ನಾಡಗೀತೆ ಕಡ್ಡಾಯ ಆದೇಶ ಸಮರ್ಪವಲ್ಲ …. !

*ಮಂಗಳೂರು:ಕುವೆಂಪು ಅವರು ರಚಿಸಿರುವ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಅವಧಿ ಅತಿ ಉದ್ದವಾಗಿದ್ದು, ಮಕ್ಕಳಿಗೆ ಹಾಡುವುದು ಕಷ್ಟಸಾಧ್ಯವಾಗಿದೆ. 2.30 ನಿಮಿಷ ಅವಧಿಯ ಈ ಹಾಡನ್ನು ಶಾಲೆಗಳಲ್ಲಿ ಬೆಳಗ್ಗಿನ ವೇಳೆ, ವಿಶೇಷ ಕಾರ್ಯಕ್ರಮಗಳಲ್ಲಿ, ಸರಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಆಸಮರ್ಪಕ ನಿರ್ಧಾರವಾಗಿದೆ ಎಂದು ಮಂಗಳೂರು ಮೂಲದ ಗಾಯಕ, ರಾಗ ಸಂಯೋಜಕ ಮಾಣಿಕ್ಯರಾಜ್ ಹೇಳಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ , ‘ಜಯ…

Read More

ಮನ್‌ರೇಗಾ ಮಾರ್ಪಾಡು ಬಡವರಿಗೆ ಅನ್ಯಾಯ: ಮೋದಿ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಮಂಗಳೂರು:ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ಬಡವರಿಗೆ ತೊಂದರೆ ಆಗಿಲ್ಲ ಆದರೆ ನಮ್ಮ ಪಕ್ಷದಿಂದ ಜಮೀನ್ದಾರರಿಗಳಿಗೆ ಬಂಡವಾಳ ಶಾಹಿಗಳಿಗೆ, ಭೂಮಾಲಕರಿಗೆ ತೊಂದರೆ ಆಗಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೂ ತೊಂದರೆ ಆಗಿದೆ. ಕೇಂದ್ರದ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.ಮನ್‌ರೇಗಾ ಯೋಜನೆಯ ಹೆಸರನ್ನು ತಿದ್ದುವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಟೋಪಿ…

Read More

ಮಂಗಳೂರಿನಲ್ಲಿ ಜನವರಿ 24–25ರಂದು ತುಳುನಾಡು ಪ್ರೀಮಿಯರ್ ಲೀಗ್ (TNPL) ಬ್ಯಾಡ್ಮಿಂಟನ್ ಸೀಸನ್–1

ಮಂಗಳೂರು: ತುಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್(TNPL)) – ಸೀಸನ್ 1 ಓಪನ್ ರಾಜ್ಯ ಆಮಂತ್ರಣ ಬ್ಯಾಡ್ಮಿಂಟನ್ ಲೀಗ್ ಆಗಿದ್ದು, ಜನವರಿ 24 ಮತ್ತು 25ರಂದು ಮಂಗಳೂರಿನ ಉರ್ವಾ ಇಂಡೋರ್ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ. ಈ ಲೀಗ್‌ನಲ್ಲಿ ಭಾರತದ ವಿವಿಧ ಭಾಗಗಳಿಂದ 10 ಫ್ರಾಂಚೈಸ್ ತಂಡಗಳು ಭಾಗವಹಿಸಲಿದ್ದು, ಏಳು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಹಾಗೂ ಭಾರತವನ್ನು ಪ್ರತಿನಿಧಿಸಿದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು TNPL ಸ್ಥಾಪಕ ಹಾಗೂ…

Read More

ಭಾಷೆ, ಸಾಹಿತ್ಯ, ಸಂಸ್ಕೃತಿಪರ ಚಟುವಟಿಕೆ ಮೂಲಕಸ್ವಸ್ಥ ಸಮಾಜ ನಿರ್ಮಾಣ ಡಾ| ಎಚ್. ಪ್ರಭಾಕರ್ ರಾವ್

ಮಂಗಳೂರು:ಕಲೆ ಸಾಹಿತ್ಯಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಆರೋಗ್ಯಪೂರ್ಣರಾಗಿರುತ್ತಾರೆ. ಇದು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರದಾನ ಪಾತ್ರವಹಿಸುತ್ತದೆ. ವ್ಯಕ್ತಿ ಆರೋಗ್ಯ ವೈದ್ಯರಿಂದ ಸರಿಪಡಿಸಲಾಗುವುದು ಸಮಾಜದ ಸ್ವಾಸ್ಥ ಆರೋಗ್ಯಪೂರ್ಣವಾಗಬೇಕಾದರೆ, ವಾಮನ ರಾಯರಂತಹ ಸಂಘಟಕರ ಯೋಚನೆ, ಯೋಜನೆಗಳು ಸಾಂಗವಾಗಿ ನಡೆಯಬೇಕಿದೆ, ಅದಕ್ಕೆ ಎಲ್ಲರೂ ಸ್ಪಂದಿಸಬೇಕಿದೆ ಎಂದು ಕನ್ನಡ ಭವನದ “ರಜತ ಸಂಭ್ರಮ” ಕಾರ್ಯಕ್ರಮವಾದ ”ನಾಡು-ನುಡಿ ಹಬ್ಬ”-2026 ಕನ್ನಡ ಭವನದ “ಶ್ರೀ ಕೃಷ್ಣ ದೇವರಾಯ” ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ…

Read More

ರಿಯಲ್ ಎಸ್ಟೇಟ್ ಉದ್ಯಮಿ ಹಠತ್ತನೆ ಹೃದಯಾಘಾತಕ್ಕೆ ಬಲಿ.ವಾರದಂತರದಲ್ಲಿ ಹೃದಯ ಆಘಾತದಿಂದ ಬಾವ ,ಬಾಮೈದ ಸಾವು

ಉಳ್ಳಾಲ: ಜ-20 ಕೃಷಿಕರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿ (50)ಯವರು ಮಂಗಳವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠತ್ತನೆ ಸಾವನ್ನಪ್ಪಿದ್ದಾರೆ.ಮಂಗಳವಾರ ಬೆಳಿಗ್ಗೆ ಲವಲವಿಕೆಯಿಂದಲೇ ಪುತ್ರನನ್ನ ಶಾಲೆಗೆ ಬಿಟ್ಟು ಬಂದು,ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ರಘುರಾಮ್ ಅವರು ದಣಿದ ಕಾರಣ ಮನೆಯೊಳಗೆ ನಿದ್ದೆಗೆ ಜಾರಿದ್ದರು.ಮನೆಗೆ ಬಂದಿದ್ದ ಸಹೋದರಿಯು ರಘುರಾಮ್ ಅವರನ್ನ ಎಬ್ಬಿಸಲು ಹೋದಾಗ ರಘು ಅವರ ದೇಹವು ಪ್ರತಿಕ್ರಿಯಿಸದಿದ್ದಾಗ ವೈದ್ಯರನ್ನ ಕರೆಸಿ ಪರಿಶೀಲಿಸಿದ್ದು,ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಖಚಿತ ಪಡಿಸಿದ್ದಾರೆ….

Read More

ಜನವರಿ ೨೫ ರಿಂದ ಫೆಬ್ರವರಿ ೧ ರ ತನಕ ಕಡಬ ತಾಲೂಕಿನ ಹಲವೆಡೆ ಹಿಂದು ಐಕ್ಯ ಸಂಗಮ ಕಾರ್ಯಕ್ರಮ

ಕಡಬ: ಕಡಬ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಕಡಬ ತಾಲೂಕಿನ ವಿವಿಧೆಡೆ ಜನವರಿ ೨೫ ರಿಂದ ಫೆ ೧ ರ ತನಕ ಹಿಂದೂ ಸಂಗಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಹರಿರಾಮಚಂದ್ರ ಉಪ್ಪಿನಂಗಡಿ ಹೇಳಿದರು.ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಿತಿಯ ಯೋಜನೆಯಂತೆ ಕಡಬ ತಾಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮೂರು ಅಥವಾ ನಾಲ್ಕು ಗ್ರಾಮಗಳನ್ನು ಒಳಗೊಂಡoತೆ ಒಂದು ಮಂಡಲ ಮಾಡಿ ಕಾರ್ಯಕ್ರಮ ನಡಸಲಾಗುವುದು….

Read More

ಅಂತರ್ ರಾಜ್ಯ ಪ್ರತಿಷ್ಠಿತ ‘ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026” ಮುಡಿಗೇರಿಸಿಕೊಂಡ ಖ್ಯಾತ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್

ಮಂಗಳೂರು:ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026 ಅಂತರ್ ರಾಜ್ಯ ಪ್ರಶಸ್ತಿಯನ್ನು ಖ್ಯಾತ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಕೆ.ವಾಮನ್ ರಾವ್, ನಿರ್ದೇಶಕ ಕೆ.ಎನ್.ವೆಂಕಟ್ರಮಣ ಹೊಳ್ಳ, ಕರ್ನಾಟಕ ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ, ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ,…

Read More

ಉಡುಪಿ ಶ್ರೀಕೃಷ್ಣಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷ ಭಕ್ತಾದಿಗಳು ಇನ್ನು ಮುಂದೆ ಅಂಗಿ ತೆಗೆದು ಪ್ರವೇಶಿಸಬೇಕಾಗಿದೆ. ಇಂದಿನಿಂದ ಈ ನಿಯಮವನ್ನು ಪರ್ಯಾಯ ಶೀರೂರು ಮಠ ಕಡ್ಡಾಯಗೊಳಿಸಿದೆ.ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಚಾಲ್ತಿಯಲ್ಲಿರಲಿದ್ದು, ಮಹಿಳೆಯರು ಸಭ್ಯ ಉಡುಪುಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಸ್ಟೀವ್ ಲೆಸ್ ಉಡುಪುಗಳನ್ನು ಧರಿಸಿ ಬರುವ ಮಹಿಳೆಯರು ಹಾಗು ಪುರುಷರಿಗೆ ಪ್ರವೇಶವಿಲ್ಲ. ಹಾಗೆಯೇ ಪುರುಷ ಭಕ್ತರು ದೇವಳದ ಒಳಗಡೆ ಪ್ರವೇಶಿಸುವ ಮೊದಲು ಅಂಗಿ ತೆಗೆಯಬೇಕು ಎಂಬ ನಿಯಮ ಮಾಡಲಾಗಿದೆ.ಶಿರೂರು ಮಠದ ದಿವಾನರಾದ…

Read More

ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಅಭಿರುಚಿ ಶ್ಲಾಘನೀಯ : ರಾಜೇಶ್ ಶೆಟ್ಟಿ

ಮಂಗಳೂರು : ವಿವಿಧ ಕಲಾ ಪ್ರಕಾರಗಳ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಭಾಷೆಯ ಬಗ್ಗೆ ಅಭಿರುಚಿ ಅಭಿಮಾನ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಕೆ.ಎಸ್.ಆರ್ .ಟಿ.ಸಿ. ಮಂಗಳೂರು ವಿಭಾಗೀಯ ನಿಯಂತ್ರಾಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ತುಳುಭವನದಲ್ಲಿ ಹಮ್ಮಿಕೊಂಡ ‘ಜೋಕ್ಲೆ ಕಲಾ ಚಾತುರ್ಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಕಾಲೇಜು ಹಂತದಲ್ಲಿ ವಿವಿಧ ತುಳು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕ್ರತಿ ಬಗ್ಗೆ ವಿಚಾರಗಳನ್ನು…

Read More

ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದರೆ ಲೈಸನ್ಸ್ ರದ್ದು- ಡಿ.ಸಿ ಸೂಚನೆ

ಮಂಗಳೂರು:18 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರು ಅಥವಾ ಕಿಶೋರ ಕಾರ್ಮಿಕರನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸಲು ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆ, ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕ ಇಲಾಖೆ ವತಿಯಿಂದ ಬಾಲಕಾರ್ಮಿಕರು…

Read More
error: Content is protected !!