ಮಲಯಾಳಂ ಕಡ್ಡಾಯ ಭಾಷಾ ಮಸೂದೆ-2025 ನ್ನು ಸರಕಾರ ಹಿಂದಕ್ಕೆ ಪಡೆಯುವ ಭರವಸೆ ನನಗಿದೆ:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ

ಮಂಗಳೂರು:ಕೇರಳ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಮಲಯಾಳಂ ಕಡ್ಡಾಯ ಭಾಷಾ ಮಸೂದೆ-2025*”ಯನ್ನು ಮರುಪರಿಶೀಲನೆ ನಡೆಸುವುದಾಗಿ ಕೇರಳ ರಾಜ್ಯಪಾಲರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಭರವಸೆ ನೀಡಿದ್ದಾರೆ ಅದಕ್ಕೆ ಅಂಕಿತವನ್ನು ಹಾಕುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ತಿಳಿಸಿದರು. ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದೆ ಈ ಹಿನ್ನೆಲೆಯಲ್ಲಿ ಕಾಸರಗೋಡು…

Read More

ಮಂಜೇಶ್ವರ: ಟೋಲ್ ಶುಲ್ಕ ವಸೂಲಿಗೆ ತೀವ್ರ ವಿರೋಧ, ಶಾಸಕರ ನೇತೃತ್ವದಲ್ಲಿ ರಸ್ತೆ ತಡೆ

ಮಂಜೇಶ್ವರ : ರಾ. ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹಕ್ಕೆ ಟೋಲ್ ವಿರೋಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ, ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ತಡೆಯೊಡ್ಡಲಾಯಿತು.ಸೋಮವಾರ ಬೆಳಿಗ್ಗೆ ಟೋಲ್ ಶುಲ್ಕ ವಸೂಲಾತಿ ಆರಂಭಗೊಂಡ ಬೆನ್ನಲ್ಲೇ ಪ್ರತಿಭಟನಾಕಾರರು ಆಗಮಿಸಿ ತಡೆಯೊಡ್ಡುವ ದೃಶ್ಯ ಕಂಡು ಬಂತು. ಕೂಡಲೇ ಆಗಮಿಸಿದ ಪೊಲೀಸರು ಶಾಸಕರ ಸಹಿತ ಪ್ರತಿಭಟನಾ ಕಾರರನ್ನು ಬಂಧಿಸಿ ಕೊಂಡೊಯ್ಯಲು ಯತ್ನಿಸಿದರು. ಇದು ಸ್ಥಳದಲ್ಲಿ ಸಂಘರ್ಷಾವಸ್ಥೆಗೆ ಕಾರಣವಾಯಿತು. ಟೋಲ್ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಕಾಸರಗೋಡು ಮಂಗಳೂರು ಮಧ್ಯೆ ಕು0ಬಳೆಯಲ್ಲಿ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ…

Read More

ಕೌಟುಂಬಿಕ ಕಥಾ ಹಂದರ “ಹೆಜ್ಜಾಲದ ಬಿಳಲುಗಳು” ಕೃತಿ ಲೋಕಾರ್ಪಣೆ:

ಮಂಗಳೂರು: ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಇದರ ಆಶ್ರಯದಲ್ಲಿ 49 ನೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 10.01.2026 ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು ಇವರ ಹನ್ನೆರಡನೆಯ ಕೃತಿ “ಹೆಜ್ಜಾಲದ ಬಿಳಲುಗಳು” ಕೌಟುಂಬಿಕ ಕಥಾ ಹಂದರವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ.ಮಹಾಬಲ ತಿಲಕ ಮಂಗಳೂರು ಇವರು ಬಿಡುಗಡೆಗೊಳಿಸಿ ಅಮ್ಮನ ಸಾಹಿತ್ಯ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದರು….

Read More

ಮಂಗಳೂರು: ‘ವಿ.ಬಿ–ಜಿ ರಾಮ್–ಜಿ’ ಮಸೂದೆ ಗ್ರಾಮೀಣ ಉದ್ಯೋಗಕ್ಕೆ ಹೊಸ ಬಲ – ಕಾಗೇರಿ

ಮಂಗಳೂರು: ‘ವಿಬಿ. ಜಿ- ರಾಮ್- ಜಿ’ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಈ ಮೂಲಕ ಈ 2047 ರಲ್ಲಿ ವಿಕಸಿತ ಭಾರತ ಕಲ್ಪನೆಗೆ ಇನ್ನಷ್ಟು ಪುಷ್ಟಿಯನ್ನು ನೀಡಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು . ಅವರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇದು ಉದ್ಯೋಗ ಅವಕಾಶವನ್ನು ಹೆಚ್ಚಿಸಲಿದೆ . ಉದ್ಯೋಗ ಖಾತ್ರಿ ಯೋಜನೆಯು ಪ್ರಮುಖವಾಗಿ 4 ಕಾರ್ಯಗಳಿಗೆ ವಿಶೇಷವಾದ ಮನ್ನಣೆಯನ್ನು ನೀಡಿದೆ . ಜಲ…

Read More

ಕರಾವಳಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮಂಗಳೂರು:ಕರಾವಳಿ ಪ್ರವಾಸೋದ್ಯಮಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ, ಹೊಸ ಹಾಗೂ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಕರಾವಳಿ ಪ್ರದೇಶವೆಂದರೆ ಸೌಂದರ್ಯ, ಜ್ಞಾನ ಮತ್ತು ಸಂಪತ್ತಿನ…

Read More

ಕುಂಬಳೆ ಟೋಲ್ ಪ್ಲಾಝ: ರಹಸ್ಯ ಆರಂಭಕ್ಕೆ ವಿರೋಧ, ಹೋರಾಟ ತೀವ್ರಗೊಳ್ಳುವ ಸೂಚನೆ

ಮಂಜೇಶ್ವರ : ಸೋಮವಾರದಿಂದ ಟೋಲ್ ಪ್ಲಾಝ ಕಾರ್ಯರಂಭಗೊಳ್ಳುವುದೆಂಬ ರಹಸ್ಯ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಕಾರ್ಯಕರ್ತರು ಕುಂಬಳೆ ಗ್ರಾ. ಪಂ. ಕಚೇರಿಯಲ್ಲಿ ತುರ್ತು ಸಭೆ ಸೇರಿದರು. ಬಳಿಕ ಟೋಲ್ ಪ್ಲಾಝ ಇರುವಲ್ಲಿಗೆ ತೆರಳಿ ಸೋಮವಾರ ಕಾರ್ಯಾರಂಭಗೊಂಡರೆ ಯಾವುದೇ ಬೆಲೆತೆತ್ತಾದರೂ ತಡೆದು ಪ್ರತಿಭಟಿಸುವುದಾಗಿ ಮುನ್ನೆಚ್ಚರಿಕೆ ನೀಡಿದರು. ಕುಂಬಳೆ ಗ್ರಾ. ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದ‌ರ್, ಕಾಸರಗೋಡು ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಅಝೀಝ್ ಕಳತ್ತೂರು,…

Read More

ಅಪ್ರಾಪ್ತ–ಯುವ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ: ಮಂಜೇಶ್ವರದಲ್ಲಿ ಮತ್ತೊಂದು ದಾರುಣ ಘಟನೆ

ಮಂಜೇಶ್ವರ: ಜಿಲ್ಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಕುಂಬಳೆ ಸಮೀಪದ ಮೃಮೂನ ನಗರದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಮಲಗುವ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ. ಸೀತಾಂಗೋಳಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಕುಂಬಳೆ ಮೃಮೂನ ನಗರ ದ ಹುಸೈನಾ‌ರ್ ಎಂಬವರ ಪುತ್ರ ಅಬ್ದುಲ್ ಅನ್ಸಾರ್ ಯಾನೆ ಅಜ್ಜು (19) ಸಾವನ್ನಪ್ಪಿದ ವಿದ್ಯಾರ್ಥಿ.ಕುಟುಂಬ ಮನೆಯಿಂದ ಹೊರಗೆ ತೆರಳಿದ ಸಂದರ್ಭ ಮನೆಯಲ್ಲಿ ಒಬ್ಬನೇ ಇದ್ದ ವೇಳೆ ಈತ ಈ ಕೃತ್ಯ ಎಸಗಿದ್ದಾನೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಸರಗೋಡು…

Read More

ಕಾಸರಗೋಡಿನಲ್ಲಿ ಮಲೆಯಾಳ ಮಸೂದೆಗೆ ವಿರೋಧ: ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಆಗ್ರಹ

ಕಾಸರಗೋಡು: ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿದ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ, ಕಾಸರಗೋಡಿನ ಕನ್ನಡಿಗರಲ್ಲಿ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷಿಕರನ್ನು ಮಸೂದೆಯ ವ್ಯಾಪ್ತಿಯಿಂದ ಹೊರತಾಗಿಸಬೇಕು ಎಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಕನ್ನಡಿಗರಿಗೆ ತಮ್ಮ ತಾಯ್ನುಡಿಯಲ್ಲೇ ಶಿಕ್ಷಣ ಪಡೆಯುವ ಹಕ್ಕು ಸಿಗಬೇಕು….

Read More

‘ಮಲೆಯಾಳಿ ಭಾಷಾ ಮಸೂದೆ-2025’ ಜಾರಿಗೆ ಬಂದರೆ ಕನ್ನಡ ಅಸ್ತಿತ್ವಕ್ಕೆ ಕೊಡಲಿ ಏಟು … !

ಗಡಿನಾಡ ಕನ್ನಡಿಗರು ಮತ್ತು ನೆರೆಯ ಕನ್ನಡ ರಾಜ್ಯ ಕರುನಾಡು ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ‘ಮಲೆಯಾಳಿ ಭಾಷಾ ಮಸೂದೆ-2025’ ನ್ನು ಜಾರಿಗೊಳಿಸುವುದನ್ನು ಒಗ್ಗಟ್ಟಾಗಿ ವಿರೋಧಿಸದಿದ್ದರೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ದೊಡ್ಡ ಕಂಟಕವೇ ಎದುರಾಗಲಿದೆ . ಕನ್ನಡ ನೆಲವಾಗಿದ್ದ ಕಾಸರಗೋಡು ದುರಂತವಾಗಿ ಕೇರಳಕ್ಕೆ ಸೇರಿದ್ದು , ಇಲ್ಲಿನ ಕನ್ನಡಿಗರು ದಿನ ನಿತ್ಯ ಕಾನೂನು ವೃತ್ತಿಗೆ ಸಮಂಧಿಸಿ ಹತ್ತಾರು ಸಮಸ್ಯೆಯನ್ನು ಎದುರಿಸುತ್ತಿರುವುದು, ನಿನ್ನೆ ಮೊನ್ನೆಯ ಮಾತೇನು ಅಲ್ಲ . ಇದೀಗ ಇಲ್ಲಿನ ಕನ್ನಡ ಶಾಲೆಗಳ ಅಸ್ತಿತ್ವವನ್ನೇ ಬುಡ ಮೇಲು ಮಾಡುವ ಕ್ರಮವನ್ನು…

Read More

ಸಾಹಿತಿ, ಶ್ರೇಷ್ಠ ಸಂಘಟಕ ಶ್ರೀ ಇರಾ ನೇಮು ಪೂಜಾರಿ ಯವರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026.ಕ್ಕೆ ಆಯ್ಕೆ

ಸಾಹಿತಿ, ಕವಿಯಾಗಿ, ಜನಮೆಚ್ಚಿದ ಸಂಘಟಕರಾಗಿ, ಕೃತಿ ಕರ್ತ ರಾಗಿ ಕನ್ನಡದ ಕಾಯಕವೇ ಉಸಿರಾಗಿರುವ ಮಂಗಳೂರಿನ ಶ್ರೀ ಇರಾ ನೇಮು ಪೂಜಾರಿಯವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026ಭಾನುವಾರ ದಂದು ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ದಲ್ಲಿ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದೆಯೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ…

Read More
error: Content is protected !!