ರನ್ ಔಟ್ ತೀರ್ಪಿಗೆ ಗಲಾಟೆ: ಅಂಪೈರ್ ಆಗಿದ್ದ 21 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಆಂಧ್ರಪ್ರದೇಶ : ವಿಶಾಖಪಟ್ಟಣದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ರನ್ ಔಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮೃತನನ್ನು 21 ವರ್ಷದ ಡೋಲಾ ಅಜಿತ್ ಬಾಬು ಎಂದು ಗುರುತಿಸಲಾಗಿದೆ.

ಪೊಲೀಸರು ಹೇಳುವಂತೆ ಪಂದ್ಯವನ್ನು ಡೋಲಾ ಅಜಿತ್ ಬಾಬು ಮತ್ತು ಅವರ ಸ್ನೇಹಿತ ಬುಡುಮುರಿ ಚಿರಂಜೀವಿ ನಿರ್ವಹಿಸುತ್ತಿದ್ದರು, ಪಂದ್ಯದ ಸಮಯದಲ್ಲಿ, ಆಟಗಾರರ ನಡುವೆ ರನ್-ಔಟ್ ತೀರ್ಪಿನ ಬಗ್ಗೆ ವಾಗ್ವಾದ ನಡೆಯಿತು. ಅಜಿತ್ ಬಾಬು ಮತ್ತು ಚಿರಂಜೀವಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರೂ, ಪ್ರೇಕ್ಷಕರಲ್ಲಿ ಒಬ್ಬರಾದ ಕಾಂತ ಕಿಶೋರ್ (26) ಕೋಪಗೊಂಡು ಅಂಪೈರ್‌ ಮತ್ತು ಆಟಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ ಗಲಾಟೆ ಮುಗಿದ ನಂತರ, ಅಜಿತ್ ಬಾಬು, ಚಿರಂಜೀವಿ ಮತ್ತು ಕೆಲವು ಸ್ನೇಹಿತರು ನಡೆದುಕೊಂಡು ಹೋಗುತ್ತಿರುವಾಗ ಕಾಂತ ಕಿಶೋರ್ ನ ತಂಡ ಪುನಃ ಬಂದು ನಿಂದಿಸಲು ಪ್ರಾರಂಭಿಸಿದರು ಇವರ ನಡುವೆ ಮತ್ತೊಮ್ಮೆ ವಾಗ್ವಾದ ನಡೆಯಿತು. ಈ ಸಮಯದಲ್ಲಿ, ಕಾಂತ ಕಿಶೋರ್ ಇದ್ದಕ್ಕಿದ್ದಂತೆ ಚಾಕುವನ್ನು ತೆಗೆದುಕೊಂಡು ಇಬ್ಬರು ಅಂಪೈರ್‌ಗಳ ಮೇಲೆ ಹಲ್ಲೆ ನಡೆಸಿದ. ಎದೆಗೆ ಬಲವಾದ ಇರಿತಕ್ಕೊಳಗಾದ ಅಜಿತ್ ಬಾಬು ಸ್ಥಳದಲ್ಲೇ ಕುಸಿದುಬಿದ್ದರೆ. ಚಿರಂಜೀವಿಗೂ ಗಂಭೀರ ಗಾಯವಾಗಿದೆ ಅವರನ್ನು ತಡೆಯಲು ಪ್ರಯತ್ನಿಸಿದ ಮತ್ತೊಬ್ಬ ವ್ಯಕ್ತಿಗೂ ಗಾಯವಾಗಿದೆ.

ಗಾಯಾಳುಗಳನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅಜಿತ್ ಬಾಬು ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಅಜಿತ್ ಬಾಬು ಅವರ ತಂದೆ ಡೋಲಾ ಅಪ್ಪಲ ರಾಜು ನೀಡಿದ ದೂರಿನ ಆಧಾರದ ಮೇಲೆ, ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಹುಡುಕಾಟ ನಡೆಯುತ್ತಿದೆ. ಆರೋಪಿ ಕುಡಿದಿದ್ದ ಎಂದು ವರದಿಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!