ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್ ವಲಯ 8 ರ ಆಶ್ರಯದಲ್ಲಿ ಮಂಗಳೂರು ಜೈನ್ ಮಿಲನ್ ಅತಿಥೇಯತ್ವದಲ್ಲಿ ಪ್ರತಿಷ್ಠಿತ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮವು ಜನವರಿ 3 ಹಾಗೂ 4 ರಂದು ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಅದ್ದೂರಿಯಾಗಿ ನೆರವೇರಿತು.

ಪರಮ ಪೂಜ್ಯ ಯುಗಲ ಮುನಿ ಮಹಾರಾಜರ ಆಶೀರ್ವಾದದೊಂದಿಗೆ ಶ್ರವಣಬೆಳಗೊಳ ಹಾಗೂ ಮೂಡುಬಿದಿರೆ ಮಠದ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಭವ್ಯ ಉಪಸ್ಥಿತಿಯಲ್ಲಿ, ಪೂಜ್ಯ ರಾಜರ್ಷಿ ಡಿ ವೀರೇಂದ್ರ ಹೆಗ್ಗಡೆಯವರ ಭಾಗವಹಿಸುವಿಕೆಯಲ್ಲಿ ಜರುಗಿದ ಈ ಹಬ್ಬ ರಾಜ್ಯದ ಎಲ್ಲಾ ಧರ್ಮಬಂಧುಗಳ ಗಮನ ಸೆಳೆಯಿತು

ಧಾರವಾಡ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಹಾಗೂ ಶ್ರೀಮತಿ ಪದ್ಮಾಲತಾರವರಿಂದ ಧ್ವಜರೋಹಣದಿಂದ ಆರಂಭವಾದ ಈ ಕಾರ್ಯಕ್ರಮವು ಜನವರಿ 3 ನೇ ಶನಿವಾರ ರಾಜ್ಯ ಮಟ್ಟದ ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಭಜನಾ ತಂಡಗಳ ಸೆಮಿ ಫೈನಲ್ ಸುತ್ತಿನ ಸ್ಪರ್ಧೆ ಉದ್ಘಾಟನೆಯಲ್ಲಿ ಮೂಡುಬಿದಿರೆ ಮಠದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದ್ದರು. ಉದ್ಯಮಿ ಶ್ರೀ ದಿಲೀಪ್ ಜೈನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಶ್ರೀ ಸುರೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್ ಸುರೇಶ್ ಬಲ್ಲಾಳ್, ಅಭಯಚಂದ್ರ ಜೈನ್ ಶ್ರೀ ವಿಕಾಸ್ ಜೈನ್, ಡಾ ನಿರಂಜನ್ ದಂಪತಿಗಳು, ಶ್ರೀ ಸುದರ್ಶನ್ ಜೈನ್ ಶ್ರೀ ರತ್ನಕರ್ ಜೈನ್ ಹಾಗೂ ಮಿಲನ್ ಪದಾಧಿಕಾರಿಗಳು ವೇದಿಕೆಯಲ್ಲಿ ಭಾಗವಹಿದರು.

ಹಿರಿಯ ಹಾಗೂ ಕಿರಿಯ ವಿಭಾಗದ ಒಟ್ಟು 57 ಭಜನಾ ತಂಡಗಳು ಭಾಗವಹಿಸಿದ್ದ ಈ ಸ್ಪರ್ಧಯಲ್ಲಿ ಕ್ರಮವಾಗಿ 15 ಹಾಗೂ 12 ತಂಡಗಳು ಹಿರಿಯ ಹಾಗೂ ಕಿರಿಯ ವಿಭಾಗದಿಂದ ಫೈನಲ್ ಗೆ ಅರ್ಹತೆ ಪಡೆದವು. ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ರವರು ಜಿನ ಭಜನೆಯ ಸವಿಯನ್ನು ಉಂಡರು
  ಸಂಜೆ ಶ್ರೀ ಡಿ ರಾಜೇಂದ್ರ ಕುಮಾರ್ ಹಾಗೂ ನೀತಾ ರಾಜೇಂದ್ರ ಕುಮಾರ್ ರವರಿಂದ ಉದ್ಘಾಟನೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು ಮಿಲನ್ ಸದಸ್ಯರು ಹಾಗೂ ಆಳ್ವಾಸ್ ಪ್ರತಿಷ್ಠಾನದಿಂದ ವೈಭವಡ್ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

  ಶ್ರವಣಬೆಳಗೊಳ ಮಠದ ಪೂಜ್ಯ ಸ್ವಸ್ತಿಶ್ರೀ ಶ್ರೀಮದಭಿನವ ಚಾರುಕೀರ್ತಿ ಪಂಡಿತಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ವೈಭವದ ಮಂಗಳೂರು ಪುರಪ್ರವೇಶ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಜನವರಿ 4 ರ ಫೈನಲ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ನೆರವೇರಿಸಿದರು. ಶ್ರೀ ಎಂ ಏನ್ ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಪಿ ಪಿ ಹೆಗ್ಡೆ ಶ್ರೀ ದಿಲೀಪ್ ಕುಮಾರ್ ಸುರೇಂದ್ರ ಕುಮಾರ್ ದಂಪತಿಗಳು ರತ್ನಕರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ ಶೃತಕೀರ್ತಿರಾಜ್ ಸಂಪಾದಕತ್ವದ ಸಿದ್ದವನದ ಸಂತ ಎಂಬ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

 ಮೂಡುಬಿದೆರೆ ಮಠದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಪಾವನ ಸಾನಿಧ್ಯದಲ್ಲಿ ಶ್ರೀ ಯು ಟಿ ಖಾದರ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟಿ ಲೇಖಕಿ ನಿರ್ದೇಶಕಿ ರಂಜಿನಿ ರಾಘವನ್, ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್ ಅಯ್ಯೋ ಶ್ರದ್ದಾ ಖ್ಯಾತಿಯ ಶ್ರೀಮತಿ ಶ್ರದ್ದಾ ಜೈನ್ ಭಾಗವಹಿಸಿದರು.ಸುರೇಂದ್ರ ಕುಮಾರ್ ದಂಪತಿಗಳು, ಶ್ರೀಮತಿ ಶ್ರದ್ದಾ ಅಮಿತ್, ಶ್ರೀಮತಿ ಸೋನಿಯಾ ಯಶವರ್ಮ, ಶ್ರೀ ಪ್ರಸನ್ನ ಕುಮಾರ್, ಶ್ರೀಮತಿ ಶೀಲಾ ಅನಂತ್ ರಾಜ್, ಶ್ರೀ ಯುವರಾಜ್ ಭಂಡಾರಿ, ಶ್ರೀ ಪುಷ್ಪರಾಜ್ ಜೈನ್, ಶ್ರೀ ಸುದರ್ಶನ್ ಜೈನ್ ಶ್ರೀ ರತ್ನಕರ್ ಜೈನ್ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಭಜನೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.

ಈ ವೈಭವದ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನದವರ ಪರಿಕಲ್ಪನೆಯಲ್ಲಿ ಮೂಡಿ ಬಂದ ವಿಶೇಷ ವಿನ್ಯಾಸದ ವೇದಿಕೆ ಹಾಗೂ ಸಭಾಂಗಣ 24 ತೀರ್ಥಂಕರರ ಬಿಂಬಗಳು ಭಗವಾನ್ ಬಾಹುಬಲಿಯ ಮೂರ್ತಿ  ವಿಶಿಷ್ಟ ಶೈಲಿಯ ದೀಪದ ಅಲಂಕಾರ ಎಲ್ಲರ ಗಮನ ಸೆಳೆಯಿತು ತುಳುನಾಡಿನ ಜೈನ ಶೈಲಿಯ ಉಟೋಪಚಾರ ಆತಿಥ್ಯ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!