ಚಕ್ರವರ್ತಿ (ರಿ.) ಹೊಸಂಗಡಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಸುರೇಶ್ ಗಾಣಿಂಜಾಲ್ ಅಧ್ಯಕ್ಷರಾಗಿ ನೇಮಕ

ಚಕ್ರವರ್ತಿ (ರಿ.) ಹೊಸಂಗಡಿ ಸಂಘದ ಮುಂದಿನ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸುರೇಶ್ ಗಾಣಿಂಜಾಲ್, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಪೆಲಪ್ಪಾಡಿ, ಉಪಾಧ್ಯಕ್ಷರಾಗಿ ನರೇಂದ್ರ ಹೆಗಡೆ, ಕೋಶಾಧಿಕಾರಿಯಾಗಿ ಅಶೋಕ್ ಅಂಗಡಿಪದವು ಹಾಗೂ ಜೊತೆ ಕಾರ್ಯದರ್ಶಿಯಾಗಿ ಹರೀಶ್ ಶಕ್ತಿನಗರ್ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ಅನಿಲ್ ರಾಜ್ ಅಂಗಡಿಪದವು, ಹರೀಶ್ ಅಟ್ಲಾಸ್, ಜಯಂತ ಪೆಲಪ್ಪಾಡಿ, ದಿನೇಶ್ ಜೈನ್, ಹರೀಶ್ ಮಜಾಲ್ ಹಾಗೂ ಜನಾರ್ಧನ ಪೊಯ್ಯಕಂಡ ಅವರನ್ನು ನೇಮಿಸಲಾಗಿದೆ. ಕ್ರೀಡಾ ಕಾರ್ಯದರ್ಶಿಗಳಾಗಿ ಸತೀಶ್ ಶಕ್ತಿನಗರ…

Read More

ಸಹಕಾರ ಚಳುವಳಿಯ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ: ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್

ಮಂಗಳೂರು: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ಸಂವತ್ಸರಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್), ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ವಿಜೃಂಭಣೆಯಿಂದ…

Read More

ಯುವ ಕಾರ್ಯಕರ್ತರು ಪಕ್ಷದ ಸಿದ್ಧಾಂತ ಅರಿತು ಮುನ್ನಡೆಯಬೇಕು – ಬಿಜೆಪಿ ನಾಯಕ ಕೆ. ರಂಜಿತ್

ಪೈವಳಿಕೆ: ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಯುವ ಕಾರ್ಯಕರ್ತರು ಪಕ್ಷದ ಸಿದ್ಧಾಂತ, ತತ್ವ, ಇತಿಹಾಸ ಹಾಗೂ ಭವಿಷ್ಯದ ಯೋಜನೆಗಳನ್ನು ಅರಿತು ಕಾರ್ಯನಿರ್ವಹಿಸಿದರೆ ನಾಯಕತ್ವ ಗುಣಗಳು ವೃದ್ಧಿಯಾಗುತ್ತವೆ ಎಂದು ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು. ಅವರು ಬಿಜೆಪಿ ಮಂಜೇಶ್ವರ ಮಂಡಲದ ಪ್ರಶಿಕ್ಷಣ ಶಿಬಿರವನ್ನು ಸಜಂಕಿಲ ಅವಲ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. “ಬಿಜೆಪಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ಅದರ ಸಿದ್ಧಾಂತಗಳನ್ನು ಅರಿತು ಕಾರ್ಯನಿರ್ವಹಿಸುವುದು ಅಗತ್ಯ” ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ…

Read More

ಮಂಜೇಶ್ವರದಲ್ಲಿ ಶ್ರೀ ಛಾಯಾಸುತ ಕುಣಿತ ಭಜನಾ ತಂಡದ ನೂತನ ಸಮವಸ್ತ್ರ ಬಿಡುಗಡೆ – ಅದ್ದೂರಿ ಕಾರ್ಯಕ್ರಮ

ಮಂಜೇಶ್ವರ: ಶ್ರೀ ಛಾಯಾಸುತ ಕುಣಿತ ಭಜನಾ ತಂಡ, ಮಂಜೇಶ್ವರ ಇದರ ನೂತನ ಸಮವಸ್ತ್ರದ ಲೋಕಾರ್ಪಣೆ ಕಾರ್ಯಕ್ರಮವು ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶೆಟ್ಟಿ ಅವರು ವಹಿಸಿಕೊಂಡಿದ್ದರು. ಖ್ಯಾತ ಹಿನ್ನೆಲೆ ಗಾಯಕ ಸಂದೇಶ್ ನೀರ್ಮಾರ್ಗ ಅವರು ನೂತನ ಸಮವಸ್ತ್ರವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ತಂಡದ ನೂತನ ಸಮವಸ್ತ್ರಕ್ಕೆ ಮಂಗಳೂರಿನ ರಿತೇಶ್ ಅವರು ಪ್ರಾಯೋಜಕತ್ವ ನೀಡಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಕ್ಷತಾ ಬೈಕಾಡಿ, ಪ್ರಸಾದ್ ಆಳಪೆ, ಶಾಲಿನಿ…

Read More

ಆನೆಕಲ್ಲು ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ.

ಆನೆಕಲ್ಲು:: ಎ.ಯು. ಪಿ ಶಾಲೆ ಆನೆಕಲ್ಲಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ನೆರವೇರಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಪ್ರತಿನಿಧಿ ಮುರಳಿ ಶ್ಯಾಮ್,ಎಸ್.ಎಂ.ಸಿ ಅಧ್ಯಕ್ಷರಾದ ಅಶ್ರಫ್, ಮಾತೃ ಮಂಡಳಿ ಅಧ್ಯಕ್ಷರಾದ ಶೋಭ ಕತ್ತೆರಿಕೋಡಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ರೇಣುಕಾ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ ಸರ್ ವಾರ್ಷಿಕ ವರದಿ ಹಾಗೂ…

Read More

ಪೆರ್ಲದಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ: ಓದುವ ಸಂಸ್ಕೃತಿ ಉಳಿಸುವಂತೆ ಕರೆ

ನೇತಾಜಿ ಸಾರ್ವಜನಿಕ ಗ್ರಂಥಾಲಯ, ಪೆರ್ಲದಲ್ಲಿ ವಾಚನಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್, ಪುಸ್ತಕಗಳು ಜ್ಞಾನ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ರವಾನಿಸುವ ಅಮೂಲ್ಯ ಸಾಧನಗಳಾಗಿದ್ದು, ಓದುವ ಸಂಸ್ಕೃತಿಯನ್ನು ಕಾಪಾಡಿ ಬೆಳೆಸಬೇಕೆಂದು ಹೇಳಿದರು. ಮುಖ್ಯ ಅತಿಥಿ ಬಿ.ಸಿ. ಗೋಪಾಲಕೃಷ್ಣ ಭಟ್ ಅವರು ಡಾ. ರಮಾನಂದ ಬನಾರಿ ಸಂಪಾದಿತ ‘ಕನ್ನಡಿಯಲ್ಲಿ ಕನ್ನಡಿಗರು’ ಕೃತಿಯನ್ನು ಪರಿಚಯಿಸಿದರು. ಜಿಲ್ಲಾ ಕೌನ್ಸಿಲ್ ಸದಸ್ಯ ಸಲಾಹುದ್ದೀನ್ ಮಾಸ್ತರ್, ಸಾಹಿತಿಗಳಾದ…

Read More

ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ: ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಜಯಶೀಲ ಅಡ್ಯಾಂತಾಯ ಅಡ್ಯಾರ್ ಗುತ್ತು

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಸೆಪ್ಟಂಬರ್ 14 ರಿಂದ 16 ರ ವರೆಗೆ ನಡೆಯಲಿರುವ 20ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಉದ್ಯಮಿ, ಸಮಾಜಸೇವಕರಾದ ಜಯಶೀಲ ಅಡ್ಯಾಂತಾಯ ಅಡ್ಯಾರ್ ಗುತ್ತು ಆಯ್ಕೆಯಾದರು. ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದಲ್ಲಿ ಟ್ರಸ್ಟ್ ನ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ…

Read More

‘ಆರ್‌ಎಸ್‌ಎಸ್ ನೋಂದಣಿ ಶುಲ್ಕವನ್ನೂ ನಾನೇ ಭರಿಸುತ್ತೇನೆ’ : ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೋಂದಣಿ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಯಾರ ಬಳಿಯೂ ಕೈಚಾಚುವ ಅಗತ್ಯವಿಲ್ಲ. ಬೇಕಿದ್ದರೆ ಆರ್‌ಎಸ್‌ಎಸ್‌ನ ನೋಂದಣಿ ಶುಲ್ಕವನ್ನು ನಾನೇ ಭರಿಸುತ್ತೇನೆ” ಎಂದು ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಶ್ವದ ಅತಿ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಇದುವರೆಗೆ ಏಕೆ ನೋಂದಣಿ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸುವುದೇ ತಪ್ಪೇ? ದೇಶಾದ್ಯಂತ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ, ಸಾವಿರಾರು ಜನರನ್ನು ಒಟ್ಟುಗೂಡಿಸುವ ಸಂಘಟನೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು…

Read More

ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಮಾರ್ಪಡಿತ ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತು ಆಧುನೀಕೃತ ಸಭಾಗೃಹ

ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವ್ಯವಸ್ಥೆಯ ಸೊಬಗಿಗೆ ಇಂದು ಮತ್ತೊಂದು ಆಕರ್ಷಣೀಯ ಆಧುನಿಕ ಸೌಲಭ್ಯದ ಸೇರ್ಪಡೆ.ಈಗಾಗಲೇ ಲಯನ್ಸ್ ಕ್ಲಬ್ ಇಂಟರ್ನೇಶನಲ್ ಸಂಸ್ಥೆಯ ವತಿಯಿಂದ ಅಂದಿನ ಲಯನ್ಸ್ ಗವರ್ನರ್ ಆಗಿದ್ದ ಲಯನ್ ವಸಂತ್ ಶೆಟ್ಟಿಯವರಿಂದ ಅನುದಾನಿತಗೊಳಿಸಲ್ಪಟ್ಟು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಕೊಡುಗೆಯಾಗಿ ಬಂದಂತಹ ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತೊಂದಿಷ್ಟು ಬೆಳವಣಿಗೆಯೊಂದಿಗೆ ಅಂದದ ಸ್ವರೂಪವನ್ನು ಪಡೆದುಕೊಂಡ ರಮಣೀಯ ದೃಶ್ಯ.ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು ಹದಿಮೂರು ಮೈಕ್ರೋಫೋನ್ ಗಳ ಅಳವಡಿಕೆ,ಹೈ ಸ್ಟ್ಯಾಂಡರ್ಡ್ amplifier ಹಾಗೂ ಪೂರಕ ವ್ಯವಸ್ಥೆಗಳನ್ನು ಪಡೆದುಕೊಂಡು…

Read More

ಏಕದಿನ ಸಾಹಿತ್ಯ ಅಭಿಯಾನ: ಏಕತೆಯ ಮಂತ್ರ ಸಾರಿದ ಡಾ. ವಾಮನ್ ರಾವ್ ಬೇಕಲ್

ಮಂಗಳೂರು, ಜೂ. 28: ಕನ್ನಡ ಭಾಷೆ, ಸಾಹಿತ್ಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ), ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ತೊಕ್ಕೊಟ್ಟಿನ ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನದ ಅಂಬಾವನ ಧರ್ಮ ಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ “ಏಕದಿನ ಸಾಹಿತ್ಯ ಅಭಿಯಾನ – ಕನ್ನಡದ ನಡಿಗೆ… ಮಕ್ಕಳ ಕಡೆಗೆ” ಹಾಗೂ ಧರ್ಮ ಶಿಕ್ಷಣ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ…

Read More
error: Content is protected !!