ಮಂಗಳೂರು: ಕವಯತ್ರಿ, ಲೇಖಕಿ ಹಾಗೂ ಆದರ್ಶ ಶಿಕ್ಷಕಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಾರದಾ ಮೊಳೆಯಾರ್ ಅವರಿಗೆ ಪ್ರತಿಷ್ಠಿತ ‘ಚುಟುಕು ಸಿರಿ ರತ್ನ’ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಡಾ. ವಾಮನ್ ರಾವ್ ಬೇಕಲ್ ಸ್ಥಾಪಕರಾಗಿರುವ ಕನ್ನಡ ಭವನ ನುಳ್ಳಿಪ್ಪಾಡಿ, ಕಾಸರಗೋಡು ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ ವಾರ್ಷಿಕೋತ್ಸವದ ಪ್ರಯುಕ್ತ ಈ ಗೌರವ ನೀಡಲಾಗುತ್ತಿದೆ.
ಕನ್ನಡ ಭವನದ ‘ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್’ ವೇದಿಕೆಯಲ್ಲಿ ಫೆಬ್ರವರಿ 22, 2026 (ಭಾನುವಾರ) ನಡೆಯಲಿರುವ **‘ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’**ರ ಬೃಹತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀಮತಿ ಶಾರದಾ ಮೊಳೆಯಾರ್ ಅವರ ಚುಟುಕು ಸಾಹಿತ್ಯ ಕ್ಷೇತ್ರದ ಸಾಧನೆ, ಸಾಹಿತ್ಯ ಸೇವೆ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.