ಮಲೆಯಾಳ ಕಡ್ಡಾಯ ಮಸೂದೆ ವಿರೋಧ: ವಿ.ಡಿ. ಸತೀಶನ್‌ಗೆ ಕಾಸರಗೋಡಿನಲ್ಲಿ ಮನವಿ

ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್. ಸುಬ್ಬಯಕಟ್ಟೆ, ಗಮಕ ಕಲಾ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಟಿ. ಶಂಕರ ನಾರಾಯಣ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ ಜಯಪ್ರಕಾಶ್…

Read More

ಶಿರಿಯದಲ್ಲಿ ಮನೆಗೆ ಬೆಂಕಿ ಬಿದ್ದ ಘಟನೆ; ರಕ್ಷಣಾ ಕಾರ್ಯಾಚರಣೆಯಲ್ಲಾದ ವಿಫಲತೆ ಪರಿಶೀಲಿಸಬೇಕು – ಶಿರಿಯ ಗ್ರಾಮಾಭಿವೃದ್ಧಿ ಸಮಿತಿ, ಕುಂಬಳೆ

ಶಿರಿಯದಲ್ಲಿ ಮನೆಗೆ ಬೆಂಕಿ ಬಿದ್ದ ಘಟನೆಯ ಸಂಬಂಧ, ರಕ್ಷಣಾ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಂದ ಸಂಭವಿಸಿದ ವಿಫಲತೆಯನ್ನು ತನಿಖೆ ಮಾಡಬೇಕು ಎಂದು ಶಿರಿಯ ಗ್ರಾಮಾಭಿವೃದ್ಧಿ ಸಮಿತಿ ಆಗ್ರಹಿಸಿದೆ. ಕಳೆದ ಜನವರಿ 9ರಂದು ಶಿರಿಯ ಬತ್ತೇರಿ ರಸ್ತೆಯಲ್ಲಿರುವ ಮೊಯ್ತೀನ್ ಕುಟ್ಟಿ ಸೀಮಾನ್ ಎಂಬವರ ಮಾಲೀಕತ್ವದ ಹಂಚಿನ ಮೇಲ್ಛಾವಣಿಯ ದೊಡ್ಡ ಮನೆಗೆ ಬೆಂಕಿ ತಗುಲಿತ್ತು. ಆಯಿಷಾ ಎಂಬ ಮಹಿಳೆ ಹಾಗೂ ಒಂದು ಮಗು ವಾಸಿಸುತ್ತಿದ್ದ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಹಲವು ಗಂಟೆಗಳ ನಂತರವೇ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ತಲುಪಿತು….

Read More

ಕುಂಬಳೆಯಲ್ಲಿ ಎಂಡಿಎಂಎ ಮಾದಕವಸ್ತು ವಶ : ಯುವಕ ಬಂಧನ

ಕುಂಬಳೆ:ಸೀತಾಂಗೋಳಿ ರಾಜೀವ್ ಕಾಲೋನಿಯ ನಿವಾಸಿ ಇಚ್ಚಾದು ಯಾನೆ ಅಬ್ದುಲ್ ನಿಸಾರ್ (24) ಅವರನ್ನು 2.22 ಗ್ರಾಂ ಎಂಡಿಎಂಎ (MDMA) ಸಹಿತವಾಗಿ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನಂತಕೃಷ್ಣನ್ ಅವರು ಬಂಧಿಸಿದ್ದಾರೆ.ಆರೋಪಿಯ ಪ್ಯಾಂಟ್ ಜೇಬಿನಲ್ಲಿದ್ದ ಸಿಗರೇಟು ಕೇಸ್ ಒಳಗಿನ ಪಾಲಿಥಿನ್ ಕವರ್‌ನಲ್ಲಿ ಎಂಡಿಎಂಎ ಮರೆಮಾಚಿ ಇಡಲಾಗಿತ್ತು. ಇದರೊಂದಿಗೆ ಒಂದು ಪೈಪ್, ₹500 ನಗದು ಹಾಗೂ ಎರಡು ಐಫೋನ್ ಮೊಬೈಲ್‌ಗಳನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಪೆಟ್ರೋಲಿಂಗ್ ವೇಳೆ ಮುಗು ಹಾಲ್ ಸಮೀಪಕ್ಕೆ ಪೊಲೀಸರು ಬಂದಿರುವುದನ್ನು ಗಮನಿಸಿದ ಇಚ್ಚಾದು, ಬೈಕ್…

Read More

ಹಿಂದೂ ಸಮಾಜ ಪ್ರಮುಖರಿಂದ “ಹಿಂದೂ ಏಕತಾ ಸಂಗಮ “ಕರಪತ್ರ ಬಿಡುಗಡೆ.

ಕಾಸರಗೋಡು:ಹಿಂದೂ ಸಮಾಜೋತ್ಸವ ಕಾಸರಗೋಡು ನಗರ ಸಮಿತಿಯ ಆಶ್ರಯದಲ್ಲಿ ದಿನಾಂಕ 08-03-2026 ರಂದು ಕಾಸರಗೋಡು ನಗರದಲ್ಲಿ ನಡೆಯಲಿರುವ ಹಿಂದೂ ಏಕತಾ ಸಂಗಮ ಕಾರ್ಯಕ್ರಮದ ಅಂಗವಾಗಿ ಗ್ರಹಸಂಪರ್ಕ ಕರಪತ್ರ ಬಿಡುಗಡೆ ಕಾರ್ಯಕ್ರಮವು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಸನ್ನಿಧಿಯಲ್ಲಿ ಜರಗಿತು.

Read More

ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚನೆ

ಮಂಜೇಶ್ವರ: ಜನರ ಅಗತ್ಯತೆಯ ಬೇಡಿಕೆಗಳು ಹಾಗೂ ಸ್ಥಳೀಯ ಅಭಿವೃದ್ಧಿ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮಂಜೇಶ್ವರ ಗ್ರಾಮ ಪಂಚಾಯತಿಯ ಅಧೀನದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ಅನ್ನು ರಚಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ವರ್ಕಿಂಗ್ ಗ್ರೂಪ್ ರಚನೆಗೊಳಿಸಲಾಯಿತು. ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ–ಆರ್ಥಿಕ ಪ್ರಗತಿಗೆ ಒತ್ತು ನೀಡುವ ಸಮಗ್ರ ಯೋಜನೆಗಳನ್ನು ತಯಾರಿಸುವುದು ವರ್ಕಿಂಗ್ ಗ್ರೂಪ್‌ನ ಪ್ರಮುಖ ಜವಾಬ್ದಾರಿಗಳಾಗಿವೆ. ಜನರ ಭಾಗವಹಿಸುವಿಕೆಯಿಂದ ಯೋಜನೆಗಳನ್ನು ಜಾರಿಗೊಳಿಸುವ ರೂಪರೇಖೆಯನ್ನೂ…

Read More

ಮಾಣಿಲ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ತೌಡುಗೋಳಿ ದುರ್ಗಾದೇವಿ ಕ್ಷೇತ್ರ ಶಿಲಾನ್ಯಾಸ

ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರದೈವಗಳ ಸಾನಿಧ್ಯ ಇಲ್ಲಿ ಗುರುವಾರ ಬೆಳಿಗ್ಗೆ ಗಂಟೆ 7.45ಕ್ಕೆ. ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಶಿಲಾನ್ಯಾಸ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ನೆರವೇರಿತು. ಕ್ಷೇತ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮಾಣಿಲ ಶ್ರೀ ಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಕಾಲಘಟ್ಟದಲ್ಲಿ ನಾವಿರುವಾಗ ತೌಡುಗೋಳಿಯಲ್ಲಿ ನಡೆಯುತ್ತಿರುವಂತಹ ಈ ಕ್ಷೇತ್ರದ ಜೀರ್ಣೋದ್ದಾರ ಮಹತ್ವ ಪಡೆದಿದೆ….

Read More

ಬಾಡಿಗೆ ಮನೆಯಲ್ಲಿ ವಾಸ, ಕಳ್ಳತನ ಮಾಡಿ ಪರಾರಿ: ಆರೋಪಿಯ ಬಂಧನ

ಮಂಜೇಶ್ವರ: ಮಣ್ಣಂಕುಳಿಯ ಅಂಗನವಾಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜೇಶ್ವರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಕರ್ನಾಟಕದ ಪುತ್ತೂರು ತಾಲ್ಲೂಕಿನ ನೆಲ್ಯಾಡಿ ಕೊಕ್ಕಡ ನಿವಾಸಿ ಅಶ್ರಫ್ (55) ಎಂದು ಗುರುತಿಸಲಾಗಿದೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಉಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ಈಗಾಗಲೇ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕಳ್ಳತನ ಮಾಡಿದ ವಸ್ತುಗಳನ್ನು…

Read More

ಪಟ್ಲ ಸತೀಶ್ ಶೆಟ್ಟಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ

ದೆಹಲಿ ಕರ್ನಾಟಕ ಸಂಘದಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ.ಕಲಾ ಸೇವೆಯಲ್ಲಿ ಅಪ್ರತಿಮ ಸಾಧನೆಗೈದು ಯಕ್ಷಗಾನ ಕಲೆಯ ಘನತೆಯನ್ನು ಪ್ರಪಂಚದಾದ್ಯಂತ ವಿಸ್ತರಿಸಿದ ಹಾಗೂ ತನ್ನ ವೈಯಕ್ತಿಕ ವರ್ಚಸ್ಸಿನ ಮೂಲಕ ಸಾವಿರಾರು ಕಲಾವಿದರ ಪಾಲಿಗೆ ಬೆಳಕಾದ ಪಟ್ಲರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಒಲಿದು ಬಂದಿದೆ.

Read More

ಉಪ್ಪಳ ಮಣ್ಣಂಗುಳಿ ಅಂಗನವಾಡಿಯಲ್ಲಿ ಕಳ್ಳತನ: ಬೀಗ ಮುರಿದು ಮಿಕ್ಸಿ–ಪಾತ್ರೆ ಕಳವು

ಕಾಸರಗೋಡು: ಉಪ್ಪಳ ಮಣ್ಣಂಗುಳಿ ಅಂಗನವಾಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮಿಕ್ಸಿ ಹಾಗೂ ವಿವಿಧ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಮಂಗಳವಾರ ಸಂಜೆ 3.30ರ ವೇಳೆಗೆ ಅಂಗನವಾಡಿಯನ್ನು ಮುಚ್ಚಿ ಹೋಗಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅಂಗನವಾಡಿ ತೆರೆಯಲು ಬಂದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಶಿಕ್ಷಕಿ ಭಾಗೀರಥಿ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪ್ರಕಾರ, ಒಂದು ಮಿಕ್ಸಿ, ಮೂರು ಜಾರ್‌ಗಳು, ಎರಡು ಕುಕ್ಕರ್‌ಗಳು,…

Read More

ಕನ್ನಡ ಭವನ ಕರ್ನಾಟಕ ರಾಜ್ಯ ಸಂಚಾಲಕರಾದ ಪತ್ರಕರ್ತ, ಸಾಹಿತಿ, ಸಂಘಟಕ ಶ್ರೀ ಸಿ. ವೈ. ಮೆಣಸಿನಕಾಯಿ ಇವರೀಗೆ “ಕವಿ ಕಾವ್ಯ ವಿಭೂಷಣ “ಪ್ರಶಸ್ತಿ “2026.

ಕಾಸರಗೋಡು: ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ 22.02.2026.ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್ “ವೇದಿಕೆಯಲ್ಲಿ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಶ್ರೀಮದ್ ಎಡನೀರ್ ಶ್ರೀಗಳ ಹಾಗೂ ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿ, ಗೋವಿನಾಳ ಇವರ ದಿವ್ಯ…

Read More
error: Content is protected !!