ದ್ವಿ ಚಕ್ರ ಟ್ಯಾಕ್ಸಿ ವರ್ಸಸ್ ತ್ರಿಚಕ್ರ -ಟ್ಯಾಕ್ಸಿ ನಡುವೆ ಶುರುವಾಯ್ತು ಮಂಗಳೂರಿನಲ್ಲಿ ದೊಡ್ಡ ಹೋರಾಟ…. !

ಮಂಗಳೂರು:ಅನಧಿಕೃತ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (SLP) ಸಲ್ಲಿಸುವಂತೆ ಒತ್ತಾಯಿಸಿ ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಒಕ್ಕೂಟಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್ ಮಾತನಾಡಿ , ಮೋಟಾರ್ ವಾಹನಗಳ ಕಾಯ್ದೆ 1988ರ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾವುದೇ ನೇರ ಪರವಾನಗಿ ಇಲ್ಲದಿದ್ದರೂ ಸಾರ್ವಜನಿಕ…

Read More

ಮಂಗಳೂರು ಮಹಾ ನಗರ ಪಾಲಿಕೆಯ ನಿರ್ದೇಶನಕ್ಕೆ ಡೋಂಟ್ ಕೇರ್….?!

ಮಂಗಳೂರು:ಸೀರೆ ಬೇಕೇ ಸೀರೆ ಎನ್ನುವ ಹಾಗೆ ಕಾಣ್ತಾ ಇದೆ ಬುದ್ಧಿವಂತರ ಜಿಲ್ಲೆಯ ಈ ಒಂದು ಸ್ಪಾಟ್. ಹೌದು ಅಷ್ಟಕ್ಕೂ ಈ ಇಂಟ್ರೆಸ್ಟಿಂಗ್ ವಿಷಯ ವಸ್ತು ಅಡಗಿರುವುದು ರೈಲ್ವೇ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಎನ್ನುವುದು ಕಟು ಸತ್ಯ . ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಗ್ರಂಥಾಲದ ಸನಿಹ ಇರುವ ಮಾರ್ಗದ ಬದಿಯು ಈ ಮೊದಲು ಹೆಚ್ಚಾಗಿ ಕಸದ ರಾಶಿಯಿಂದಲೇ ತುಂಬಿರುತ್ತಿತ್ತು . ಇದು ಆ ಮಾರ್ಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಿರಿ ಕಿರಿಯನ್ನು ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗುವಂತೆ…

Read More

ನೇತ್ರಾವತಿ ಸೇತುವೆಗೆ ಮಿನಿ ಟೆಂಪೋ ಡಿಕ್ಕಿ – ಫೆನ್ಸಿಂಗ್‌ಗೆ ಭಾರಿ ಹಾನಿ

ಮಂಗಳೂರಿನ ನೇತ್ರಾವತಿ ಸೇತುವೆ ಆವರಣ ಗೋಡೆಗೆ ಮಿನಿ ಟೆಂಪೋವೊಂದು ಬುಧವಾರ ಮುಂಜಾನೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟೆಂಪೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಈ ಘಟನೆಯಿಂದ ಸೇತುವೆಗೆ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಗೆ ತೀವ್ರ ಹಾನಿಯಾಗಿದೆ. ಐದು ವರುಷಗಳ ಹಿಂದೆ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು ಹಲವರು ಆತ್ಮಹತ್ಯೆಗೈದಿದ್ದ ಘಟನೆ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಇದೇ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು…

Read More

ಅಂತರ್ ರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ.ಒಟ್ಟು 38 ಲಕ್ಷದ 42,000/-ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರ ಹಾಗೂ ಸೊತ್ತುಗಳ ವಶ.

ದ.ಕ ಜಿಲ್ಲಾ ಪೊಲೀಸ್‍ ಆಧೀಕ್ಷಕರ ವಿಶೇಷ ತಂಡದಿಂದ ಮಾದಕ ವಸ್ತು ಮಾರಾಟಗಾರರ ಜಾಲದ ಪ್ರಮುಖ ಆರೋಪಿಗಳಾದ 1) ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು ಪ್ರಾಯ: 30 ವರ್ಷ ತಂದೆ: ದಿ| ಅಶ್ರಪ್‌ ವಾಸ: ಚೆನ್ನಿಲೊಟ್ಟು, ವೇಲಂ, ವಡಕರ್‌ ತಾಲೂಕು, ಕೋಝಿಕೋಡ್, ಕೇರಳ 2) ಇಸ್ಮಾಯಿಲ್‌ ಪ್ರಾಯ: 28 ವರ್ಷ ತಂದೆ: ಇಬ್ರಾಹಿಂ ವಾಸ: ಮುಂಡಿಕುಂಞಲ್‌, ಚರುಕಾಟುರ್‌ ಗ್ರಾಮ ಮಾನಂದವಾಡಿ, ವಯನಾಡ್‌ ಜಿಲ್ಲೆ ಕೇರಳ 3) ಸಂಶೀರ್‌ ಪ್ರಾಯ: 27 ವರ್ಷ ತಂದೆ: ಬಶೀರ್‌ ವಾಸ: ಕಹ್ನೀರಾ,…

Read More

ಕುಡ್ಲಕ್ಕೆ ಕಾಲಿಟ್ಟ “ಕೆಸಿಸಿಎಲ್ ಕುಡ್ಲಾ” ಹೆಸರಿನ ಕೇರಳ ವಿಷನ್ ಬ್ರಾಡ್‌ ಬ್ಯಾಂಡ್ ಅಧಿಕೃತವಾಗಿ ನಾಳೆ ಉದ್ಘಾಟನೆ …. !

ಮಂಗಳೂರು:ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತಿ ದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ ಕೇರಳ ವಿಷನ್ ಬ್ರಾಡ್‌ಬ್ಯಾಂಡ್ ಇದೀಗ ಮಂಗಳೂರಿನಲ್ಲಿ ತನ್ನ ಸೇವೆಯನ್ನು “ಕೆಸಿಸಿಎಲ್ ಕುಡ್ಲಾ” ಎಂಬ ಹೆಸರಿನಲ್ಲಿ ವಿಸ್ತರಿಸಲು ಹೊರಟಿದ್ದು ನಗರದ ಬೆಂದೂರ್ವೆಲ್ ನಲ್ಲಿರುವ ಕಚೇರಿಯಲ್ಲಿ ಇದರ ಅಧಿಕೃತ ಉದ್ಘಾಟನೆಯನ್ನು ನಾಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೆರವೇರಿಸಲಿದ್ದಾರೆ ಎಂದು ಕೆಸಿಸಿಎಲ್ ಕುಡ್ಲಾ ಇದರ ಅಧ್ಯಕ್ಷರಾದ ಶುಕ್ಕೂರ್ ಕೋಳಿಕ್ಕರ ತಿಳಿಸಿದರು . ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಸಿಸಿಎಲ್ ಕುಡ್ಲಾ…

Read More

ಫೆಬ್ರವರಿ 24 ರಂದು ‘ಸಹಕಾರ ರತ್ನ’ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟು ಹಬ್ಬದ ಸಂಭ್ರಮ…! 77 ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ…..!

ಮಂಗಳೂರು:ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನುನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಾಮಾಣಿಕ ರೀತಿಯ ಸಾರ್ಥಕತೆಯನ್ನು ಕಂಡ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ ‘ಸಹಕಾರ ರತ್ನ’ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರ 77ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನಡೆಸಲು ಅವಿಭಜಿತ…

Read More

ಪೆರ್ಡೂರು: ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.ಪೆರ್ಡೂರು ಗ್ರಾಮದ ಪಾಡಿಗಾರು ನಿವಾಸಿ ರಾಘವೇಂದ್ರ (36) ಮತ್ತು ಕುಂಜದಕಟ್ಟೆ ನಿವಾಸಿ ಸುಧೀಂದ್ರ ಶೆಟ್ಟಿ ಯಾನೆ ಬಾಬು (36) ಬಂಧಿತ ಆರೋಪಿಗಳು. ಈ‌ ಇಬ್ಬರು ಫೆ.17 ರಂದು ರಾತ್ರಿ ಸುಮಾರು 10:30ಕ್ಕೆ ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ….

Read More

ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮಲ್ಲೇಶ್ವರದಲ್ಲಿರುವ ಹಿಂದೂ ಸೇವಾ ಪ್ರತಿಷ್ಠಾನದ ಪ್ರಕಲ್ಪವಾದ ಅರುಣ ಚೇತನ ವಿಶೇಷ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ತಮ್ಮ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಿಕೊಂಡರು.ಈ ವೇಳೆ ಮಾತನಾಡಿದ ಸಚಿವರು, ಅರುಣ ಚೇತನ ವಿಶೇಷ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ವಿಶೇಷ ಚೇತನ ಮಕ್ಕಳೊಂದಿಗೆ ಕೆಲ ಕಾಲ ಬೆರೆತು, ಮಾತುಕತೆ ನಡೆಸಿದರು. ಅರುಣ ಚೇತನ…

Read More

ಮೆಸ್ಕಾಂ ಮಾಣಿ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ಸತೀಶ್ ಪೂಜಾರಿ ನೇಮಕ

ಬಂಟ್ವಾಳ : ಮೆಸ್ಕಾಂ ಮಾಣಿ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಚ್ಚಿದಾನಂದ (ಸತೀಶ್) ಪೂಜಾರಿ ಅವರನ್ನು ನೇಮಕಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಸತೀಶ್ ಪೂಜಾರಿ ಅವರು ಕಳೆದ ಬಾರಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾಗಿ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ, ದ್ವಿತೀಯ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಮಾಜಿ ಸಚಿವ ಬಿ. ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ನಡೆದಿದೆ…

Read More

ಬೆಳ್ತಂಗಡಿ ನಕ್ಸಲ್ ಕರಪತ್ರ ಪ್ರಕರಣ: ಜಾನ್ @ ಜಯಣ್ಣ @ ಮಹೇಶ್ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ : ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಜಾನ್@ ಜಯಣ್ಣ@ಮಹೇಶ್ (49) ಎಂಬಾತನನ್ನು ಕೇರಳದ ತ್ರೀಶೂರ್ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಕೇರಳ ವಿಶೇಷ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012 ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ಲೂರು ಎಂಬಲ್ಲಿ ಕೊತ್ಲೂರಿನ ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ಕರಪತ್ರ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಿಚೆಗೆ ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ನಿವಾಸಿ ಜಯಣ್ಣ ಕಳೆದ…

Read More
error: Content is protected !!