ಬಂಟ್ವಾಳದಲ್ಲಿ ಯುವತಿ ಕಾಣೆ: ಪ್ರಕರಣ ದಾಖಲು

ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ಮನೆಗೆ ಮರಳದೆ ಕಾಣೆಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಅರಳ ಗ್ರಾಮದ ಮುಲಾರಪಟ್ನ ನಿವಾಸಿಯಾದ ಕುಮಾರಿ ಫಾತಿಮತ್ ಇಪ್ರಾ (18) ಕಾಣೆಯಾದ ಯುವತಿಯಾಗಿದ್ದಾಳೆ. ಕಂಪ್ಯೂಟರ್ ತರಬೇತಿ ಪಡೆದಿದ್ದ ಈಕೆ ಬಿಸಿರೋಡಿನಲ್ಲಿರುವ ಒನ್ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಮಾರ್ಚ್ 24ರಂದು ಕೆಲಸಕ್ಕೆಂದು ತೆರಳಿದ್ದ ಫಾತಿಮತ್ ಇಪ್ರಾ ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾಳೆ. ಈ ಕುರಿತು ಯುವತಿಯ ತಾಯಿ ರಝೀಯಾ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!