ಕಾರಿನಲ್ಲಿ ಅಪಹರಿಸಿ ನಗ್ನ ವೀಡಿಯೋ; ಯುವಕನಿಂದ ಲಕ್ಷಾಂತರ ಹಣ ಸುಲಿಗೆ

ಕಾಸರಗೋಡು: ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ಯುವಕನೊಬ್ಬನನ್ನು ಅಪಹರಿಸಿ, ನಗ್ನ ವೀಡಿಯೋ ಚಿತ್ರೀಕರಿಸಿ 1.02 ಲಕ್ಷ ರೂಪಾಯಿ ಸುಲಿಗೆ ಮಾಡಿದ ಭೀಕರ ಘಟನೆಯ ಆರೋಪಿಗಳ ಸೂಚನೆ ಲಭಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ವಿಟ್ಲ ನಿವಾಸಿ ಸುಜಿತ್ ನೀಡಿರುವ ದೂರಿನನ್ವಯ ಐವರ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ​ಆಗಸ್ಟ್ 29ರಂದು ಸುಜಿತ್ ಅವರನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು, ಚೆರ್ಕಳದ ಕ್ವಾರ್ಟರ್ಸ್‌ವೊಂದಕ್ಕೆ ಕರೆದೊಯ್ದು ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಿದ್ದರು. ಬಳಿಕ ಪೋಕ್ಸೋ ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ಲಪಟಾಯಿಸಿದ್ದಾರೆ. ಘಟನೆ…

Read More

ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ಸಾಲ; ಕಾಸರಗೋಡಿನಲ್ಲಿ ಪ್ರಕರಣ

​ಕಾಸರಗೋಡು: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 11,44,000 ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಪೊಯಿನಾಚಿಯ ಅಬ್ದುಲ್ ಮಜೀದ್ (52) ಎಂಬಾತನ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ​ಆರೋಪಿಯು ಒಳಗೆ ಅರಗು ತುಂಬಿ ಮೇಲೆ ಚಿನ್ನದ ಲೇಪನ ಮಾಡಿದ್ದ 108.40 ಗ್ರಾಂ ತೂಕದ ಬಳೆ ಹಾಗೂ ನೆಕ್ಲೇಸ್ ಅಡವಿಟ್ಟು ಹಣ ಪಡೆದಿದ್ದನು. ಮಣಪ್ಪುರಂ ಫೈನಾನ್ಸ್ ಶಾಖಾ ವ್ಯವಸ್ಥಾಪಕ ಕಿರಣ್ ಕುಮಾರ್ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Read More

ಪರಶುರಾಮ್ ಎಕ್ಸ್‌ಪ್ರೆಸ್‌ನಲ್ಲಿ ವಿದ್ಯಾರ್ಥಿಯ ಬ್ಯಾಗ್ ಕಳವು: ಆರೋಪಿ ಬಂಧನ

​ಕಾಸರಗೋಡು: ಪರಶುರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಯ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಕಾಸರಗೋಡು ರೈಲ್ವೇ ಪೊಲೀಸರು ಗುರುವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.ಮಲಪ್ಪುರಂ ಮೂಲದ ಮೊಹಮ್ಮದ್ ಜಾಬೀರ್ (38) ಬಂಧಿತ ಆರೋಪಿ. ​ಆಗಸ್ಟ್ 22ರಂದು ಮಂಗಳೂರಿನ ಶ್ರೀನಿವಾಸ ಕಾಲೇಜು ವಿದ್ಯಾರ್ಥಿ ವಿಷ್ಣುದತ್ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ, ಅವರ ಬಳಿಯಿದ್ದ ಲ್ಯಾಪ್‌ಟಾಪ್ ಹಾಗೂ ಪ್ರಮುಖ ಸಾಮಗ್ರಿಗಳಿದ್ದ ಎರಡು ಬ್ಯಾಗ್‌ಗಳನ್ನು ಆರೋಪಿ ಕದ್ದು ಪರಾರಿಯಾಗಿದ್ದನು. ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಎಸ್‌ಐ ಸನಿಲ್ ಕುಮಾರ್ ಸಿ.ಎಸ್….

Read More

2010ರ ಕೊಲೆ ಪ್ರಕರಣದ ಪ್ರಮುಖ ಆರೋಪಿ 16 ವರ್ಷಗಳ ಬಳಿಕ ಉಪ್ಪಳದಲ್ಲಿ ಬಂಧನ

​ಕಾಸರಗೋಡು: 2010ರಲ್ಲಿ ನಡೆದ ತೀಕ್ಷ್ಣ ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಪ್ಪಳದಲ್ಲಿ ಕಣ್ಣೂರು ಸಿಟಿ ಪೊಲೀಸರ ವಿಶೇಷ ಪಡೆ ಬಂಧಿಸಿದೆ.ವಾಳಯಿಲ್ ಮುಹಮ್ಮದ್ ಅಲಿ (55) ಬಂಧಿತ ಆರೋಪಿ.​ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಳಿಯ ಮುಹಮ್ಮದ್ ಅಲಿ, ಬಾಮೈದರಾದ ಜಲಾಲ್ ಹಾಗೂ ಶಂಸೀರ್‌ಗೆ ಚೂರಿಯಿಂದ ಇರಿದಿದ್ದನು. ಗಂಭೀರ ಗಾಯಗೊಂಡಿದ್ದ ಜಲಾಲ್ ಸಾವನ್ನದ್ದರೆ, ಶಂಸೀರ್ ಚೇತರಿಸಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿ ವಳಪಟ್ಟಣಂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಜಾಮೀನಿನಲ್ಲಿ ಹೊರಬಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ​ಕೇರಳ ಮತ್ತು ಕರ್ನಾಟಕದ…

Read More

ಕೃಷ್ಣಾಷ್ಟಮಿ ಹೂವಿನ ವ್ಯಾಪಾರಕ್ಕೆ ಪಾಲಿಕೆ ಕಾರ್ಯಾಚರಣೆ; ಲಾರಿ ತಡೆದು ವ್ಯಾಪಾರಿಗಳ ಆಕ್ರೋಶ

ಮಂಗಳೂರು: ಕೃಷ್ಣಾಷ್ಟಮಿ ಹಬ್ಬದ ಪ್ರಯುಕ್ತ ಹೂವಿನ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ವಿರುದ್ಧ ನಗರಪಾಲಿಕೆ ಕಾರ್ಯಾಚರಣೆಗೆ ಮುಂದಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಮಿನಿವಿಧಾನಸೌಧದ ಎದುರು ಹೂವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಲಾರಿ ಕಾರ್ಯಾಚರಣೆಗೆ ಬಂದಿದ್ದು, ಇದನ್ನು ವ್ಯಾಪಾರಿಗಳು ತಡೆದು ಪ್ರತಿಭಟಿಸಿದ್ದಾರೆ. ಹಬ್ಬದ ಸಂದರ್ಭದಲ್ಲೂ ವ್ಯಾಪಾರ ನಡೆಸಲು ಅವಕಾಶ ನೀಡದಿರುವುದಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷ್ಣಾಷ್ಟಮಿ ಹಬ್ಬದ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಈ ಘಟನೆ ನಡೆದಿದ್ದು, ಮಿನಿವಿಧಾನಸೌಧದ ಎದುರು…

Read More

ಜೆಪ್ಪು ಬಪ್ಪಾಲ್ ತಾಂತಿನಗರ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಅನುದಾನ; ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಜೆಪ್ಪು ಬಪ್ಪಾಲ್ ತಾಂತಿನಗರ 2ನೇ ಮತ್ತು 3ನೇ ಅಡ್ಡರಸ್ತೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಯು 40 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯ ಬಿಜೆಪಿ ಪ್ರಮುಖರು, ನಿವಾಸಿಗಳು ಸಾಕಷ್ಟು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ಅನುದಾನಗಳನ್ನು ಜೋಡಿಸಿಕೊಂಡು ಈ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರಿಗೆ…

Read More

ಪೆರ್ನೆ ಸಮೀಪ ಮಹಿಳೆ ಅನುಮಾನಾಸ್ಪದ ಸಾವು; ಆತ್ಮಹತ್ಯೆಯೇ, ಕೊಲೆಯೇ ಎಂಬ ಶಂಕೆ

ಮಂಗಳೂರು /ಉಪ್ಪಿನಂಗಡಿ: ಪೆರ್ನೆ ಸಮೀಪ ಮಹಿಳೆಯೊಬ್ಬರು ಮನೆಯೊಳಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯ ಮೃತದೇಹ ಮನೆಯೊಳಗೆ ನೇಣು ಬಿಗಿದು ಅರ್ದ ಕಾಲು ನೆಲದ ಮೇಲೆ ಇದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಮೃತ ಮಹಿಳೆಯನ್ನು ಸೇವಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಮೃತರಿಗೆ ಇಬ್ಬರು ಮಕ್ಕಳಿದ್ದು ಇತ್ತೀಚೆಗೆ ಹೆಣ್ಣು ಮಗಳ ಮದುವೆ ನೆರವೇರಿಸಿದ್ದರು.ಅವರು…

Read More

ಫಾತಿಮಾ ನಿಶಾನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಶರತ್ತುಬದ್ಧ ಜಾಮೀನು

ಮಂಗಳೂರು:ಸುಳ್ಯದ ಕಡೆಪಾಲ ಬಳಿ ನಿಗೂಢವಾಗಿ ಕೊಲೆಯಾಗಿದ್ದ ಫಾತಿಮಾ ನಿಶಾನ ಕೊಲೆ ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜು.18 ರಂದು ರಾತ್ರಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಹಿಂಸೆ ನೀಡಿ ಕೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಸುಳ್ಯ ಹಿರಿಯ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆಯಿಷಾ ಮತ್ತು ಫಸೀಲಾ ಪರವಾಗಿ ಪುತ್ತೂರು…

Read More

ಸೆ.5ರಂದು ಮಂಗಳೂರಿನಲ್ಲಿ ‘ರೈಸ್ ಆ್ಯಂಡ್ ರೆಕ್ಲೈಮ್’ ಮಹಿಳಾ ಸಮ್ಮೇಳನ

ಮಂಗಳೂರು: ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ನಾಯಕತ್ವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ವಿಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ಸೆ.5ರಂದು ಮಂಗಳೂರಿನ ಪುರಭವನದಲ್ಲಿ ‘ರೈಸ್ ಆ್ಯಂಡ್ ರೆಕ್ಲೈಮ್’ ಧ್ಯೇಯವಾಕ್ಯದಡಿ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸದಸ್ಯೆ ಮಿಸ್ರಿಯಾ ಕಣ್ಣೂರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ, ದೇಶದ ಭವಿಷ್ಯ ರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರಾಜಕೀಯ, ಆಡಳಿತ, ಆರ್ಥಿಕತೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ…

Read More

ಸುಳ್ಯದ ಕಲ್ಲಪಳ್ಳಿಯಲ್ಲಿ ಅನುಮಾನಾಸ್ಪದವಾಗಿ ಚಿರತೆ ಸಾವು

ಮಂಗಳೂರು: ಸುಳ್ಯದ ಕಲ್ಲಪಳ್ಳಿಯಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಲ್ಲಪಳ್ಳಿ ಪ್ರದೇಶದ ಪೆರುಮುಂಡ ಗೋಪಾಲ ಗೌಡ ಎಂಬವರ ಜಾಗದಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೇಟೆಯಾಡುವ ವೇಳೆ ಯಾವುದೋ ಪ್ರಾಣಿಯನ್ನು ಅಟ್ಟಾಡಿಸಿಕೊಂಡು ಬರುವಾಗ ಆಕಸ್ಮಿಕವಾಗಿ ಬಿದ್ದು ಚಿರತೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು,…

Read More
error: Content is protected !!