ಇರಾನ್ ಮೇಲೆ ಮತ್ತೆ ದಾಳಿ ನಡೆದರೆ ಅಮೆರಿಕದ ನೆಲೆಗಳೇ ಟಾರ್ಗೆಟ್? ಗುಪ್ತಚರ ಮೂಲಗಳ ಎಚ್ಚರಿಕೆ

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಮತ್ತೊಂದು ಸುತ್ತಿನ ಸೇನಾ ದಾಳಿ ನಡೆಸಿದರೆ, ಇರಾನ್ ಹಾಗೂ ಯೆಮೆನ್‌ನ ಹೌತಿ ಬಂಡುಕೋರರು ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳು ಎಚ್ಚರಿಸಿವೆ.

ಇರಾನ್ ಮೇಲೆ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮತ್ತು ಸಿಬ್ಬಂದಿಯನ್ನು ಇರಾನ್ ಹಾಗೂ ಹೌತಿಗಳು ಗುರಿಯಾಗಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಪ್ರತೀಕಾರದ ಕ್ರಮಗಳು ಮಧ್ಯಪ್ರಾಚ್ಯವನ್ನು ಮೀರಿ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

ಆದರೆ, ಅಮೆರಿಕ ಅಥವಾ ಇಸ್ರೇಲ್ ಮೊದಲು ದಾಳಿ ನಡೆಸದ ಹೊರತು ಇರಾನ್ ಮತ್ತು ಹೌತಿಗಳು ಮುಂಚಿತವಾಗಿ ದಾಳಿ ಮಾಡುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಅಂದಾಜಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!