ಮಲ್ಪೆ: ಕತ್ತರಿಸಿದ ಬಳಿಕವೂ ಬಂಗುಡೆ ಮೀನೊಂದು ಜೀವಂತವಾಗಿದ್ದ ಅಪರೂಪದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದಿದೆ.ಗ್ರಾಹಕರೊಬ್ಬರು ಮಲ್ಪೆ ಬಂದರಿನಲ್ಲಿ ಮೀನು ಖರೀದಿಸಿ, ಮೀನು ಮಾರಾಟ ಮಹಿಳೆಯ ಬಳಿ ಬಂಗುಡೆ ಮೀನನ್ನು ಕತ್ತರಿಸಿ ಕೊಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಮಹಿಳೆ ಮೀನನ್ನು ತುಂಡರಿಸಿ ಟಬ್‌ಗೆ ಹಾಕಿದ್ದು, ಅದರಲ್ಲಿ ಒಂದು ಮೀನಿನ ತುಂಡು ಜೀವಂತವಾಗಿ ಒದ್ದಾಡುತ್ತಿರುವುದನ್ನು ಗಮನಿಸಿದವರು ಬೆಚ್ಚಿಬಿದ್ದಿದ್ದಾರೆ.
ಈ ಅಸಾಮಾನ್ಯ ದೃಶ್ಯವನ್ನು ಕಂಡ ಮೀನು ಮಾರಾಟ ಮಹಿಳೆಯರು ಹಾಗೂ ಬಂದರಿನಲ್ಲಿ ಇದ್ದ ಜನರು ನಿಬ್ಬೆರಗಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.