ಕನ್ನಡ ಭವನದ ವಿದ್ಯಾರ್ಥಿ-ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಜು. 26ಕ್ಕೆ ಮುಂದೂಡಿಕೆ

ಕಾಸರಗೋಡು:ರಾಮಕ್ಷತ್ರಿಯ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಗುವ “ಭರವಸೆಯ ಬೆಳಕು – ಸ್ಟೂಡೆಂಟ್ ಅಚೀವ್‌ಮೆಂಟ್ ಅವಾರ್ಡ್” ಹಾಗೂ ಶಿಕ್ಷಕರಿಗೆ ಪ್ರದಾನ ಮಾಡುವ “ಭರವಸೆಯ ಶಿಕ್ಷಣ ರತ್ನ – ಟೀಚರ್ಸ್ ಅಚೀವ್‌ಮೆಂಟ್ ಅವಾರ್ಡ್ 2026” ಕಾರ್ಯಕ್ರಮವನ್ನು ಜುಲೈ 26ಕ್ಕೆ ಮುಂದೂಡಲಾಗಿದೆ. ಕನ್ನಡ ಭವನ, ಕಾಸರಗೋಡು ವತಿಯಿಂದ ನೀಡಲಾಗುವ ಈ ಪ್ರತಿಭಾ ಪುರಸ್ಕಾರ ಸಮಾರಂಭವು ಈ ಹಿಂದೆ ಪ್ರಕಟಿಸಿದ್ದ ದಿನಾಂಕದ ಬದಲಿಗೆ ಜುಲೈ 26, ಭಾನುವಾರ ನಡೆಯಲಿದೆ ಎಂದು ಕನ್ನಡ ಭವನದ ಸ್ಥಾಪಕ-ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ…

Read More

ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ- ಕಾಸರಗೋಡು ಕರ್ನಾಟಕ ಉತ್ಸವಕ್ಕೆ ಸಿದ್ಧತೆ

ಗಡಿನಾಡು ಕಾಸರಗೋಡು ಪ್ರದೇಶದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಇತಿಹಾಸವನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಕುರಿತು ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರೊಂದಿಗೆ ಸಂವಾದ ಚರ್ಚೆ ನಡೆಸಿ ಕಾಸರಗೋಡು ಕನ್ನಡಿಗರ ಉದ್ಯೋಗ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು ಸಚಿವರು, ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸರ್ವ ಪಕ್ಷದ ನಾಯಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು,ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು,ಕರ್ನಾಟಕ…

Read More

​ವಿಶ್ವ ಜನಸಂಖ್ಯಾ ದಿನ: ಜಾಗೃತಿ ಕಾರ್ಯಕ್ರಮ

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಸರ್ಕಾರಿ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಗಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ​ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ ‘ಪ್ರಸವಗಳ ನಡುವೆ ಸಮರ್ಪಕ ಅಂತರವು ತಾಯಿ ಮತ್ತು ಶಿಶುವಿನ ಆರೋಗ್ಯಕ್ಕೆ ಅಗತ್ಯ’ ಎಂಬುದಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌.ಸಿ.ಎಚ್ ಅಧಿಕಾರಿ ಡಾ. ಸಂತೋಷ್ ಬಿ….

Read More

ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಟಾಪರ್‌ಗಳಿಗೆ ಶ್ರೀವಾಣಿ ವಿಜಯ ಪ್ರೌಢಶಾಲೆಯಲ್ಲಿ ಸನ್ಮಾನ

ಮಂಜೇಶ್ವರ : ಕೊಡ್ಲಮೊಗರು ಶ್ರೀವಾಣಿ ವಿಜಯ ಪ್ರೌಢಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮದಲ್ಲಿ, ಪ್ಲಸ್ ಟು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಹರ್ಷಾದ್ ವರ್ಕಾಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ರಾಜ್‌ಮೋಹನ್ ಉಣ್ಣಿತ್ತಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ​ಈ ಸಂದರ್ಭದಲ್ಲಿ, ಕಳೆದ ಪರೀಕ್ಷೆಯಲ್ಲಿ…

Read More

ಸಾರ್ವಜನಿಕರ ಬೇಡಿಕೆಗೆ ಮಣಿದು ಫೂಟ್ ಪಲ್ಸ್ ಥೆರಪಿ ಶಿಬಿರ ಜುಲೈ 18ರವರೆಗೆ

ಉಪ್ಪಳ, ಜುಲೈ 14: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳದ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಅವಧಿಯನ್ನು ಜುಲೈ 18, 2026ರ ಶನಿವಾರದವರೆಗೆ ವಿಸ್ತರಿಸಲಾಗಿದೆ. ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ದಿನದಿಂದ ದಿನಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಜನರಿಗೆ ಈ ಸೇವೆಯ ಪ್ರಯೋಜನ ದೊರೆಯುವ ಉದ್ದೇಶದಿಂದ ಅವಧಿ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಆಸಕ್ತ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉಚಿತ…

Read More

ಉಪ್ಪಳದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಉಪ್ಪಳ : ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಜುಲೈ 2 ರಂದು ಆರಂಭಗೊಂಡ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಥೆರಪಿಯ ಪ್ರಯೋಜನ ಪಡೆದರು. ತರುವಾಯ ಇಂದು ಮಾಹಿತಿ…

Read More

ಮಂಜೇಶ್ವರದಲ್ಲಿ ಹಲಸಿನ ಸಂಭ್ರಮ: ಮೂರು ದಿನಗಳ ಮೇಳಕ್ಕೆ ಜನಸಾಗರ, ಯಶಸ್ವಿಯಾಗಿ ತೆರೆ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಮೂರು ದಿನಗಳ ‘ಹಲಸು ಹಣ್ಣಿನ ಮೇಳ’ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜುಲೈ 10ರಿಂದ 12ರವರೆಗೆ ನಡೆದ ಮೇಳಕ್ಕೆ ಸಾವಿರಾರು ಮಂದಿ ಆಗಮಿಸಿ ಹಲಸಿನ ವೈವಿಧ್ಯಮಯ ತಳಿಗಳು, ಖಾದ್ಯಗಳು ಹಾಗೂ ಕೃಷಿ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸುವ ಮೂಲಕ ಮೇಳವನ್ನು ಯಶಸ್ವಿಗೊಳಿಸಿದರು. ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ನಡೆದ ಮೇಳವನ್ನು ಮಂಜೇಶ್ವರ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದ್ದರು….

Read More

98ನೇ ವಯಸ್ಸಿನಲ್ಲೂ ಕನ್ನಡ ಸೇವೆಯ ಜ್ಯೋತಿ: ಹಿರಿಯ ಹೋರಾಟಗಾರ ಅಡೂರು ಉಮೇಶ್ ನ್ಯಾಕ್‌ಗೆ ಅಭಿಮಾನಿಗಳಿಂದ ಸನ್ಮಾನ

ಕಾಸರಗೋಡು: ಹಿರಿಯ ನ್ಯಾಯವಾದಿ, ಕನ್ನಡ ಹೋರಾಟಗಾರ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದ ಮುಂಚೂಣಿ ವ್ಯಕ್ತಿತ್ವ ಅಡೂರು ಉಮೇಶ್ ನ್ಯಾಕ್ ಅವರಿಗೆ ಅವರ ಅಭಿಮಾನಿಗಳು ನಿವಾಸಕ್ಕೆ ಭೇಟಿ ನೀಡಿ ಶಾಲು ಹೊದಿಸಿ, ಫಲಪುಷ್ಪ ನೀಡಿ, ಪೇಟ ತೊಡಿಸಿ ಗೌರವ ಸಮರ್ಪಿಸಿದರು. ಹಿರಿಯ ನ್ಯಾಯವಾದಿ ಹಾಗೂ ಹರಿದಾಸ ಮಹಾಬಲ ಶೆಟ್ಟಿ ಮತ್ತು ನಿವೃತ್ತ ಕಸ್ಟಮ್ಸ್ ಅಧಿಕಾರಿ ಶುಭೋದಯ ಕೂಡ್ಲು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಸಂಘಟಕ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಯಾಗಿ…

Read More

ಈಜುಕೊಳದ ಮೋಜು : ಪೋಷಕರಿಗೆ ಪ್ರಾಣ ಸಂಕಟ: ಮಂಜೇಶ್ವರದಲ್ಲಿ ಅಪಾಯಕಾರಿ ಈಜು ಪ್ರದರ್ಶನ : ಘಟನಾ ಸ್ಥಳಕ್ಕೆ ಪೋಲೀಸರಿಂದ ದಾಳಿ

ಮಂಜೇಶ್ವರ: ಮಳೆಗಾಲದ ಆಗಮನದೊಂದಿಗೆ ಜಲಾಶಯಗಳು, ಕೆರೆಗಳು ತುಂಬಿ ತುಳುಕುತ್ತಿದ್ದು, ಇದು ಮಕ್ಕಳ ಪಾಲಿಗೆ ‘ಜಲಕ್ರೀಡೆ’ಯ ಮೋಜಿನ ತಾಣವಾಗಿದ್ದರೆ, ಪೋಷಕರಿಗೆ ಮಾತ್ರ ಜೀವ ಕೈಯಲ್ಲಿ ಹಿಡಿದು ಕೂರುವ ಆತಂಕದ ದಿನಗಳಾಗಿವೆ. ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಚಲಿಕೆ, ಇಡಿಯ ಪಾಪಿಲ ಹಾಗೂ ಗೋವಿಂದ ಪೈ ಡ್ಯಾಂ ಪ್ರದೇಶಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಈಜು ಪ್ರದರ್ಶನ ನಡೆಯುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ​ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಪೋಷಕರಿಗೆ ಸುಳಿವನ್ನೂ ನೀಡದೆ ಮಕ್ಕಳು ಗುಂಪು ಗುಂಪಾಗಿ ಈ ಕೆರೆಗಳ ಬಳಿಗೆ ತೆರಳುತ್ತಿದ್ದಾರೆ. ಅತಿ…

Read More

​ಯೂಟ್ಯೂಬರ್ ‘ತೊಪ್ಪಿ’ ಅಲಿಯಾಸ್ ಮುಹಮ್ಮದ್ ನಿಹಾಲ್‌ನ ಚಾನೆಲ್ ಬಂದ್

ಕಾಸರಗೋಡು/ ಕೊಚ್ಚಿ :​ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜನಪ್ರಿಯ ಯೂಟ್ಯೂಬರ್ ‘ತೊಪ್ಪಿ’ ಅಲಿಯಾಸ್ ಮುಹಮ್ಮದ್ ನಿಹಾಲ್‌ನ ಚಾನೆಲ್ ಅನ್ನು ಯೂಟ್ಯೂಬ್ ಸಂಸ್ಥೆ ಡಿಲೀಟ್ ಮಾಡಿದೆ. ಆಲುವ ಸೈಬರ್ ಪೊಲೀಸ್ ನೀಡಿದ ವರದಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ​ಅಡ್ವಕೇಟ್ ಶ್ರೀಜಿತ್ ಪೆರುಮನ ಅವರ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದು, ನೋಟಿಸ್ ನೀಡಿದ್ದರೂ ನಿಹಾಲ್ ವಿಚಾರಣೆಗೆ ಹಾಜರಾಗಿಲ್ಲ. ಈತ ಎಂಡಿಎಂಎ ಸೇವನೆ, ಅಶ್ಲೀಲ ಪ್ರಸಾರ, ಪೋಕ್ಸೋ ಪ್ರಕರಣ ಮತ್ತು ಅಪ್ರಾಪ್ತ ಬಾಲಕಿಯರ ಲೈಂಗಿಕ…

Read More
error: Content is protected !!