ಕುದ್ರೋಳಿ ದಸರಾ ಅದ್ದೂರಿ ಶಾರದಾ ಮೆರವಣಿಗೆ ಅಕ್ಟೋಬರ್ ೨ ಕ್ಕೆ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಅ. 2ರಂದು ಅದ್ದೂರಿಯಾಗಿ ನಡೆಯಲಿದೆ . ಈಗಾಗಲೇ ಶೋಭಾಯಾತ್ರೆ ಗೆ ಪೂರ್ವ ಸಿದ್ದತೆಗಳು ನಡೆಸಲಾಗಿದೆ ಎನ್ನಲಾಗಿದೆ . ಸಂಜೆ 4ರಿಂದ ಶ್ರೀ ಶಾರದಾಂಬೆಯ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಡಲಿದೆ. ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ನಗರದಲ್ಲಿ ಸಾಗಿಬರಲಿದೆ. ಕುದ್ರೋಳಿ ಕ್ಷೇತ್ರದಿಂದ ಹೊರಟು ಕಂಬಾರ…
