ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ … !

ಮಂಗಳೂರು: “ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್‌ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್‌ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್‌ ನಿಗದಿಪಡಿಸಿದ್ದು, ಇದು ತುಳುಚಿತ್ರರಂಗದಲ್ಲಿ…

Read More

ನರೇಗಾ ಬಚಾವೋ ಸಂಗ್ರಾಮ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕನ್ಯಾನದಲ್ಲಿ ಬ್ರಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹೆಸರು ಹಾಗೂ ಅದರ ಮೂಲ ಸ್ವರೂಪವನ್ನು ಬದಲಾಯಿಸಿರುವ ಕ್ರಮವನ್ನು ಖಂಡಿಸಿ, ಕನ್ಯಾನ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” ದಡಿ ಕನ್ಯಾನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಇವತ್ತು ಬ್ರಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕನ್ಯಾನ ಸ್ವಾಗತಿಸಿ ಮಾತನಾಡಿದರು.ಮುಖ್ಯ ಭಾಷಣ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ…

Read More

ಅಂಗಡಿ, ಹೋಟೆಲ್, ಕಂಪೆನಿ, ಕಚೇರಿ ಸಹಿತ ಎಲ್ಲ ಕಡೆಗಳಲ್ಲೂ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪೆನಿ, ಕಚೇರಿಗಳು, ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ 2 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ…

Read More

ರಸ್ತೆ ಸುರಕ್ಷತಾ ಜಾಥಾ….. !

ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ, ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಮಂಗಳೂರು ಹಾಗೂ ದಿ ಭಾರತ್ ಸೈಟ್ಸ್ ಮತ್ತು ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ–2026ರ ಅಂಗವಾಗಿ ಇಂದು ರಸ್ತೆ ಸುರಕ್ಷತಾ ಜಾಥಾ ಕಾರ್ಯಕ್ರಮವು ನಗರದ ಪುರಭವನದಿಂದ ಸ್ಟೇಟ್ ಬ್ಯಾಂಕ್ ವರೆಗೆ ಜಾಥಾ ನಡೆಯಿತು. ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ…

Read More

ಫೆ.7 ಮತ್ತು 8ರಂದು ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳ : ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ

ಮಂಗಳೂರು: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು ಇದರ ಪೂರ್ವಬಾವಿ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ. ಐಕಳ ಕಂಬಳದಲ್ಲಿ ಜೂಜು ನಿಯಂತ್ರಣ ಹಾಗೂ ಸಮಯಪಾಲನೆಗೆ ವಿಶೇಷ ಒತ್ತನ್ನು ನೀಡಲಾಗುವುದು ಎಂದು ಕಂಬಳ ಅಸೋಸಿಯೇಶನ್ ಮತ್ತು ಐಕಳ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು. ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಂಬಳದಲ್ಲಿ ಜೂಜು ಸಕ್ರಿಯವಾಗಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಐಕಳ ಕಂಬಳದಲ್ಲಿ…

Read More

ಐತಿಹಾಸಿಕ ಗುಜ್ಜರಕೆರೆ ನೀರು ಕುಡಿಯಲು ಅಯೋಗ್ಯ: ಪ್ರಯೋಗಾಲಯ ವರದಿಯಿಂದ ದೃಢ

ಮಂಗಳೂರಿನ ಗುಜ್ಜರಕೆರೆಗೆ ಐತಿಹಾಸಿಕ‌ಮತ್ತು ಧಾರ್ಮಿಕ ಮಹತ್ವವಿದೆ. ಆದರೆ ಅದರ ನೀರು ಈಗ ಬ್ಯಾಕ್ಟಿರಿಯಾಗಳಿಂದಾಗಿ ಕುಡಿಯಲು ಅಯೋಗ್ಯವಾಗಿದೆ.ನೀರು ಕಲುಷಿತವಾಗಿರುವುದು ಪ್ರಯೋಗಾಲಯ ವರದಿಯಿಂದ ಮತ್ತೊಮ್ಮೆ ಸಾಬೀತಾಗಿದೆ. ಒಂದು ಕಾಲದಲ್ಲಿ ರೋಗರುಜಿನ ಗಳಿದ್ದರೆ ಅದನ್ನು ಗುಣಪಡಿಸುವ ಪವಿತ್ರ ತೀರ್ಥಕೆರೆಯಾಗಿತ್ತು ಗುಜ್ಜರಕೆರೆ. ಅದು ಜನವಸತಿಯ ಒತ್ತಡದಿಂದಾಗಿ ಸದ್ಯ ರೋಗರುಜಿನ ಉಂಟುಮಾಡುವ ಬ್ಯಾಕ್ಟಿರಿಯಾಗಳಿಂದ ಕೂಡಿದೆ.ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದೆ. ಪ್ರಯೋಗಾಲಯದ ವರದಿ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆಯನ್ನು ಅಭಿವೃದ್ದಿ ಮಾಡಲಾಗಿತ್ತು. ಸುತ್ತಮುತ್ತ ನೋಡಲು…

Read More

ಸುರತ್ಕಲ್‌ನಲ್ಲಿ ವಿದ್ಯಾರ್ಥಿಗಳು–ಸಾರ್ವಜನಿಕರ ಶ್ರಮದಾನ: ರಾಷ್ಟ್ರೀಯ ಹೆದ್ದಾರಿ ಹಾಗೂ ಬಸ್ ನಿಲ್ದಾಣಗಳ ಸ್ವಚ್ಚತಾ ಅಭಿಯಾನ

ಮಂಗಳೂರು:ಸುರತ್ಕಲ್ ಪ್ರದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೂಡಿ ಬಸ್ ನಿಲ್ದಾಣ ಮತ್ತು ಪರಿಸರ ಸ್ವಚ್ಚಗೊಳಿಸುವ ಕಾರ್ಯ ನಡೆಸಿದರು.ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ ದೇಶದ ಆರ್ಥಿಕತೆಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಹೇಳಿದರು. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀನಿವಾಸ್ ಕಾಲೇಜು ಸಮೂಹ ವಿದ್ಯಾ ಸಂಸ್ಥೆ ಮುಕ್ಕ ಹಾಗೂ ಸುರತ್ಕಲ್ ಪೋಲಿಸ್…

Read More

ಕಮ್ಯುನಿಸ್ಟ್ ಹೋರಾಟಗಾರ ಕೃಷ್ಣ ಶೆಟ್ಟಿಯವರ ಜೀವನ ಚರಿತ್ರೆ ಬಿಡುಗಡೆ

ಮಂಗಳೂರು: ಕರಾವಳಿ ಕರ್ನಾಟಕದ ಖ್ಯಾತ ಕಮ್ಯುನಿಸ್ಟ್ ಹೋರಾಟಗಾರ ದಿ. ಕೃಷ್ಣ ಶೆಟ್ಟಿಯವರ ಜೀವನ ಹಾಗೂ ತ್ಯಾಗದ ಕಥೆಯನ್ನು ಒಳಗೊಂಡ ಪ್ರಮೋದ್ ಕುಮಾರ್ ರೈ ಸಂಪಾದಿತ ‘ಸ್ಟ್ರಗಲ್ ಫಾರ್ ಇಕ್ವಾಲಿಟಿ’ ಕೃತಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಕ್ಲಿಫ್ ಹೌಸ್ (ಮುಖ್ಯಮಂತ್ರಿಗಳ ಅಧಿಕೃತ ನಿವಾಸ)ನಲ್ಲಿ ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಎಂ.ಎ. ಬೇಬಿ ಅವರ ಪತ್ನಿ ಬೆಟ್ಟಿ ಲೂಯಿಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೇರಳ ಸರ್ಕಾರದ ಸಚಿವ ವಿ. ಶಿವಂಕುಟ್ಟಿ ಹಾಗೂ ಡಾ. ಆರ್. ಬಿಂದು…

Read More

ಫೆ.6ಕ್ಕೆ ರಾಜ್ಯಾದ್ಯಂತ “ಕರಿಕಾಡ”‘ಸಿನಿಮಾ ಬಿಡುಗಡೆ

ಮಂಗಳೂರು: “ಕರಿಕಾಡ ಸಿನಿಮಾವನ್ನು ಫೆ.6ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ ಗಳಲ್ಲಿ ರಿಲೀಸ್ ಮಾಡ್ತಾ ಇದ್ದೇವೆ. ನಾಯಕನಟನಾಗಿ ನಾನೇ ಅಭಿನಯಿಸಿದ್ದು ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ.ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ“ ಎಂದು ಚಿತ್ರದ ನಟ ಕಾಡ ನಟರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು“…

Read More

ಭಾರತದ ವಿಕಸಿತ ಕಲ್ಪನೆಗೆ ಭದ್ರ ತಳಹದಿಯಾಗಿದೆ ಈ ಬಾರಿಯ ಬಜೆಟ್ 2026 : ದ.ಕ. ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್

ಮಂಗಳೂರು :ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ,ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ ನಮ್ಮ ರಾಜ್ಯಕ್ಕೆ ಕೇಂದ್ರ ಬಜೆಟಿನಲ್ಲಿ ಏನೂ ಸಿಗಲಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಉತ್ತರವನ್ನು ಕೊಡುತ್ತೇನೆ ಎಂದು ದ.ಕ. ಮಾಜಿ ಸಂಸದರಾದ ನಳಿನ್‌ಕುಮಾರ್ ಕಟೀಲ್ ಹೇಳಿದರು . ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…

Read More
error: Content is protected !!