ಬೇಕಾಗುವ ಪದಾರ್ಥಗಳು…
- ಅನ್ನ- 1 ಬಟ್ಟಲು
- ಕ್ಯಾರೇಟ್- 2
- ಈರುಳ್ಳಿ- 1
- ಹಸಿ ಮೆಣಸಿನಕಾಯಿ- 4
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಲಿಂಬೆಹಣ್ಣಿನ ರಸ- ಸ್ವಲ್ಪ
- ಶುಂಠಿ- ಸ್ವಲ್ಪ
- ಎಣ್ಣೆ- ಸ್ವಲ್ಪ
- ಉದ್ದಿನಬೇಳೆ- ಸ್ವಲ್ಪ
- ಸಾಸಿವೆ-ಸ್ವಲ್ಪ
- ಕಡಲೆಬೀಜ- ಸ್ವಲ್ಪ
- ಅರಿಶಿಣ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೀಜ, ಹಸಿ ಮೆಣಸಿನಕಾಯಿ, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಕ್ಯಾರೆಟ್ ತುರಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
- ಕ್ಯಾರೆಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದೀಗ ರುಚಿಕರವಾದ ಕ್ಯಾರೆಟ್ ಬಾತ್ ಸವಿಯಲು ಸಿದ್ಧ.