ಅಡ್ಯಾರ್ ವೀರಾಂಜನೇಯ ದೇವಸ್ಥಾನದಲ್ಲಿ ಗೋ ನಂದಿ ಪರಿವಾರ ರಥಯಾತ್ರೆಯ ಉದ್ಘಾಟನೆ

*ಗೋವು ಭಾರತದ ರಾಷ್ಟ್ರೀಯ ಪ್ರಾಣಿಯಾಗಬೇಕು : ಶ್ರೀ ರಾಜಶೇಖರಾನಂದ ಸ್ವಾಮೀಜಿ * ದೇಶಿ ಗೋವಿನ ಕುರಿತಾಗಿ ಜಾಗೃತಿ ಮೂಡಿಸಿ, ಅವುಗಳ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಬಂಟ್ವಾಳದ ಪುದು ಗ್ರಾಮದಲ್ಲಿ ಇರುವ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ). ವತಿಯಿಂದ ಮಾರ್ಚ್ 5 ರಂದು ಗೋನಂದಿ ಪರಿವಾರ ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮವು ಅಡ್ಯಾರ್ ವೀರಾಂಜನೇಯ ದೇವಸ್ಥಾನದ ಸನ್ನಿಧಾನದಲ್ಲಿ ನಡೆಯಿತು.ಅಡ್ಯಾರ್ ಕಟ್ಟೆಯಿಂದ ರಥದ ಪುರ ಪ್ರವೇಶವನ್ನು,ಊರ ಪರವೂರ ಗಣ್ಯರು,ವೀರಾಂಜನೇಯ ದೇವಸ್ಥಾನದ ಪದಾಧಿಕಾರಿಗಳು,ಗ್ರಾಮಸ್ತರು ಭವ್ಯ…

Read More

ಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್ ಕೂಟ ಮಾರ್ಚ್ 10ರಂದು

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ “ಪ್ರೀತಿ ಹರಡಲಿ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ಹಾಗೂ ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವನ್ನು ಮಾರ್ಚ್ 10, 2026ರಂದು ಸಂಜೆ 5.15ಕ್ಕೆ ಆಯೋಜಿಸಲಾಗಿದೆ. ಬಾವುಟಗುಡ್ಡದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದ ಕುರಿತು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ…

Read More

ಮಂಗಳೂರಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅ.ಕ್ರ.56/2026 ಕಲಂ. 8(c),20(b) (ii) A, 22(C)) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಕೇಸ್ ದಾಖಲಾಗಿದ್ದು ಬಂಧಿತರನ್ನು ಮೊಹಮ್ಮದ್ ಸಯ್ಯದ್ ಆಫ್ರಿದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಷಾನ್ ಹಾಗೂ ಫೆಲಿಕ್ಸ್.ಪಿ.ಜೊಸೆಫ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 53.87 ಗ್ರಾಂ MDMA, 103. 20 ಗ್ರಾಂ ಹೈಡ್ರೋವಿಡ್ ಗಾಂಜಾ ಮತ್ತು MG Hector ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ದಿನಾಂಕ 04-03-2026 ರಂದು ಮಂಗಳೂರು ದಕ್ಷಿಣ ಪೊಲೀಸ್…

Read More

ಮುಲ್ಕಿ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

2022ರಲ್ಲಿ ಮುಲ್ಕಿಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2022ರ ಮಾರ್ಚ್ 19ರಂದು ರಾತ್ರಿ ಸುಮಾರು 9.45ರ ಸುಮಾರಿಗೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಟೂರಿಸ್ಟ್ ಕಾರು ಪಾರ್ಕಿಂಗ್ ಸಮೀಪ ಈ ಘಟನೆ ನಡೆದಿತ್ತು. ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ (47) ಅವರನ್ನು ಹಣಕಾಸಿನ ವೈಷಮ್ಯದಿಂದ ಆರೋಪಿ ಮುರುಗನ್ ಕ್ರೂರವಾಗಿ ಹತ್ಯೆ ಮಾಡಿದ್ದನು. ಹರೀಶ್ ಸಾಲ್ಯಾನ್ ಅವರ ಮುಖಕ್ಕೆ ಸಿಮೆಂಟ್ ಕಾಂಕ್ರಿಟ್ ಅಂಟಿದ್ದ ಕೆಂಪು…

Read More

ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ವಶಕ್ಕೆ

ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಮಹಮ್ಮದ್ ಶಫೀಕ್, ಎಂಬತನನ್ನು ಬಂಧಿಸಲಾಗಿದೆ. ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಎಂಬವರು ಮಾರ್ಚ್ 2ರ ಮಧ್ಯಾಹ್ನ ಪುತ್ತೂರಿನಿಂದ ಕೂರ್ನಡ್ಕಕ್ಕೆ ತನ್ನ ಕಾರಿನಲ್ಲಿ ಹೋಗುತ್ತಿದ್ದರು. ಆಗ ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ಸುಮಾರು 30 ವರ್ಷ ಪ್ರಾಯದ ಯುವಕನೊಬ್ಬ ಹಕೀಂ ಅವರ ಕಡೆಗೆ…

Read More

ಮಂಗಳೂರು: ಬೋಳಾರ ವಾರ್ಡಿನಲ್ಲಿ ಟಿವಿಎಸ್ ಫ್ಯಾಕ್ಟರಿ ರಸ್ತೆಯ ಸಮಗ್ರ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 58ನೇ ಬೋಳಾರ ವಾರ್ಡಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಟಿವಿಎಸ್ ಫ್ಯಾಕ್ಟರಿ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅನೇಕ ಕಾಮಗಾರಿಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ತಡೆ ನೀಡಿತ್ತು ಎಂದು ಆರೋಪಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ…

Read More

“ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ ಎಂಬ ಹೇಳಿಕೆಯಿಂದ ಅಸಮಾಧಾನ”: ಅನಿಲ್ ಕುಮಾರ್

ಮಂಗಳೂರು: ನ್ಯಾಯಮೂರ್ತಿ ನಾಗ್ ಮೋಹನ್‌ದಾಸ್ ಅವರು “ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ, ಜಾತಿಗಳ ಗುಂಪು” ಎಂದು ನೀಡಿರುವ ಹೇಳಿಕೆಯಿಂದ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಆದಿದ್ರಾವಿಡ ಸಮುದಾಯದ ಮುಖಂಡ ಹಾಗೂ ಸಮಿತಿಯ ಸಲಹೆಗಾರ ಅನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಕ್ರಮದಲ್ಲಿ ಹಿಂದಿನ 101 ಜಾತಿಗಳನ್ನು ಪ್ರವರ್ಗ ಎ, ಬಿ, ಸಿ ಎಂದು ಮರುವರ್ಗೀಕರಿಸಿರುವುದರಿಂದ ಹಲವು ಗೊಂದಲಗಳು ಉಂಟಾಗಿವೆ ಎಂದು ಹೇಳಿದರು. ಹಲವು ದಶಕಗಳಿಂದ ಸರ್ಕಾರವೇ…

Read More

ಬಂಟ್ವಾಳದಲ್ಲಿ ಮಾ.14ರಂದು ರಾಷ್ಟ್ರೀಯ ಲೋಕ ಅದಾಲತ್: ಪೂರ್ವಭಾವಿ ಸಭೆ

ಬಂಟ್ವಾಳ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ್ 14ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ವಿಭಾಗ ಮೊಕದ್ದಮೆಗಳು, ಹಣ ವಸೂಲಿ ಪ್ರಕರಣಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ವಿವಾಹ ಸಮನ್ವಯ…

Read More

ಗಿರೀಶ್ ಪಿ ಎಂ ಇವರ ಶೈಕ್ಷಣಿಕ ಸಾಧನೆ ಗುರುತಿಸಿ ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರದಿಂದ ಸನ್ಮಾನ

ಶ್ರೀ ಗುರುಪರಾಶಕ್ತಿ ಮಠ, ಮರಕಡ ಹಾಗೂ ಶ್ರೀ ಪರಾಶಕ್ತಿ ಕ್ಷೇತ್ರ, ಮಡ್ಯಾರು ಇದರ ಸ್ಥಾಪಕ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಪೂರ್ಣಾನುಗ್ರಹದೊಂದಿಗೆ, ಪೂಜನೀಯ ಮಾತೆ ಶಕುಂತಲಾ ಅಮ್ಮನವರು ಮತ್ತು ಶ್ರೀ ಕ್ಷೇತ್ರದ ಮಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ನಡೆದ ಶ್ರೀ ಪರಾಶಕ್ತಿ ಕ್ಷೇತ್ರ, ಮಡ್ಯಾರು ಇಲ್ಲಿನ ಇಪ್ಪತ್ತೆರಡನೇ ಪ್ರತಿಷ್ಠಾ ವರ್ಧಂತಿ ಹಾಗೂ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಅರ್ಹ ಸಾಧಕರಿಗೆ ‘ಪ್ರತಿಭಾ ಪುರಸ್ಕಾರ’ ಮತ್ತು ‘ಸನ್ಮಾನ’ ಕಾರ್ಯಕ್ರಮ…

Read More

ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ: ಮಹಿಳಾ ವ್ಯಾಪಾರಿಗಳ ಸಂಕಷ್ಟದ ಪರಿಶೀಲನೆ

ಮಂಗಳೂರು: ಮಂಗಳೂರಿನ ಕೇಂದ್ರ ಭಾಗವಾದ ಸ್ಟೇಟ್ ಬ್ಯಾಂಕ್ ಪರಿಸರದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟದ ಹಿನ್ನೆಲೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಗುರುವಾರ ಮಧ್ಯಾಹ್ನ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹಸಿ ಹಾಗೂ ಒಣಮೀನು ಮಾರುಕಟ್ಟೆಯ ಪ್ರತಿ ಭಾಗಕ್ಕೂ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ದಶಕಗಳಿಂದ ಮೀನು ಮಾರಾಟದ ಮೂಲಕ ಜೀವನ ಸಾಗಿಸುತ್ತಿರುವ ನೂರಾರು ಮಹಿಳೆಯರು ತಮ್ಮ…

Read More
error: Content is protected !!