ಕಾಸರಗೋಡು : ನಾನಂದಕುಳಿಯಲ್ಲಿ 11 ವರ್ಷದ ಬಾಲಕ ಸಾವು ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ದುರ್ಘಟನೆ

ಕಾಸರಗೋಡು : ಮಡಿಕೈ ಸಮೀಪದ ನಾನಂದಕುಳಿ ಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಕಾಂಞ್ಞರ ಪೊಯಿಲ್ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ರಾಜೇಶ್-ನೀತು ದಂಪತಿಯ ಏಕೈಕ ಪುತ್ರ ಅನೈಕ್ ಸಾವನ್ನಪ್ಪಿದ ದುರ್ದೈವಿ. ​ಶಾಲೆ ಮುಗಿಸಿ ಮನೆಗೆ ಬಂದಿದ್ದ ಅನೈಕ್, ಪಕ್ಕದ ಅಂಗನವಾಡಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಧ್ವಜಸ್ತಂಭದ ಪ್ಲಾಸ್ಟಿಕ್ ಹಗ್ಗ ಕುತ್ತಿಗೆಗೆ ಸಿಲುಕಿದೆ. ಸಂಜೆ ಆಟೋ ಚಾಲಕರೊಬ್ಬರು ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ….

Read More

ಕಾಸರಗೋಡು :ಮನೆ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಶೋಷಣೆ ಆರೋಪ

ಕಾಸರಗೋಡು : ಮನೆ ಕೆಲಸ ಕೊಡುಸುವುದಾಗಿ ನಂಬಿಸಿ ಕರ್ನಾಟಕ ಮೂಲದ ಯುವತಿಯ ಮೇಲೆ ಲೈಂಗಿಕ ಶೋಷಣೆ ಎಸಗಿದ ಆರೋಪದಲ್ಲಿ ಇರಿಯಾ ನಿವಾಸಿ ಪಾರಮ್ಮಲ್ ಬಶೀರ್ (56) ಎಂಬಾತನನ್ನು ರಾಜಪುರ ಪೊಲೀಸರು ಬಂಧಿಸಿದ್ದಾರೆ. ​ಸಂತ್ರಸ್ತೆಯ ತಾಯಿಗೆ ಭರವಸೆ ನೀಡಿ ಯುವತಿಯನ್ನು ಅಂಬಲತರಕ್ಕೆ ಕರೆಸಿಕೊಂಡಿದ್ದ ಬಶೀರ್, ಆಕೆಗೆ ವಸತಿ ವ್ಯವಸ್ಥೆ ಕಲ್ಪಿಸಿ ಕಳೆದ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ತದನಂತರ ಆಕೆಯನ್ನು ಪಳ್ಳಿಕೆರೆ ನಿವಾಸಿಯೊಬ್ಬನಿಗೆ ಹಸ್ತಾಂತರಿಸಿದ್ದು, ಆತನೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು…

Read More

ಕಾಸರಗೋಡಿನಲ್ಲಿ 13 ವರ್ಷದ ಬಾಲಕಿ ಗರ್ಭಿಣಿ: ತಂದೆ ಸೇರಿ ಇಬ್ಬರ ವಿರುದ್ಧ ಪ್ರಕರಣ

​ಕಾಸರಗೋಡು : 13 ವರ್ಷದ ಬಾಲಕಿಯ ಮೇಲೆ ಹತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ಹೇಳಿಕೆಯನ್ನಾಧರಿಸಿ, ಆಕೆಯ ಹುಟ್ಟುಹಾಕಿದ ತಂದೆ ಹಾಗೂ ಮಾವನ ಮಗನ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ​ಪ್ರಸ್ತುತ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಕೌಟುಂಬಿಕ ವಲಯದಲ್ಲೇ ಈ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾಸರಗೋಡು ಪೊಲೀಸ್ ವಿಭಾಗವು ತನಿಖೆಯನ್ನು ತೀವ್ರಗೊಳಿಸಿದೆ.

Read More

ಕರಾವಳಿಯ ಜನಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ ಸೆಪ್ಟಂಬರ್ 18 ರ ಸಚಿವ ಸಂಪುಟ ಸಭೆಗೆ ಮೆರವಣಿಗೆ : ಸಿಪಿಐಎಂ ನಿರ್ಧಾರ

ಮಂಗಳೂರಿನಲ್ಲಿ ನವಂಬರ್ 18 ರಂದು ರಾಜ್ಯ ಸರಕಾರ ನಡೆಸಲುದ್ದೇಶಿಸಿರುವ ಸಚಿವ ಸಂಪುಟ ಸಭೆ ಪ್ರವಾಸೋದ್ಯಮ, ಬಂಡವಾಳ ಹೂಡಿಕೆಗಳಿಗೆ ಸಂಬಂಧಿಸಿ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ, ಜನರ ಗಮನ ಸೆಳೆಯುವ ಇವೆಂಟ್ ಆಗಿ ಮುಗಿದು ಹೋಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಇದರ ಬದಲಾಗಿ ಕರಾವಳಿ ಕರ್ನಾಟಕದ ಜನ ಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು, ಜನಕೇಂದ್ರಿತವಾದ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು ಸಚಿವ ಸಂಪುಟದ ಹಾಗು ರಾಜ್ಯ ಸರಕಾರದ ಆದ್ಯತೆ ಆಗಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ. ಈ ಬೇಡಿಕೆಗಳನ್ನು ಮುಂದಿಟ್ಟು ಸಚಿವ…

Read More

ಅತ್ತಾವರ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆ ನರೇಶ್ ಮತ್ತು ಯೋಗೀಶ್ ಮನೆ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿಯು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅತ್ಯಲ್ಪ ಅನುದಾನದಲ್ಲಿ ಸುಮಾರು ಒಂದು ಕೋಟಿ ಅನುದಾನವನ್ನು ಈ ಭಾಗದ ಅಭಿವೃದ್ಧಿಗೆಂದೇ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಈ 30 ಲಕ್ಷದ ಕಾಮಗಾರಿಯೂ…

Read More

ಕದ್ರಿ ದೇವಾಲಯದ ರಾಜಾಂಗಣದಲ್ಲಿ ವೈಭವದಿಂದ ನಡೆದ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವಕೃಷ್ಣವೇಷ ಸ್ಪರ್ಧೆಯಲ್ಲಿ ಸಾವಿರಾರು ಪುಟಾಣಿ ಕೃಷ್ಣರು; 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಸ್ಪರ್ಧೆ

ಮಂಗಳೂರು: ಪುಟ್ಟ ಪುಟ್ಟ ಹೆಜ್ಜೆಗಳ ಗೆಜ್ಜೆನಾದ, ತುಂಟ ನಗು, ನಯನ ಮನೋಹರ ನೋಟ—ಇಂತಹ ಅಪೂರ್ವ ದೃಶ್ಯಗಳಿಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣ ಸಾಕ್ಷಿಯಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಹಾಗೂ ಕೃಷ್ಣವೇಷ ಸ್ಪರ್ಧೆ ಶುಕ್ರವಾರ ಕದ್ರಿ ದೇವಸ್ಥಾನದ ಆವರಣದಲ್ಲಿ ವೈಭವದಿಂದ ನಡೆಯಿತು. ಬೆಳಗ್ಗೆ 9 ಗಂಟೆಗೆ ‘ವರ್ಣ ವೈಭವ’ದೊಂದಿಗೆ ಸ್ಪರ್ಧೆಗಳು ಆರಂಭಗೊಂಡವು. ಬೆಳಗ್ಗೆ 10.30ಕ್ಕೆ ಸಾಂಪ್ರದಾಯಿಕವಾಗಿ ಮೊಸರು ಕಡೆದು ಬೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ಕೃಷ್ಣವೇಷದ…

Read More

ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು: ಇಬ್ಬರ ಬಂಧನ

ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಸೆ.3ರಂದು ರಾತ್ರಿ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಬಳಿ ಬೊಲೆರೋ ಪಿಕಪ್ ವಾಹನ ಹಾಗೂ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿ ಅವರು ಪರಾರಿಯಾಗಲು ಯತ್ನಿಸಿದಾಗ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ಬಂಧಿತರನ್ನು ಮಂಡ್ಯ ಜಿಲ್ಲೆಯ…

Read More

ಮೊಸರುಕುಡಿಕೆ, ಮೆರವಣಿಗೆ: ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಾಧ್ಯ

ದಿನಾಂಕ: 05-09-2026 ರಂದು ಮಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಂಜೆ 5:00 ಗಂಟೆಯಿಂದ ನಗರದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಹಾಗೂ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ಸೂಚಿಸಲಾಗಿದೆ. ವಾಹನ ಸಂಚಾರ ದಟ್ಟಣೆಯಾಗುವ ಸ್ಥಳಗಳು ಹಾಗೂ ಪರ್ಯಾಯ ಮಾರ್ಗಗಳ ವಿವರ: ದಿನಾಂಕ 05-09-2026 ರಂದು ಮಂಗಳೂರು…

Read More

ಮಿಯಾಪದವು ವ್ಯಾಪಾರಿ ಮೇಲಿನ ಗುಂಡಿನ ದಾಳಿ ಪ್ರಕರಣ ಮತ್ತೋರ್ವ ಆರೋಪಿ ಬಂಧನ

​ಮಂಜೇಶ್ವರ: ಮಿಯಾಪದವು ಬಟ್ಟಿಪ್ಪದವಿನಲ್ಲಿ ವ್ಯಾಪಾರಿಯೊಬ್ಬರ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಮಿಯಾಪದವು ನಿವಾಸಿ ರಹೀಮ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣಗಳಿವೆ. ​ಆಗಸ್ಟ್ ಎರಡನೇ ವಾರದಲ್ಲಿ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ತಂಡವು ಬಟ್ಟಿಪ್ಪದವಿನ ವ್ಯಾಪಾರಿ ಶುಹೈಬ್ ಮೊಯಿನ್ ಶೇಖ್ ಅವರಿಗೆ ಬೆದರಿಕೆಯೊಡ್ಡಿ ಗುಂಡು ಹಾರಿಸಿತ್ತು.ಪ್ರಕರಣದ ಇನ್ನೊಬ್ಬ ಆರೋಪಿ ‘ವೆಡಿ ಸಫಾನ್’ ಎಂದೇ ಪ್ರಸಿದ್ಧನಾದ…

Read More

ಮಂಗಳೂರಿನಲ್ಲಿ Blinkit ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಮಂಗಳೂರಿನಲ್ಲಿ ಆನ್‌ಲೈನ್‌ ಮೂಲಕ ಖರೀದಿಸಿದ ಮೊಟ್ಟೆಯಲ್ಲಿ ಹುಳ ಪತ್ತೆಯಾದ ಆರೋಪದ ಹಿನ್ನೆಲೆಯಲ್ಲಿ ಬ್ಲಿಂಕಿಟ್ ಸಂಸ್ಥೆಯ ಮಳಿಗೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫಳ್ನೀರ್‌ನ ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿರುವ ಬ್ಲಿಂಕಿಟ್‌ನ ಆನ್‌ಲೈನ್ ಮಾರಾಟ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಒಡೆದ ಮೊಟ್ಟೆಗಳನ್ನು ಹೊಂದಿದ್ದ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಬ್ಲಿಂಕಿಟ್ ಆ್ಯಪ್ ಮೂಲಕ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಹಕರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದ…

Read More
error: Content is protected !!