ಮಕ್ಕಳನ್ನು ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಿ: ಖಾದರ್

ಮಂಗಳೂರು: ವಿದ್ಯಾರ್ಥಿಗಳು ದೇಶದ ಪರಂಪರೆ ಉಳಿಸಿಕೊಂಡು ಹೋಗುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಗತ್ಯ. ಮಕ್ಕಳನ್ನು ತಂದೆ, ತಾಯಂದಿರ ಮಾತ್ರವಲ್ಲದೆ ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಬೇಕಿದೆ ಎಂದು ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲಾ ಸಭಾಂಗಣದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ…

Read More

ಆನ್‌ಲೈನ್ ಟ್ರೇಡಿಂಗ್ ವಂಚನೆ: 6 ಮಂದಿ ಬಂಧನ

ಮಂಗಳೂರು: ಲೈನ್ ವಂಚನೆ ಪ್ರಕರಣಗಳಲ್ಲಿ ಒಟ್ಟು ಆರು ಮಂದಿ ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, ಒಟ್ಟು ೬ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್(೫೪), ಎಂಬವರಿಗೆ ಹೂಡಿಕೆ ಹೆಸರಿನಲ್ಲಿ ಒಟ್ಟು ೭೫,೦೦,೦೦೦ರೂ. ಹಣವನ್ನು ಆನ್‌ಲೈನ್ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸೆನ್ ಪೊಲೀಸರು, ಸುರತ್ಕಲ್ ಕೋಡಿಕೆರೆಯ ಮೊಹಮದ್ ಕೈಸ್(೨೦), ಹೆಜಮಾಡಿ ಕನ್ನಂಗಾರಿನ ಅಹಮದ್ ಅನ್ವೀಜ್ (೨೦), ಬಂಟ್ವಾಳ ಜೋಡುಮಾರ್ಗದ ಸಫ್ವಾನ್(೩೦), ತಾಸೀರ್(೩೧) ಎಂಬವರನ್ನು ಬಂಧಿಸಿ, ಮೊಬೈಲ್ ಫೋನ್‌ಗಳನ್ನು…

Read More

ಮ . ನ . ಪಾ ದಲ್ಲಿ ಕನ್ನಡ ಬಾರದ ಅನ್ಯ ಭಾಷೆಯ ಅಧಿಕಾರಿಯ ನೇಮಕ: ಕನ್ನಡ ಪರ ಸಂಘಟನೆಗಳು ಕಿಡಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡ ಓದಲು ಬರೆಯಲು ಬಾರದ ಅಧಿಕಾರಿ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ. ಕೇರಳ ಮೂಲದ ಮಹಿಳೆಯು ಕೇರಳದ ಮಲಯಾಳಂ ಮಾಧ್ಯಮದಲ್ಲಿ ವಿಧ್ಯಾಭ್ಯಾಸವನ್ನು ಮಾಡಿರುವುದು ಕನ್ನಡ, ತುಳು ಭಾಷೆ ಬಾರದಿರುವುದು ಜನಸಾಮಾನ್ಯರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಕನ್ನಡ ಸಂಘಗಳ ಆಕ್ರೋಶವಾಗಿದೆ. ಕೆ.ಸಿ.ಎಸ್.ಆರ್ ನಿಯಮಗಳು 1974ರಲ್ಲಿ ಸರಕಾರಿ SSLC/10ನೇ ತರಗತಿಯಲ್ಲಿ ಕನ್ನಡ ಭಾಷೆ…

Read More

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ವತಿಯಿಂದ ನಡೆದ ಹನ್ನೊಂದನೇ ವರ್ಷದ ಗಣೇಶೋತ್ಸವ.

ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಇದರ ವತಿಯಿಂದ ನಡೆದ 11ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆಗಸ್ಟ್ 31ರಂದು ಆದಿತ್ಯವಾರ ಇಂಡಿಯನ್ ಅಸೋಸಿಯೇಷನ್ ಹಾಲ್ ಅಜ್ಮಾನ್ ನಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಪುರೋಹಿತರಾದ ಸಂತೂರ್ ಶ್ರೀ ಲಕ್ಷ್ಮಿಕಾಂತ್ ಭಟ್ ಹಾಗೂ ಶ್ರೀ ರಾಜೇಶ್ ಅಡಿಗರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು.ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಮಹಾ ಅನ್ನದಾನದಲ್ಲಿ ಸಹಸ್ರ ಭಕ್ತಾದಿಗಳು ಪಾಲ್ಗೊಂಡು ಸಂಜೆ ವಿಸರ್ಜನಾ ಮೆರವಣಿಗೆ ನಡೆಯಿತು. ನಡೆದ ಸಭಾ…

Read More

ಎ ಟಿ ಎಂ ಕಳ್ಳತನದ ವಿಫಲ ಯತ್ನ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಉಳ್ಳಾಲ: ರಾತ್ರೋ ರಾತ್ರಿ ಕೋಟೆಕಾರು ಬೀರಿ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ನಾಗಪ್ಪ ಕೇರಳಟ್ಟಿ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು…

Read More

7ರಂದು ನಗರದಲ್ಲಿ ಫಾತಿಮಾ ರಲಿಯಾ ಅವರ ‘ಕೀಮೋ’ ಪುಸ್ತಕ ಬಿಡುಗಡೆ.

ಭಾನುವಾರ  ಸಂಜೆ‌ ನಾಲ್ಕು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್‌ ಸಿಕ್ವೇರಾ ಸಭಾಂಗಣದಲ್ಲಿ ಫಾತಿಮಾ ರಲಿಯಾ ಅವರ ಅನುಭವ ಕಥನ ‘ಕೀಮೋ’ ಬಿಡುಗಡೆಯಾಗಲಿದೆ.  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ರಮ್ಯ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶುಟ್ಟಿಕೊಪ್ಪ ಮಾತನಾಡಲಿದ್ದಾರೆ‌. ಈ ಪುಸ್ತಕವನ್ನು ‘ಜೀರುಂಡೆ ಪುಸ್ತಕ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರ ನಾಲ್ಕನೇ ಕೃತಿಯಾಗಿದೆ. ‘ಜೀರುಂಡೆ ಪುಸ್ತಕ’ದ ಎಲ್ಲಾ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ…

Read More

ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ-ಹೂವಿನ ಮಾರಾಟದ ಝಲಕ್

ಕಾಸರಗೋಡು ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ ಹೂವಿನ ಮಾರಾಟ ಜಬರ್ದಸ್ತ್ ಆಗಿತ್ತು. ನಗರದ ಬಸ್ ನಿಲ್ದಾಣ ದಲ್ಲಿ ಹೂವು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿನ ಹೂವು ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ಮಾಡಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ಹೂವನ್ನು ಮಾರಾಟಕ್ಕೆಂದು ಹರಡಿತ್ತು. ಇದು ನೋಡುಗರ ಕಣ್ಣನ್ನು ಸೆಳೆಯುತ್ತಿತ್ತು. ಪುಷ್ಪ ಕಾಶಿಯೇ ಈ ಭಾಗದಲ್ಲಿ ಮೇಳೈಸ್ತ ಇರುವುದು ಕಂಡು ಬಂದಿದೆ. ಕೇರಳ ದಾದಂತ್ಯ ಇಂದು ಓಣಂ ಹಬ್ಬವನ್ನು ಮಹಾಬಲಿಯ ಸ್ಮರಣಾರ್ಥಕವಾಗಿ…

Read More

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಫೈನಲ್ ಪಿಚ್ ಡೇ’

ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇ.ಡಿ.ಸಿ.) ವತಿಯಿಂದ ಎಕ್ಸ್‌ಪ್ಲೋರಿಂಗ್ ಎಂಟ್ರಪ್ರಿನರ್ಶಿಪ್ ಪ್ರೋಗ್ರಾಂನ ಫೈನಲ್ ಪಿಚ್ ಡೇ ಆಯೋಜಿಸಲಾಯಿತು. ಉಡುಪಿ ಎಸ್.ಎಂ.ವಿ.ಐ.ಟಿ.ಎಂ. ಮತ್ತು ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ 14 ವಿದ್ಯಾರ್ಥಿ ತಂಡಗಳು ತಮ್ಮ ಸ್ಟಾರ್ಟ್‌ಅಪ್ ಕಲ್ಪನೆಗಳನ್ನು ಸೆಕ್ಷನ್ ಇನ್ಫಿನ್–8 ಫೌಂಡೇಶನ್ (ಎಸ್‌.ಐ.–8) ನೇಮಕ ಮಾಡಿದ ತೀರ್ಪುಗಾರರ ಮುಂದಿಡಿದರು. ತೀರ್ಪುಗಾರರಾಗಿ ಶ್ರೀ ಅಜಯ್ ಪ್ರಭು, ವ್ಯವಸ್ಥಾಪಕ ನಿರ್ದೇಶಕ, ಕೆ.ವಿ.ಪಿ. ಬಿಸಿನೆಸ್ ಸೊಲ್ಯೂಶನ್ಸ್, ಶ್ರೀ ಪುನೀತ್ ರೈ, ಇಂಕ್ಯುಬೇಶನ್ ಮ್ಯಾನೇಜರ್, ಅಟಲ್ ಇಂಕ್ಯುಬೇಶನ್ ಸೆಂಟರ್, ನಿಟ್ಟೆ,…

Read More

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟಿತ ಪುಸ್ತಕ- ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತವಾಗಿ ವಿತರಣೆ

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಕೇರಳದ ಶ್ರೀಮದ್ ಎಡನೀರು ಮಠ, ಕಾಸರಗೋಡು ಇವರ ಸಹಯೋಗದೊಂದಿಗೆ ದಿನಾಂಕ:03.09.2025ರಂದು ಸಂಜೆ 7.15 ಗಂಟೆಗೆ ಕಾಸರಗೋಡು ಜಿಲ್ಲೆಯ ಗಡಿ ಭಾಗದ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಎಲ್ಲಾ ಕನ್ನಡ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು. ಪ್ರೋ. ಕೆ.ಸಿ ಶಿವಪ್ಪನವರು ರಚಿಸಿದ ಮುದ್ದುರಾಮನ 10 ಆವೃತ್ತಿ ಕೃತಿಗಳನ್ನು ಕೂಡ ಈ ಸಂದರ್ಭದಲ್ಲಿ ವಿತರಿಸಲಾಯಿತು. ಹೊರನಾಡು ಗಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹೊರತಂದಿರುವ…

Read More

ಮೋದಿ ಸರ್ಕಾರದಿಂದ ಜನತೆಗೆ ಐತಿಹಾಸಿಕ ಕೊಡುಗೆ :- ಶಾಸಕ ಕಾಮತ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ಮತ್ತಷ್ಟು ಜನಸ್ನೇಹಿ ಹಾಗೂ ಸರಳೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ನವಚೈತನ್ಯ ತುಂಬಿದ್ದಲ್ಲದೇ, ಜನರ ಜೀವನ ಸುಧಾರಣೆಗೆ ಮಹತ್ವದ ಕ್ರಮ ಕೈಗೊಂಡಿದೆ. ಆ ಮೂಲಕ ನವ ಭಾರತದ ನಿರ್ಮಾಣಕ್ಕೆ ಮುಂದಡಿಯಿಟ್ಟಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು. ಅಮೆರಿಕಾದಂತಹ ಜಾಗತಿಕ ಮಟ್ಟದ ದೈತ್ಯ ರಾಷ್ಟ್ರಗಳ ಸವಾಲುಗಳನ್ನು ಮೆಟ್ಟಿ ನಿಂತು ದೇಶ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದು ಈ ಐತಿಹಾಸಿಕ ನಿರ್ಧಾರದಿಂದಾಗಿ ದೈನಂದಿನ, ಶೈಕ್ಷಣಿಕ, ಆರೋಗ್ಯ, ರಕ್ಷಣಾ, ಕೃಷಿ, ಆಟೋಮೊಬೈಲ್, ಎಲೆಕ್ಟ್ರಾನಿಕ್, ಹೀಗೆ ಜನಸಾಮಾನ್ಯರ…

Read More
error: Content is protected !!