ರಸ್ತೆ ಇಕ್ಕೆಲಗಳಲ್ಲಿ ಘನ ವಾಹನಗಳ ನಿಲುಗಡೆ; ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ

ಪುತ್ತೂರು:ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೂರ್ನಡ್ಕ, ಮರೀಲ್ ಎಂಬಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಘನ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದು ಇದರಿಂದಾಗಿ ಶಾಲಾ ಮಕ್ಕಳು ತೀವ್ರ ತೊಂದರೆ ಎದುರಿಸುವಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಲಾರಿ, ಪಿಕಪ್ ಮೊದಲಾದ ವಾಹನಗಳನ್ನು ನಿಲ್ಲಿಸಲಾಗಿದ್ದು ಇದರಿಂದಾಗಿ ಅಲ್ಲಿ ನಡೆದುಕೊಂಡು ಹೋಗಲು ತೊಂದರೆಯುಂಟಾಗಿದ್ದು ಶಾಲೆಗೆ ಹೋಗುವ ಮಕ್ಕಳಿಗಂತೂ ತುಂಬಾ ಸಮಸ್ಯೆ ಉಂಟಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದು, ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Read More

ಇಎಸ್‌ಐ ನೌಕರರ ನೆರವಿಗೆ ಶಾಸಕ ಅಶೋಕ್ ರೈ; ಮರು ನೇಮಕಕ್ಕೆ ಸೂಚನೆ

ಪುತ್ತೂರು: ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ನೌಕರರನ್ನು ಸಂಸ್ಥೆ ವಜಾಗೊಳಿಸಿದ್ದು, ಮೇ 31ರ ಬಳಿಕ ಕೆಲಸಕ್ಕೆ ಬಾರದಂತೆ ನೋಟಿಸ್ ನೀಡಿತ್ತು.ವಜಾಗೊಂಡ ನೌಕರರು ಇಂದು ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವಜಾಗೊಂಡವರಲ್ಲಿ ಮಂಗಳೂರು, ಪುತ್ತೂರು ಸೇರಿದಂತೆ ವಿವಿಧ ತಾಲೂಕಿನ 5 ನರ್ಸ್‌ಗಳು ಹಾಗೂ ಲ್ಯಾಬ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಸಿಬ್ಬಂದಿ ಇದ್ದಾರೆ.ಸಿಬ್ಬಂದಿ ಹೊರೆ ಇಳಿಸುವ ಉದ್ದೇಶದಿಂದ ಇಲಾಖೆ ಈ…

Read More

ನದಿ ತೀರದಲ್ಲಿ ಹಸುವಿನ ರುಂಡ ಪತ್ತೆ, ಸ್ಥಳೀಯರಲ್ಲಿ ಆಕ್ರೋಶ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಟ್ಟು ಪ್ರದೇಶದಲ್ಲಿ ನದಿ ತೀರದ ಬಳಿ ಹಸುವಿನ ರುಂಡ ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲಟ್ಟು ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ನದಿ ತೀರದಲ್ಲಿ ಈ ಅವಶೇಷ ಪತ್ತೆಯಾಗಿದ್ದು, ಸ್ಥಳೀಯ ಹಿಂದೂ ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ನದಿ ಪ್ರದೇಶವು ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಸುತ್ತಮುತ್ತಲಿನ ಅನೇಕ ದೇವಾಲಯಗಳ ಪುಣ್ಯಸ್ನಾನ ಹಾಗೂ ಧಾರ್ಮಿಕ ಜಳಕ ನಡೆಯುವ ಪವಿತ್ರ ತಾಣವಾಗಿದ್ದು, ಸ್ಥಳೀಯವಾಗಿ…

Read More

ಸಚಿವ ಸ್ಥಾನ ಚರ್ಚೆ ನಡುವೆಯೂ ಕ್ಷೇತ್ರದಲ್ಲೇ ಸಕ್ರಿಯರಾದ ಶಾಸಕ ಅಶೋಕ್ ರೈ

ಪುತ್ತೂರು: ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಮನೆಮಾಡಿದೆ. ಈ ನಡುವೆ ಬಹುತೇಕ ಕಾಂಗ್ರೆಸ್ ಶಾಸಕರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಕೆಲವರು ದೆಹಲಿಗೂ ಪಯಣ ಬೆಳೆಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಎಲ್ಲೆಡೆ ಲಾಬಿ ನಡೆಯುತ್ತಿದೆ.ಆದರೆ ಇದೆಲ್ಲದರ ನಡುವೆ ಪುತ್ತೂರು ಶಾಸಕ ಅಶೋಕ್ ರೈ ಯಾವುದೇ ಲಾಬಿಗೂ ಮುಂದಾಗದೆ ತಮ್ಮ ಕ್ಷೇತ್ರದ ಜನರ ಜೊತೆ ಬೆರೆತಿದ್ದಾರೆ. ಸೋಮವಾರ ಎಂದಿನಂತೆ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ…

Read More

ಹೊಸಂಗಡಿ ವಾಮಂಜೂರು ಜಿಎಲ್‌ಪಿಎಸ್‌ನಲ್ಲಿ ಪ್ರವೇಶೋತ್ಸವ: ಸಮಾಜಸೇವಕರು, ಹಳೆ ವಿದ್ಯಾರ್ಥಿಗೆ ಸನ್ಮಾನ

ಹೊಸಂಗಡಿ ವಾಮಂಜೂರು: ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (GLPS)ಯಲ್ಲಿ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿರುವ ವಾರ್ಡಿನ ಮಾಜಿ ಸದಸ್ಯ ಹಾಗೂ ಸಮಾಜಸೇವಕ ಆದರ್ಶ್ ಬಿ.ಎಂ. ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅಖಿಲ್ ಮೆಂತೆರೋ ವಾಮಂಜೂರು ಅವರನ್ನೂ ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ…

Read More

ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ – ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ

ಜೂನ್ – 1 ಶಾಲಾರಂಭ… ಬಣ್ಣದ ಕನಸುಗಳನ್ನು ಹೊತ್ತ ಪುಟಾಣಿಗಳ ಕಣ್ಣುಗಳಲ್ಲಿ ಏನೋ ಒಂದು ಆನಂದ.. ಉತ್ತಮ ಕಲಿಕೆ ಉಜ್ವಲ ಭವಿಷ್ಯವೆನ್ನುವ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯದ ಎಲ್ಲೆಡೆ ಶಾಲಾ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನುಡಿ ಬರೆಯಿತು. ಸಂಭ್ರಮದ ಕಲಿಕೆಗೆ ಸ್ವಾಗತಿಸಿದ ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಇಂದು ಮಕ್ಕಳದೇ ಕಲರವ. ಇಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ ಮಾತನಾಡಿ, “ಮಕ್ಕಳ ಮನದಲ್ಲಿ ಬಿತ್ತಿದ ಉಜ್ವಲ…

Read More

ಕಟ್ಟೆ ಪ್ರೆಂಡ್ಸ್ (ರಿ) ನೇತೃತ್ವದಲ್ಲಿ ಎಸ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕಟ್ಟೆ ಪ್ರೆಂಡ್ಸ್ (ರಿ)& ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ scವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು ವಿಜಯ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ದೈವದ ಪಾತ್ರಿ ಮಾದವ ಅಡ್ಕ, ರಾಧಾಕೃಷ್ಣ ಕಾರ್ನವರು ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಾಮೂಹಿಕ ವಂದೆ ಮಾತರಂ ಆಲಾಪಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ವಿ ಎನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉತ್ತಮ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ಎಲ್ಲಾ ಶಾಲಾ ವಿಷಯದಲ್ಲಿ ಮೂಂಚೂನಿಯಲ್ಲಿ ನಾವಿರ ಬೇಕು ಎಂದು ಕರೆಯಿತ್ತರು…

Read More

ಪಂಚಾಯತ್ ರಾಜ್ ಉಳಿವಿಗಾಗಿ ಬಂಟ್ವಾಳದಲ್ಲಿ ನಡೆದ ಪ್ರತಿಭಟನೆ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ – ಕುಳಾಲು ಸುಭಾಶ್ಚಂದ್ರ ಶೆಟ್ಟಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ.ಕ. ವತಿಯಿಂದ ಪಾಣೆಮಂಗಳೂರು ಬ್ಲಾಕ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಹಕಾರದೊಂದಿಗೆ, ಹಿರಿಯ ನಾಯಕರೂ ಮಾಜಿ ಸಚಿವರಾದ ಶ್ರೀ ಬಿ. ರಮನಾಥ ರೈ ಹಾಗೂ ಜಿಲ್ಲಾದ್ಯಕ್ಷರಾದ ಹರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.ಪಂಚಾಯತ್ ರಾಜ್ ಸಂಸ್ಥೆಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಕ್ರಮಗಳು ಹಾಗೂ ವಿವಿಧ ವೈಫಲ್ಯಗಳನ್ನು ಖಂಡಿಸಿ ನಡೆದ…

Read More

ಎಜೆಐ ಎಯುಪಿಎಸ್‌ ಉಪ್ಪಳದಲ್ಲಿ ಅದ್ದೂರಿ ಪ್ರವೇಶೋತ್ಸವ

ಈ ಸಾಲಿನ ಪ್ರವೇಶೋತ್ಸವ ಕಾರ್ಯಕ್ರಮವು ಬಣ್ಣಗಳ ವೈಭವದೊಂದಿಗೆ AJI AUPS ಉಪ್ಪಳದಲ್ಲಿ ಅದ್ದೂರಿಯಾಗಿ ನಡೆಯಿತು. ಶಾಲೆಯ ವ್ಯವಸ್ಥಾಪಕ ಇನ್‌ಚಾರ್ಜ್ ಹಾಗೂ AJI ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮಾಳಿಗಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶ್ರೀವಿದ್ಯಾ ಟೀಚರ್ ಸ್ವಾಗತ ಭಾಷಣ ಮಾಡಿದರು ಹಾಗೂ ಅಬ್ದುಲ್ಲಾ ಮಾದೇರಿ ಮುಖ್ಯ ಭಾಷಣ ಮಾಡಿದರು. ಈ ವರ್ಷ USS ವಿದ್ಯಾರ್ಥಿವೇತನ ಪಡೆದ ಶಜಾ ಹಾಗೂ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ…

Read More

‘ನನ್ನ ಮತ ನನ್ನ ಹಕ್ಕು’ ಅಭಿಯಾನದ ಅಂಗವಾಗಿ ಜನಜಾಗೃತಿ ಹೋರಾಟ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ‘ನನ್ನ ಮತ ನನ್ನ ಹಕ್ಕು’ ಸಂಘಟನೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ವಿನೋದ್ ಎಂ., ಎಸ್‌ಐಆರ್ ಪ್ರಕ್ರಿಯೆಯು ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಅರ್ಹ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ವಂಚಿಸುತ್ತಿದ್ದು, ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ…

Read More
error: Content is protected !!