ಶಾರ್ಟ್ ಸರ್ಕ್ಯೂಟ್ ನಿಂದ ಮೂರು ದ್ವಿಚಕ್ರ ವಾಹನ ಹಾಗೂ ಶೆಡ್ ಸಹಿತ ವಿವಿಧ ಸಾಮಾಗ್ರಿಗಳು ಉರಿದು ನಾಶ ಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬೊಳಂ ಪಾಡಿ ಬಳಿಯ ಕಯ್ಯಾರು ಕೆಳಗಿನ ಮನೆ ಪ್ರಕಾಶ್ ರೈ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಿನ್ನೆ ಮುಂಜಾನೆ ಪ್ರಕಾಶ್ ರೈ ಯವರು ಹೊರಗಡೆ ಹೋದಾಗ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ.
ಮನೆಯ ಬಳಿಯಲ್ಲೇ ಹೆಂಚು ಹಾಸಿದ ಶೆಡ್ಜ್ ಇದ್ದು ಇದಕ್ಕೆ ಬೆಂಕಿ ತಗಲಿ ಇದೇ ಪರಿಸರದಲ್ಲಿರಿಸ ಲಾಗಿದ್ದ ಎರಡು ಸ್ಕೂಟರ್, ಒಂದು ಬೈಕ್ ಹಾಗೂ ಶೆಡ್ಡೆಳಗಿದ್ದ ಮರಗಳು, ವಯರಿಂಗ್, ಪ್ಲಂಬಿAಗ್ನ ಪೈಪ್, ಇರ್ನ್ವಟರ್ನ ಬ್ಯಾಟರಿ ಸಹಿತ ವಿವಿಧ ಬಿಡಿಭಾಗಗಳು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅನಾಹುತ ಉಂಟಾಗಲು ಕಾರಣವೆಂದು ಅಂದಾಜಿಸಲಾಗಿದೆ.
ಸುಮಾರು 5ಲಕ್ಷ ರೂ. ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಸ್ಥಳಕ್ಕೆ ಪಂ. ಸದಸ್ಯೆ ರಹಮತ್ .ಬಿ, ನಿವೃತ್ತ ಸ್ಪೆಷಲ್ ವಿಲೇಜ್ ಆಫೀಸರ್ ಮೊಹಮ್ಮದ್ ಕುಂಞ, ಶ್ಲೋಕ್ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ರೈ ಬಿಜೆಪಿ ನೇತಾರ ಲೋಕೇಶ್ ನೋಂಡಾ ಮೊದಲಾದವರು ಭೇಟಿ ನೀಡಿದ್ದಾರೆ. ಪ್ರಕಾಶ್ ರೈ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.