ಬಂಟ್ವಾಳ: ಅರಸರ ಕಾಲದಿಂದಲೂ ನಡೆಯುತ್ತಿದ್ದ ಪದ್ದತಿಯೊಂದನ್ನು ಮಸೀದಿಯ ಪ್ರಮುಖರು ಇಂದಿಗೂ ಮುಂದುವರಿಸಿಕೊಂಡು ಬಂದ ಕ್ಷಣಕ್ಕೆ ಮಾ.17 ರಂದು ಮತ್ತೆ ಸಾಕ್ಷಿಯಾಯಿತು.ಬಂಟ್ವಾಳ ತಾಲೂಕಿನ ನಂದಾವರ ದೇವಸ್ಥಾನದ ಸಮೀಪವಿರುವ ಕೇಂದ್ರ ಜುಮಾ ಮಸೀದಿಯಲ್ಲಿ ದೈವಕ್ಕೆ ಸೀಯಾಳ ನೀಡುವ ಪದ್ದತಿಯನ್ನು ಇಂದು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ.
ಮಸೀದಿ ಸಮೀಪವೇ ಮೂರು ವರ್ಷಕ್ಕೊಮ್ಮೆ ನಡೆಯುವ ಮಂಜದಗೋಳಿ ಜಾತ್ರೆಗೆ ಸಜೀಪನಡು ಮೂಲಸ್ಥಾನದಿಂದ ಭಂಡಾರ ಬಂದು ಜಾತ್ರೆ ನಡೆಯುತ್ತದೆ.
ದೈವ ಮಂಜದಗೋಳಿ ಕ್ಷೇತ್ರಕ್ಕೆ ಆಗಮಿಸುವ ಮೊದಲು ದಾರಿಯಲ್ಲಿರುವ ಕೇಂದ್ರ ಜುಮಾ ಮಸೀದಿಯ ನಾಲ್ಕು ಮೆಟ್ಟಿಲು ಹತ್ತಿ ಸೀಯಾಳ ಸ್ವೀಕರಿಸುವ ಪದ್ದತಿ ಅನಾದಿಕಾಲದಿಂದಲೂ ನಡೆಯುತ್ತಿದ್ದು,ಇಂದಿಗೂ ಅದು ಪದ್ದತಿಯಂತೆ ಮುಂದುವರಿದಿದೆ.
ನಿನ್ನೆ ಮಾ.17 ರಂದು ಜಾತ್ರೆ ನಡೆದಿದ್ದು, ಪದ್ದತಿಯಂತೆ ದೈವ ಮಸೀದಿಯ ಮೆಟ್ಟಿಲು ಹತ್ತಿ ಸೀಯಾಳ ಸ್ವೀಕರಿಸಿದೆ.