ಮುಳಿಯ ಗೋಲ್ಡ್ & ಡೈಮಂಡ್ಸ್‌ನ “ಡೈಮಂಡ್ ಫೆಸ್ಟ್” ಮಾರ್ಚ್ 27ರಿಂದ ಆರಂಭ

ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರನ್ನು ಆಕರ್ಷಿಸುತ್ತಿದೆ.

ಉತ್ಸವದ ಅಂಗವಾಗಿ ₹50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಖಚಿತ ಉಡುಗೊರೆ ನೀಡಲಾಗುತ್ತಿದೆ. ಜೊತೆಗೆ ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಗ್ರಾಹಕರಿಗೆ ಲಭ್ಯವಿದೆ. ವಿವಿಧ ವಿನ್ಯಾಸಗಳ ವಜ್ರಾಭರಣಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದ್ದು, ಮದುವೆ ಮತ್ತು ಹಬ್ಬದ ಸೀಸನ್‌ ಗಮನದಲ್ಲಿಟ್ಟುಕೊಂಡು ವಿಶೇಷ ಸಂಗ್ರಹವನ್ನು ಪರಿಚಯಿಸಲಾಗಿದೆ.

ವಜ್ರಾಭರಣಗಳ ಮೇಲೆ 95% ಎಕ್ಸ್‌ಚೇಂಜ್ ಮತ್ತು 90% ಬೈಬ್ಯಾಕ್ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವ ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ.

ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿಕೊಪ್ಪ ಶಾಖೆಗಳಲ್ಲಿ ಈ ಡೈಮಂಡ್ ಫೆಸ್ಟ್ ನಡೆಯುತ್ತಿದ್ದು, ಗ್ರಾಹಕರು ಸಮೀಪದ ಮುಳಿಯ ಶೋರೂಮ್‌ಗಳಿಗೆ ಭೇಟಿ ನೀಡಿ ವಿಶೇಷ ಆಫರ್‌ಗಳನ್ನು ಪಡೆಯಬಹುದು.

ಉತ್ಸವದ ಕುರಿತು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರತಿಕ್ರಿಯಿಸಿ, “ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಒದಗಿಸುವುದು ನಮ್ಮ ಉದ್ದೇಶ. ಈ ಡೈಮಂಡ್ ಫೆಸ್ಟ್ ಮೂಲಕ ವಿಶೇಷ ಖರೀದಿ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ,” ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!