ತಳಕಲ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಪಕ್ಕೀರಪ್ಪ ವಜ್ರಬಂಡಿಗೆ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026
ಕಾಸರಗೋಡು, ಜು.15:* ತಳಕಲ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು, ಸಾಹಿತಿ ಹಾಗೂ ಕೃತಿಕರ್ತರಾದ ಡಾ. ಪಕ್ಕೀರಪ್ಪ ವಜ್ರಬಂಡಿ ಅವರಿಗೆ ಪ್ರತಿಷ್ಠಿತ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026” ಪ್ರದಾನ ಮಾಡಲಾಗುತ್ತಿದೆ. ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ” ಹಾಗೂ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಾಹಿತ್ಯ, ಶಿಕ್ಷಣ ಹಾಗೂ ಕನ್ನಡ ನಾಡು-ನುಡಿ ಸೇವೆಯಲ್ಲಿ ಡಾ. ಪಕ್ಕೀರಪ್ಪ ವಜ್ರಬಂಡಿ ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ…
