ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ :ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್

ಸುರತ್ಕಲ್:ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದ್ದು, ದೇಶದ ಆರ್ಥಿಕತೆಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಹೇಳಿದರು.ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಮರಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಶ್ರೀನಿವಾಸ್ ಕಾಲೇಜು ಸಮೂಹ ವಿದ್ಯಾ ಸಂಸ್ಥೆ ಮುಕ್ಕ, ಸುರತ್ಕಲ್ ಪೊಲೀಸ್ ಠಾಣೆ ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಜಂಟಿ ಸಹಯೋಗದಲ್ಲಿ ಮುಕ್ಕದಿಂದ ಬೈಕಂಪಾಡಿಯ ತನಕದ ರಾಷ್ಟ್ರೀಯ ಹೆದ್ದಾರಿ ಹಾಗೂ ಬಸ್ ತಂಗುದಾಣಗಳಲ್ಲಿ ಹಮ್ಮಿಕೊಳ್ಳಲಾದ…

Read More

ಕರ್ನಾಟಕದ ಮೂಲದ 8 ಮಂದಿ ಹಕ್ಕಿ-ಪಿಕ್ಕಿ ಬುಡಕಟ್ಟು ಜನರಿಗೆ ಸೆಂಟ್ರಲ್ ಆಫ್ರಿಕಾದಲ್ಲಿ ಜೈಲು ಭೀತಿ..!

ಕರ್ನಾಟಕ ಮೂಲದ 8 ಮಂದಿ ಹಕ್ಕಿಪಿಕ್ಕಿ ಬುಡಕಟ್ಟು ಜನರು ಸೆಂಟ್ರಲ್ ಆಫ್ರಿಕಾದಲ್ಲಿ ವೀಸಾ ಅವಧಿ ಮುಕ್ತಾಯದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಅವರಿಗೆ ಬಂಧನ ಭೀತಿ ಎದುರಾಗಿದೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹಕ್ಕಿಪಿಕ್ಕಿ ಬುಡಕಟ್ಟು ಜನರು ಪ್ರತಿವರ್ಷ ಗಿಡಮೂಲಿಕೆಗಳ ವ್ಯಾಪಾರದ ನಿಮಿತ್ತ ವಿವಿಧ ದೇಶಗಳಿಗೆ ತೆರಳುತ್ತಾರೆ. ಅದರಂತೆ ಈ ಬಾರಿ ಸಪ್ಟೆಂಬರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ಸೆಂಟ್ರಲ್ ಆಫ್ರಿಕಾಕ್ಕೆ ತೆರಳಿದ್ದರು, ಇವರ ವೀಸಾ ಕಳೆದ ವರ್ಷ ಡಿಸೆಂಬರ್ 22 ರಂದು ಅವಧಿ…

Read More

ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಸಭಾಭವನದಲ್ಲಿ ಕಲಾ ಸೌರಭ ಸಂಗೀತ ವಿದ್ಯಾರ್ಥಿಗಳ ಕಲಾ ಸಂಭ್ರಮ

ಭಟ್ಕಳ- ತಾಲೂಕಿನ ಪ್ರಸಿದ್ದ ಶಿಕ್ಷಣ ಸಂಸ್ಥೆ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ನ್ಯೂ ಇಂಗ್ಲೀಷ್ ಸಭಾಭವನದಲ್ಲಿ ಶನಿವಾರ ಸಂಗೀತ ವಿದ್ಯಾರ್ಥಿಗಳ ಅದ್ಬುತ ಕಲಾ ಪ್ರದರ್ಶನ ನಡೆಯಿತು.ಕಲಾ ಸೌರಭ ಸಂಗೀತ ಶಾಲೆ ಹಾಗೂ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಇದರ ಸಹಯೋಗದಲ್ಲಿ ಶನಿವಾರ ಸಂಗೀತ ಹಾಗೂ ತಬಲ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎಪರ್ಡಿಸಲಾಗಿತ್ತು. ಕಾರ್ಯಕ್ರಮವನ್ನು ಕಲಾ ಸೌರಭ ಹಾಗೂ ಭಟ್ಕಳ ಎಜ್ಯುಕೇಷನ್ ಸಂಸ್ಥೆಯ ಮುಖ್ಯಸ್ಥರಾದ ಕೇದಾರ ಕೊಲ್ಲೆ ಹಾಗೂ ರಾಜೇಶ ನಾಯಕ ಅವರು ಉದ್ಘಾಟಿಸಿದರು.ಗಣಪತಿ ಶಿರೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಾವು…

Read More

ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಚಾಲನೆ …..!

ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಇಂದು ಮಂಗಳೂರು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಚಾಲನೆ ಸಿಕ್ಕಿತು.ಆಯುಷ್ ಇಲಾಖೆ, ಎಲ್ಲ ಆಯುಷ್ ಆಸ್ಪತ್ರೆಗಳು ಮತ್ತು ಕಾಲೇಜುಗಳು, ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಆಯುಷ್ ಹಬ್ಬವನ್ನು ಆಯೋಜಿಸಿತ್ತು.ನೋಂದಾಯಿಸಿಕೊಂಡವರಿಗೆ ಉಚಿತವಾಗಿ ನಾಡಿ ಪರೀಕ್ಷೆ ಜತೆಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಜತೆಗೆ ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಜೀವನಶೈಲಿ ಮತ್ತು ಒತ್ತಡ ನಿರ್ವಹಣಾ ಶಿಬಿರಗಳು, ಆರೋಗ್ಯಕ್ಕೆ ಅಗತ್ಯವಾದ…

Read More

ಫೆ.1ರಂದು ಪುತ್ತೂರಿನಲ್ಲಿ ದ್ವಾರಕೋತ್ಸವ–2026; ಸನ್ಮಾನ, ಸಾಂಸ್ಕೃತಿಕ ವೈಭವ

ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದ್ವಾರಕೋತ್ಸವ-೨೦೨೬ ಕಾರ್ಯಕ್ರಮವು ಫೆ.೧ ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಾರಕೋತ್ಸವವು ವರ್ಷಂಪ್ರತಿ ಆಚರಿಸುತ್ತಿರುವ ಗ್ರಾಹಕರ ಹಾಗೂ ಸಮಾಜದ ಸಕಲ ಬಂಧುಗಳ ಸಮ್ಮಿಲನ ದ್ವಾರಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ, ಕಲಾಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುತ್ತಿರುವ ಎಳೆಯರ ರಾಮಾಯಣ, ಕಿಶೋರ ಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ನಡೆಯಲಿದೆ…

Read More

ಕಾಂಬೋಡಿಯಾದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರ ಸಹಿತ 37 ಮಂದಿ ರಕ್ಷಣೆ…. !

ಮಂಗಳೂರು:ಉದ್ಯೋಗಕ್ಕೆಂದು ತೆರಳಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರು ಯುವಕರ ಸಹಿತ 37 ಮಂದಿಯನ್ನು ರಕ್ಷಿಸಿ ತಾಯ್ತಾಡಿಗೆ ಕರೆತರಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಉದ್ಯೋಗದ ಭರವಸೆಯೊಂದಿಗೆ ಕಾಂಬೋಡಿಯಾಗೆ ತೆರಳಿ ಕಳೆದ ಹಲವು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಐದು ಮಂದಿ ಸೇರಿ ಒಟ್ಟು 37 ಮಂದಿ ಭಾರತೀಯರು ಕೇಂದ್ರ ಸರಕಾರದ ಸತತ ಮಧ್ಯಸ್ಥಿಕೆ ಪರಿಣಾಮ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಕ ಕಾಂಬೋಡಿಯಾದ ರಾಜತಾಂತ್ರಿಕ ಇಲಾಖೆಗಳ…

Read More

ಕುಂದಾಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ನೋಡು ನೋಡುತ್ತಿದ್ದಂತೆ ಸುಟ್ಟು ಕರಕಲಾದ ಕಾರು!

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣಚಾಗಿ ಬೆಂಕಿಗಾಹುತಿಯಾದ ಘಟನೆ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಿಂದ ಶಬ್ದ ಸಹಿತ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭಾಸ್ಕರ್ ಆಚಾರ್…

Read More

ಪ್ರಿಯತಮೆ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಹಗ್ಗದ ಕುಣಿಕೆಗೆ ಕೊರಳೊಡ್ಡಿದ ಯುವಕ.!

ಉಡುಪಿ: ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮಾತನಾಡಿ ರೂಮ್ ಒಳಗೆ ಹೋದ ಯುವಕನೋರ್ವ ಕೆಲವೇ ಹೊತ್ತಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿದೆ. ಕುಂಜಿಬೆಟ್ಟು ನಿವಾಸಿ ರಾಜು ಅವರ ಪುತ್ರ ರಂಜಿತ್ (28) ಆತ್ಮಹತ್ಯೆಗೆ ಶರಣಾದ ಯುವಕ. ಜ.29ರಂದು ರಂಜಿತ್‌ ಅವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿದ್ದರು. ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬವರ ಜತೆ ಫೋನಿನಲ್ಲಿ ಮಾತನಾಡುತ್ತಾ ಅವರ ರೂಮಿನೊಳಗೆ ಹೋಗಿದ್ದಾರೆ. ರಾತ್ರಿ ವೇಳೆ ಮನೆಯ ವಾಟರ್ ಟ್ಯಾಂಕಿನ…

Read More

ಭಾರತದ ಮೊದಲ ಫ್ಲಡ್‌ಲೈಟ್ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್ ಇಂದು ಆರಂಭ : ಪಿಲಿಕುಳ ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮನೋಜ್ ಶೆಟ್ಟಿ

ಮಂಗಳೂರು: ಪಿಲಿಕುಳ ಗಾಲ್ಫ್ ಕ್ಲಬ್‌ನಲ್ಲಿ ಇಂದು ಸಂಜೆ 4 ಗಂಟೆಗೆ ಭಾರತದ ಮೊದಲ ಫ್ಲಡ್‌ಲೈಟ್ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್ (ಮಂಗಳೂರು ಕಪ್) ಉದ್ಘಾಟನೆಯಾಗಲಿದ್ದು ಇದರಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಗಾಲ್ಫ್ ಆಟಗಾರರು ಭಾಗವಹಿಸಲಿದ್ದು ಇದು ಪ್ರಮುಖ ಕ್ರೀಡಾ ಬೆಳವಣಿಗೆಯಾಗಿದೆ ಎಂದು ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು. ಅವರು ಗಾಲ್ಫ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಪಂದ್ಯಾಕೂಟದಲ್ಲಿ ೧೨ ಜನ ಅಂತರಾಷ್ಟ್ರೀಯಯ ಗಾಲ್ಫ್ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ . ಇಂದು…

Read More

ಅಡ್ಯಾರ್ ಗ್ರಾ.ಪಂ. ಮಾನವೀಯ ಕಾರ್ಯ! ಲ್ಯಾಂಡ್ ಫ್ಲೇವರ್ ಸಂಸ್ಥೆಯ ಸಹಯೋಗದಲ್ಲಿ 25 ಉಚಿತ ಹೊಲಿಗೆ ಯಂತ್ರಗಳ ವಿತರಣೆ

ಮಂಗಳೂರು: ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ 25 ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಶನಿವಾರ ಅಡ್ಯಾರ್ ಯಶಸ್ವಿ ಹಾಲ್ ನಲ್ಲಿ ಜರುಗಿತು.ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು, “ಭಾರತೀಯ ಸಂಸ್ಕೃತಿಯ ಮೂಲ ತಳಹದಿ ಇರುವುದು ನಾವು ಮಾಡುವ ದಾನ ಧರ್ಮದಲ್ಲಿ. ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಎಲ್ಲಾ ಧರ್ಮದಲ್ಲೂ ದಾನದ…

Read More
error: Content is protected !!