ಮ್ಯಾಂಗೋ ಬರ್ಫಿ

ಬೇಕಾಗುವ ಸಾಮಾಗ್ರಿಗಳು

ಓಟ್ಸ್ – 30 ಗ್ರಾಂ

ಗೋಡಂಬಿ – 30 ಗ್ರಾಂ

ತೆಂಗಿನಪುಡಿ – 20 ಗ್ರಾಂ

ಸಕ್ಕರೆ ಅಥವಾ ಬೆಲ್ಲ – 15 ಗ್ರಾಂ

ಮಾವಿನಹಣ್ಣಿನ ಪ್ಯೂರಿ – 70 ಗ್ರಾಂ

ಏಲಕ್ಕಿ ಪುಡಿ – ಕಾಲು ಟೀ ಸ್ಪೂನ್

ಬಾದಾಮಿ – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ 2 ರಿಂದ 3 ನಿಮಿಷ ಓಟ್ಸ್ ಅನ್ನು ಲೋ ಫ್ಲೇಮ್ ನಲ್ಲಿ ರೋಸ್ಟ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಗೋಡಂಬಿ, ತೆಂಗಿನಪುಡಿ ಹಾಕಿ ಮತ್ತೆ ರೋಸ್ಟ್ ಮಾಡಬೇಕು. ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಪೇಸ್ಟ್ ರೀತಿ ಆಗುವವರೆಗೂ ಕುದಿಸಬೇಕು. ಇದನ್ನು ಅಗಲವಾದ ತಟ್ಟೆಗೆ ಹಾಕಿ, ಅದರ ಮೇಲೆ ಬಾದಾಮಿಯಿಂದ ಅಲಂಕರಿಸಿಕೊಂಡು ತಣ್ಣಗಾಗಲು ಬಿಡಬೇಕು. ನಂತರ ಚೌಕಾಕಾರದಲ್ಲಿ ಕಟ್ ಮಾಡಿದರೆ ಮ್ಯಾಂಗೋ ಬರ್ಫಿ ರೆಡಿಯಾಗುತ್ತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!