿ ಒಂದು ಆಧ್ಯಾತ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿತು. ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಯಾತ್ರೆ ಆರಂಭವಾದಾಗ, ಇಡೀ ಪರಿಸರ ಗುರುಗಳ…

Read More

“MIR Net Zero Vision 2047” ಶೃಂಗಸಭೆ ಮಂಗಳೂರಿನಲ್ಲಿ ಯಶಸ್ವಿ

ಮಂಗಳೂರು:ಭಾರತವನ್ನು 2047ರ ವೇಳೆಗೆ ಇಂಗಾಲ ಮುಕ್ತ (Carbon Neutral) ರಾಷ್ಟ್ರವನ್ನಾಗಿ ಮಾಡುವ ಐತಿಹಾಸಿಕ ಗುರಿಯೊಂದಿಗೆ, ಇಟಲಿ ಮೂಲದ ಪ್ರತಿಷ್ಠಿತ ಎಂಐಆರ್ (MIR) ಸಮೂಹ ಆಯೋಜಿಸಿದ್ದ “MIR Net Zero Vision 2047″ ಮಹಾ ಶೃಂಗಸಭೆಯು ಫೆಬ್ರವರಿ 20ರಂದು ನಗರದ ಟಿ.ಎಂ.ಎ ಪೈ ಕನ್ವೆನ್ಸನ್ ಸೆಂಟರ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಹಿನ್ನೆಲೆಯಲ್ಲಿ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್ ಅವರು ಮಂಗಳೂರಿನ ಎಂಎಸ್‌ಇಜೆಡ್ (MSEZ) ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ವಿಶ್ವದರ್ಜೆಯ…

Read More

ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆ ಪ್ರಕರಣ- ಮಹಿಳೆ ಸಹಿತ ಇಬ್ಬರ ಬಂಧನ

ಉಡುಪಿ: ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆ ನಿವಾಸಿ ಶಾಲಿನಿ ಹಾಗೂ ಕುಕ್ಕಿಕಟ್ಟೆಯ ಗಣೇಶ್ ಎಂದು ಗುರುತಿಸಲಾಗಿದೆ.ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ…

Read More

ಮಂಗಳೂರಿನಲ್ಲಿ ಮನೆ ಕೆಲಸಕ್ಕೆ ತೆರಳಿದ ಮಹಿಳೆ ನಾಪತ್ತೆ

ಮಂಗಳೂರು:ಮನೆ ಕೆಲಸಕ್ಕೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ನಗರದ ಹೊಯ್ಗೆ ಬಜಾರ್‌ನ ತಾಜ್ ಸೈಕಲ್ ಶಾಪ್ ಸಮೀಪ ವಾಸವಾಗಿದ್ದ ರೇಖಾ ಈಬಕ್ಕನವರ್ (40) ಅವರು ಫೆಬ್ರವರಿ 18ರಂದು ಮನೆಯಿಂದ ತೆರಳಿದ ಬಳಿಕ ಮರಳಿಲ್ಲ ಎಂದು ತಿಳಿದುಬಂದಿದೆ.ಈ ಸಂಬಂಧ ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಾಣೆಯಾದವರ ವಿವರ:ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.ಕಾಣೆಯಾದ ಮಹಿಳೆಯ ಕುರಿತು ಯಾವುದೇ ಮಾಹಿತಿ…

Read More

ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಯುವಕರ ತಂಡ

ಉಡುಪಿ: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂರು ಮಂದಿ ಯುವಕರ ತಂಡವೊಂದು ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದೆ.ಹೆಲೆನ್ ಡಿಸೋಜಾ (70) ಸರ ಕಳೆದುಕೊಂಡ ವೃದ್ಧ ಮಹಿಳೆ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಈಕೆ ಮನೆಯಲ್ಲಿರುವಾಗ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಯುವಕರ ತಂಡ ಅಕ್ಕ ಪಕ್ಕದ ಮನೆಯವರ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಮಹಿಳೆಯ ಮೊಬೈಲ್ ನಂಬ‌ರ್ ಕೇಳಿ ಬರೆಯುತ್ತಿದ್ದಂತೆ ಒಬ್ಬಾತ…

Read More

ಫೆ 23 ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ FAMCO ನೂತನ ಶಾಖೆಯ ಉದ್ಘಾಟನೆ …. !

ಮಂಗಳೂರು:ಫ್ಯಾಮಿಲಿ ಡೆವೆಲಪಮೆಂಟ್ ಕೋ ಆಪರೇಟಿವ್ ತ್ರಿಫ್ಟ್ ಆಂಡ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ತನ್ನ ಶಾಖೆಯನ್ನು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ತೆರದಿದ್ದು ಹಣಕಾಸು ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ . ಫಾಮ್ಕೋ ದ ಶಾಖೆಯು ಕರ್ನಾಟದಲ್ಲಿ ಇನ್ನಷ್ಟು ವಿಸ್ತರಣೆಯಾಗಬೇಕೆನ್ನುವ ಉದ್ದೇಶದಿಂದ ಫೆ 23 ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಝೋನೆಲ್ ಹೆಡ್ ಸುರೇಶ್ ಹೇಳಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಫೆ. 28 ರಂದು ಒಂದೇ…

Read More
error: Content is protected !!