ಧರ್ಮಸ್ಥಳ ಪ್ರಕರಣ.ಇಂದು ಚಿನ್ನಯ್ಯನ ಹೇಳಿಕೆ ಪೂರ್ಣಗೊಳ್ಳುವ ನಿರೀಕ್ಷೆ.

ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿರುವ  ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಶನಿವಾರ ಕರೆತಂದಿದ್ದು ಇಂದು ಆತ ನ್ಯಾಯಾಲಯದ ಮುಂದೆ‌ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾನೆ .  ಬೆಳ್ತಂಗಡಿ ನ್ಯಾಯಾಲಯಕ್ಕೆ ಇಂದು ಬೆಳಗ್ಗೆ  ಶಿವಮೊಗ್ಗ ಜೈಲಿನಿಂದ  ಭದ್ರತೆಯಲ್ಲಿ ಕರೆದುಕೊಂಡು ಬಂದಿದ್ದು. 11.30 ಕ್ಕೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ  .ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ BNSS 183 ಹೇಳಿಕೆ ನೀಡಲಿದ್ದಾನೆ. ಈತ ಈ ಹಿಂದೆ ಎರಡು ದಿನಗಳ ಕಾಲ ಹೇಳಿಕೆ ನೀಡಿದ್ದು ಈತನ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಇಂದು ಮುಂದುವರಿದ ಹೇಳಿಕೆ…

Read More

ಸಿಗ್ನಲ್ ಲೈಟ್ ಇಲ್ಲೇಕೆ…… ?!

ಮಂಗಳೂರು: ಸಿಗ್ನಲ್ ಲೈಟ್ ನಗರದ ಮುಖ್ಯ ರಸ್ತೆಯಲ್ಲಿರುವುದು ಸಹಜ . ಆದರೆ ಕೆಟ್ಟು ಹೋದ ಸಿಗ್ನಲ್ ಲೈಟನ್ನು ಕಂಕನಾಡಿ ಬಸ್ ನಿಲ್ದಾಣದ ಫುಟ್ ಪಾತ್ ಮೇಲೆಯೇ ಇಡಲಾಗಿದೆ . ಇದು ಕಳೆದ ಒಂದು ಕೆಲವಾರು ದಿನಗಳ ಕಾಲ ಈ ಸ್ಥಳದಲ್ಲಿಯೇ ಇದ್ದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಕಾಣಿಸುತ್ತಿದೆ . ಆದಷ್ಟು ಬೇಗನೆ ಸಾರ್ವಜನಿಕ ಸ್ಥಳದಲ್ಲಿರುವ ಈ ಸಿಗ್ನಲ್ ಲೈಟಿನ ಅವಶೇಷವನ್ನು ಸೂಕ್ತ ಸ್ಥಳದಲ್ಲಿ ಸ್ಥಳಾಂತರ ಮಾಡಬೇಕು .

Read More

ಮದುವೆಯಾಗುವುದಾಗಿ ವಂಚನೆ ಪ್ರಕರಣ : ಶ್ರೀಕೃಷ್ಣನೇ ಅಪ್ಪ ಎಂದು ‘ಡಿ ಎನ್ ಎ ವರದಿಯಲ್ಲಿ ಬಂದಿದೆ’- ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ.

ಪುತ್ತೂರು:ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಡಿ ಎನ್ ಎ ಪರೀಕ್ಷೆ ವರದಿ ಬಂದಿದೆ. ಶ್ರೀಕೃಷ್ಣ ಜೆ ರಾವ್ ಮಗುವಿನ ಅಪ್ಪ ಎಂದು ಸಂತ್ರಸ್ತೆಯ ಮನೆಯವರಿಗೆ ಮಾಹಿತಿಯನ್ನು ತಿಳಿಸಲಾಗಿದೆ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸಮಾಜದ ಬಡ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಹಿಂದೆ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆಯಿತು. ಇವತ್ತಿನ ಕಾಲದಲ್ಲಿ ಡಿ ಎನ್ ಎ ಪರೀಕ್ಷೆಯೇ ಅಂತಿಮವಾಗಿದೆ. ಹಾಗಾಗಿ ಎಲ್ಲಾ ವಿಚಾರಕ್ಕೂ ಡಿ ಎನ್…

Read More

ಮಲ್ಪೆಯಲ್ಲಿ AKMS ಬಸ್ ಮಾಲಕ ರೌಡಿಶೀಟರ್ ಸೈಫುದ್ದೀನ್ ನ ಗುಂಡಿಕ್ಕಿ ಹತ್ಯೆಗೈದ ಅಪರಿಚಿತ ದುಷ್ಕರ್ಮಿಗಳು!

ಉಡುಪಿ: AKMS ಬಸ್ ಮಾಲಕ ಕೊಲೆ, ಕೊಲೆಯತ್ನದಂತಹ ಹತ್ತಾರು ಪ್ರಕರಣಗಳ ಆರೋಪಿ ರೌಡಿ ಶೀಟರ್ ಸೈಫುದ್ದೀನ್ ನನ್ನು ಮಲ್ಪೆ ಸಮೀಪದ ಕೊಡವೂರಿನ ಆತನ ಮನೆಯಲ್ಲೇ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಣಿಪಾಲ ಅತ್ರಾಡಿ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಆತನ ಮೇಲೆ ಗುಂಡು ಹಾರಿಸಿದ ನಂತರ, ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ…

Read More

ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ.4 ಕಿ.ಮೀ ಹೆಗಲ ಮೇಲಿಟ್ಟು ಆಂಬುಲೆನ್ಸ್ ವಾಹನಕ್ಕೆ ಸಾಗಿಸಿ ಮಾನವೀಯತೆ ಮೆರೆದ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು.

ಉಳ್ಳಾಲ : ಕೊಳೆತ ಸ್ಥಿತಿಯಲ್ಲಿದ್ದ ಮೃತದೇ ಹ ಉಳ್ಳಾಲ ಸಮುದ್ರ ತೀರದ ಅಳಿವೆಬಾಗಿಲು ಬ್ರೇಕ್ ವಾಟರ್ ಕಲ್ಲುಗಳ ಮಧ್ಯೆ ಸಿಲುಕಿರುವುದನ್ನು ಉಳ್ಳಾಲ ಮೊಗವೀರಪಟ್ನ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು 3-4 ಕಿ.ಮೀ ದೂರ ಎತ್ತಿಕೊಂಡು ಸಾಗಿ ಆಂಬುಲೆನ್ಸ್ ವಾಹನಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರುಗಳಾದ ಯೋಗೀಶ್ ಅಮೀನ್, ಪ್ರಸಾದ್ ಸುವರ್ಣ, ಚಂದ್ರಹಾಸ್ ಸುವರ್ಣ ಎಂಬವರು ತೀರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ವನ್ನು ಹೆಗಲ ಮೇಲೆ ಇಟ್ಟು…

Read More

ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಿಕೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ನ್ಯಾಯಾಲಯವು ಸೆ.30ಕ್ಕೆ ಮುಂದೂಡಿದೆ. ಶನಿವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಸಕಾರಿ ವಕೀಲರು ಸಮಯಾವಕಾಶ ಕೋರಿದ್ದಾರೆ ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಸೆ.30ಕ್ಕೆ ವಿಚಾರಣೆಯ ನ್ನು ಮುಂದೂಡಿದ್ದಾರೆ.

Read More

ರಚನಾತ್ಮಕ ಹೃದಯ ಮಧ್ಯಸ್ಥಿಕೆಯ ಚಿಕಿಸ್ತಾ ವಿಧಾನದಿಂದ ಗುಣಮುಖರಾದ ರೋಗಿಗಳ ಸಮುಖದಲ್ಲಿ ಹೃದಯ ದಿನಾಚರಣೆಯನ್ನು ಆಚರಿಸಿದ ಇಂಡಿಯಾನಾ ಆಸ್ಪತ್ರೆ.

ಮಂಗಳೂರು: ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ಮಂಗಳೂರು ತನ್ನ 2 ನೇ ವರ್ಷದ ರಚನಾತ್ಮಕ ಹೃದಯ ಮದ್ಯಸ್ಥಿಕೆಗಳೊಂದಿಗೆ ವಿಶ್ವ ಹೃದಯ ದಿನಾಚರಣೆಯನ್ನು TAVR/TAVI, TMVR, TTVR, ಮತ್ತು MitraClip ಕಾರ್ಯ ವಿಧಾನಗಳಂತಹ ಮುಂದುವರಿದ ರಚನಾತ್ಮಕ ಹೃದಯ ಮಧ್ಯಸ್ಥಿಕೆಯ ಚಿಕಿಸ್ತಾ ವಿಧಾನದಿಂದ ಯಶಸ್ವಿಯಾಗಿ ಗುಣ ಮುಖ ಹೊಂದಿದ ರೋಗಿಗಳನ್ನು ಸನ್ಮಾನಿಸುವ ಮೂಲಕ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತ್ತು . ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ , ಇಂದಿನ…

Read More

ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ . ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯ.

ಮಂಜೇಶ್ವರ : ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಮತ್ತು ಕಾಸರಗೋಡು ಕಡೆಗೆ ಬರುತ್ತಿದ್ದ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕಾರ್ಮಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Read More

ಪಡುಬಿದ್ರಿ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಪಿಕಪ್ ಗೆ ಟಿಪ್ಪರ್ ಡಿಕ್ಕಿ; ಭೀಕರ ಅಪಘಾತಕ್ಕೆ ನವ ವಿವಾಹಿತ ಬಲಿ.

ಉಡುಪಿ: ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ನಡೆದ ಅಪಘಾತದಲ್ಲಿ ನವ ವಿವಾಹಿತನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.ಮೃತನನ್ನು ಬಿಹಾರ ಮೂಲದ ಎರ್ಮಾಳಿನ ಪ್ರೈವುಡ್ ಫ್ಯಾಕ್ಟರಿ ಉದ್ಯೋಗಿ ರಾಜಕುಮಾರ ಶರ್ಮ(23) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿ ಪೇಟೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರ…

Read More

ಅಫೀಮು ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳ ಬಂಧನ.

ಮಂಗಳೂರು: ಎಸಿಪಿ ತಂಡ ಮತ್ತು ಬರ್ಕೆ ಪೊಲೀಸರ ಜಂಟಿ ಕಾರ್ಯಾಚರಣೆ ಯಲ್ಲಿ ಅಫೀಮು ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ರಾಜಸ್ಥಾನ ಮೂಲದ ವಾಸುದೇವ(48) ಮತ್ತು ಈತನಿಗೆ ಮಾದಕ ವಸ್ತುವನ್ನು ಪೂರೈಸಿದ್ದ ರಾಜಸ್ಥಾನ್ ಮೂಲದ ಮಂಗಲ್ ಚೌಧರಿ(44) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು ನಲ್ವತ್ತು ಸಾವಿರ ರೂಪಾಯಿ ಬೆಲೆಬಾಳುವ 151 ಗ್ರಾಂ ಓಪಿಯಂ ಮಾದಕ ವಸ್ತು, 2 ಮೊಬೈಲ್, ಒಂದು ದ್ವಿಚಕ್ರ ವಾಹನ ವಶಪಡಿಸಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು…

Read More
error: Content is protected !!