ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವಕ್ಕೆ ಆಹ್ವಾನ

ಕಾಸರಗೋಡು: ಚುಟುಕು ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಕವಿ-ಕವಯತ್ರಿಯರಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ವಿಶೇಷ ಸಾಹಿತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. 2000ರಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಮೈಸೂರು ಇದರ ಕೇರಳ ಗಡಿನಾಡ ಘಟಕವಾಗಿ ಸ್ಥಾಪಿತವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಳೆದ 26 ವರ್ಷಗಳಿಂದ ಚುಟುಕು ಸಾಹಿತ್ಯ ಹಾಗೂ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ 7 ಬಾರಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ…

Read More

ಮಲಯಾಳ ಭಾಷಾ ಮಸೂದೆ -ಕನ್ನಡಿಗರ ಕರಾಳ ಭವಿಷ್ಯ

ಇದೇ ಬರುವ ದಿನಾಂಕ 28.3.2026.ಶನಿವಾರ ಬೆಳಿಗ್ಗೆ 10ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದಲ್ಲಿರುವ “ಕನ್ನಡದ ಶಕ್ತಿ ಶ್ರೀ ಬೇವಿ0ಜೆ ಶ್ರೀಧರ ಕಕ್ಕಿಲ್ಲಾಯ -ಸರೋಜಾದೇವಿ ಉಚಿತ ಸಾರ್ವಜನಿಕ ವಾಚನಾಲಯ “ದಲ್ಲಿ ಕನ್ನಡ ಭವನದ ನೇತೃತ್ವದಲ್ಲಿ, ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ, ಕರಾಳ ಮಸೂದೆಯ ವಿರುದ್ಧ ಪ್ರತಿಭಟನಾ ಸಭೆ ನಡೆಯಲಿದೆ. 28.3.2026. ರಂದು ಬೆಳಿಗ್ಗೆ 10ಗಂಟೆಗೆ ಆಯೋಜಿಸಿದ ಈ ಪ್ರತಿಭಟನಾ ಸಭೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸೇರಿ ಅಭಿಪ್ರಾಯ ಮಂಡಿಸಬೇಕಾಗಿ ಅತೀವ ಕಾಳಜಿಯಿಂದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ…

Read More

ಮಾರ್ಚ್ 23ರಂದು ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರು ಮಾರ್ಚ್ 23ರಂದು (ಸೋಮವಾರ) ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಪಕ್ಷದ ಹಿರಿಯ ನಾಯಕರು, ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಕ್ಷೇತ್ರದ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚುನಾವಣಾ ಚಟುವಟಿಕೆಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ, ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ.

Read More

ನಾಮಪತ್ರ ಸಲ್ಲಿಕೆಗೆ ಮುನ್ನ ಪೂಜೆ ಸಲ್ಲಿಸಿದ ಕೆ. ಸುರೇಂದ್ರನ್

ಮಂಜೇಶ್ವರ: 2026ರ ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ನಾಮಪತ್ರ ಸಲ್ಲಿಸುವ ಮೊದಲು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಸುರೇಂದ್ರನ್ ಅವರು ಮಂಜೇಶ್ವರ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸುವ ಮುನ್ನ ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಪಡೆದು ಆಶೀರ್ವಾದ ಪಡೆದ ನಂತರ ಅವರು ಚುನಾವಣಾ…

Read More

ಬಂದಿಯೋಡ್ ರಸ್ತೆ ಬದಿಯಲ್ಲಿ ಮೂಡಿದ ನಯನಮನೋಹರ ದೃಶ್ಯಕ್ಕೆ ಜನರ ಮೆಚ್ಚುಗೆ

ಬಂದಿಯೋಡ್: ನೀಲಿ ಆಕಾಶದ ಹಿನ್ನೆಲೆಯಲ್ಲೇ ಕೆಂಪು ಮತ್ತು ಹಳದಿ ಹೂಗಳಿಂದ ಕಂಗೊಳಿಸುವ ಮರಗಳ ಮನಮೋಹಕ ದೃಶ್ಯ ಇಲ್ಲಿ ಕಣ್ಮನ ಸೆಳೆಯುತ್ತದೆ. ಮೇಲ್ಭಾಗದಲ್ಲಿ ಕೆಂಪು ಹೂಗಳಿಂದ ಅರಳಿರುವ ‘ಕೃಷ್ಣಚೂಡ’ ಮರ ಮತ್ತು ಕೆಳಭಾಗದಲ್ಲಿ ಹಳದಿ ಹೂಗಳಿಂದ ಕಂಗೊಳಿಸುವ ‘ಕಣಿಕ್ಕೊನ್ನ’ ಮರ ಪರಸ್ಪರ ಆಲಿಂಗಿಸಿಕೊಂಡಂತೆ ಕಾಣಿಸುತ್ತವೆ. ಸಾಮಾನ್ಯವಾಗಿ ಈ ಮರಗಳು ಬೇಸಿಗೆ ಕಾಲದಲ್ಲಿ ಅರಳುತ್ತವೆ. ವಿಶೇಷವಾಗಿ ಏಪ್ರಿಲ್ ತಿಂಗಳಲ್ಲಿ ಕಣಿಕ್ಕೊನ್ನ ಹೂವು ಅರಳುವುದು ವಿಷು ಹಬ್ಬದ ಆಗಮನದ ಸಂಕೇತವಾಗಿದೆ. ಈ ನಯನಮನೋಹರ ದೃಶ್ಯವು ಬಂದಿಯೋಡ್ ಸಮೀಪದ ರಸ್ತೆ ಬದಿಯಲ್ಲಿ ಕಾಣಸಿಗುತ್ತದೆ….

Read More

ಯುವಕನ ಆತ್ಮಹತ್ಯೆ: ಉದ್ಯಾವರದಲ್ಲಿ ದುರ್ಘಟನೆ

ಮಂಜೇಶ್ವರ: ಉದ್ಯಾವರ ನಿವಾಸಿ 22 ವರ್ಷದ ಯುವಕನೊಬ್ಬ ತನ್ನ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.​ಮಂಜೇಶ್ವರ ಉದ್ಯಾವರ ತಹಾನಿ ಮಂಜಿಲ್ ನ್ಯೂ ಮಸಲ್ ಹೌಸ್ ನಿವಾಸಿ ಮುಹಮ್ಮದ್ ತಾಹಾ (22) ಮೃತಪಟ್ಟ ಯುವಕ.ಮನೆಯವರು ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬಂದಾಗ ತಾಹಾ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ​ಮೃತರು ತಂದೆ ಮುಹಮ್ಮದ್ ಅಶ್ರಫ್, ತಾಯಿ ತಾಹಿರಾ ಹಾಗೂ ಸಹೋದರಿಯರಾದ ತಹಾನಿ ಮತ್ತು ತನ್ಸಿ ಅವರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ…

Read More

ಪೈವಳಿಕೆ ಪೇಟೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಕೆ. ಸುರೇಂದ್ರನ್ ರೋಡ್ ಶೋ

ಮಂಜೇಶ್ವರ: ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಪೈವಳಿಕೆ ಪೇಟೆಯಲ್ಲಿ ಭರ್ಜರಿ ರೋಡ್ ಶೋ ಕಾರ್ಯಕ್ರಮ ನಡೆಯಿತು. ರೋಡ್ ಶೋ ವೇಳೆ ಕಾರ್ಯಕರ್ತರು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಅಭ್ಯರ್ಥಿಗೆ ಉತ್ಸಾಹಭರಿತ ಸ್ವಾಗತ ಕೋರಿದರು. ಘೋಷಣೆಗಳು, ಪಕ್ಷದ ಧ್ವಜಗಳು ಮತ್ತು ಸಂಗೀತದ ನಡುವೆ ರೋಡ್ ಶೋ ಜೋರಾಗಿ ಸಾಗಿತು. ಈ ವೇಳೆ ಮಾತನಾಡಿದ ಕೆ. ಸುರೇಂದ್ರನ್, ಕ್ಷೇತ್ರದ ಅಭಿವೃದ್ಧಿಗೆ ಬಿ.ಜೆ.ಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಾಗಿ ಭರವಸೆ ನೀಡಿದರು….

Read More

ಕೇರಳದಲ್ಲಿ ಹಕ್ಕಿಜ್ವರ ಆತಂಕ: ಅಲಪ್ಪುಳ–ಕೋಝೀಕ್ಕೋಡ್ ಜಿಲ್ಲೆಗಳಲ್ಲಿ ತುರ್ತು ಕ್ರಮಗಳು

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಹಕ್ಕಿಜ್ವರ (H5N1) ಪ್ರಕರಣಗಳು ಮತ್ತೆ ಕಾಣಿಸಿಕೊಂಡಿದ್ದು, ಅಲಪ್ಪುಳ ಹಾಗೂ ಕೋಝೀಕ್ಕೋಡ್ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲಪ್ಪುಳ ಜಿಲ್ಲೆಯ ಮುಹಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಸುಮಾರು 6,000ಕ್ಕೂ ಹೆಚ್ಚು ಕೋಳಿಗಳನ್ನು ನಾಶಪಡಿಸಲು (ಕಲ್ಲಿಂಗ್) ಸರ್ಕಾರ ನಿರ್ಧರಿಸಿದೆ. ಇದೇ ವೇಳೆ, ಕೋಝೀಕ್ಕೋಡ್ ಜಿಲ್ಲೆಯ ಪಣಂಗಾಡ್, ಓಳವಣ್ಣ, ಕಕ್ಕೋಡಿ, ಪೆರುಮಣ್ಣ ಮತ್ತು ನಾಲ್ಲಾಳಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೂಡ ಹಕ್ಕಿಜ್ವರ ಪ್ರಕರಣಗಳು…

Read More

ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಭರ್ಜರಿ ರೋಡ್ ಶೋ ಇಂದು

ಮಂಜೇಶ್ವರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ K. Surendran (ಕೆ. ಸುರೇಂದ್ರನ್) ಅವರ ನೇತೃತ್ವದಲ್ಲಿ ಇಂದು ಸಂಜೆ ೪:೦೦ ಗಂಟೆಗೆ ಭರ್ಜರಿ ರೋಡ್ ಶೋ ಆಯೋಜಿಸಲಾಗಿದೆ. ಬಾಯಿಕಟ್ಟೆಯಿಂದ ಪ್ರಾರಂಭವಾಗುವ ಈ ಬೃಹತ್ ರೋಡ್ ಶೋ ಪೈವಳಿಕೆ ಪೇಟೆತನಕ ಸಾಗಲಿದ್ದು, ಮಾರ್ಗಮಧ್ಯೆ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪಕ್ಷದ ನಾಯಕರು ಮಾತುಕತೆ ನಡೆಸಿ ಮತಯಾಚನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ Captain Brijesh Chowta (ಕ್ಯಾಪ್ಟನ್ ಬ್ರಿಜೇಶ್ ಚೌಟ), ಉಡುಪಿ ಕ್ಷೇತ್ರದ ಸಂಸದ…

Read More

ಮಂಜೇಶ್ವರಾಧ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಮಂಜೇಶ್ವರ: ಪವಿತ್ರ ರಮಝಾನ್ ತಿಂಗಳ ಉಪವಾಸ ವ್ರತಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮಂಜೇಶ್ವರದ ಮುಸ್ಲಿಂ ಬಾಂಧವರು ಇಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು. ತಾಲೂಕಿನಾದ್ಯಂತ ಜುಮಾ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಧಾರ್ಮಿಕ ಪ್ರವಚನಗಳು ಮತ್ತು ಶುಭಾಶಯ ವಿನಿಮಯ ಕಾರ್ಯಕ್ರಮಗಳು ನಡೆದವು. ಹಬ್ಬದ ಅಂಗವಾಗಿ ನೆರೆಮನೆಯವರ ಹಾಗೂ ಬಂಧುಗಳ ಮನೆಗಳಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದತೆ ಪ್ರದರ್ಶಿಸಲಾಯಿತು. ಶುಕ್ರವಾರ ಮುಂಜಾನೆಯೇ ಹೊಸ ವಸ್ತ್ರ ಧರಿಸಿದ ಭಕ್ತಾದಿಗಳು ಉದ್ಯಾವರ ಜುಮಾ…

Read More
error: Content is protected !!