ಮಹಾಲಿಂಗೇಶ್ವರ ದೇವಾಲಯ ವಿವಾದ: ‘ಇದು ವೈಯಕ್ತಿಕ ವಿಷಯ, ದೇವಸ್ಥಾನಕ್ಕೆ ಸಂಬಂಧವಿಲ್ಲ’ – ಅಧ್ಯಕ್ಷ ಈಶ್ವರ ಭಟ್

ಪುತ್ತೂರು : ಮಹಾಲಿಂಗೇಶ್ವರ ದೇವಾಲಯದ ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವುದಕ್ಕೆ ಇದು ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ. ದೇವಸ್ಥಾನದ ಪೂರ್ವಶಿಷ್ಟ ಸಾಂಪ್ರದಾಯದಂತೆ ನಾವು ಈ ಹಿಂದೆ ಹೇಗಿತ್ತೋ ಹಾಗೆ ಮುಂದುವರಿಯುತ್ತೇವೆ ಎಂದು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾನಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಪ್ರತಿಕ್ರಿಯಿಸಿದ್ದಾರೆ.

ಮಹಾಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಗಳಿಂದ ದೇವಾಲಯದ ವಾಸ್ತು ಇಂಜಿನಿಯರ್ ಪಿ ಜಿ ಜಗನ್ನಿವಾಸ್ ರಾವ್ ಅವರನ್ನ ಹೊರಗಿಡಬೇಕು. ಇಲ್ಲವಾದಲ್ಲಿ ನಾನು ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವ ಧೃಡ ನಿರ್ಧಾರ ವನ್ನು ಮಾಡಿರುವುದಾಗಿ ಸಂತ್ರಸ್ಥೆಯ ತಾಯಿ ಸುದ್ದಿಗೋಷ್ಟಿ ನಡೆಸಿ ಎಚ್ಚರಿಕೆ ನೀಡಿದ್ದರು.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಪ್ರಕರಣ ಹೈಕೊರ್ಟ್ನಲ್ಲಿದೆ. ಕೋರ್ಟ್ ತೀರ್ಪು ಯಾರು ಪರ ನೀಡುತ್ತದೆ ಗೊತ್ತಿಲ್ಲ.ನಾವು ದೇವಸ್ಥಾನದ ಪೂರ್ವಶಿಷ್ಟ ಸಾಂಪ್ರದಾಯದಂತೆ ನಾವು ಈ ಹಿಂದೆ ಹೇಗಿತ್ತೋ ಹಾಗೆ ಮುಂದುವರಿಯುತ್ತೇವೆ.ದೇವಸ್ಥಾನದ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಇದರ ಜವಬ್ದಾರರೂ ಅಲ್ಲ. ನಮ್ಮ ಹಿಂದೂ ಸಾಂಪ್ರದಾಯದಲ್ಲಿ ದೇವಸ್ಥಾನಕ್ಕೆ ಅರ್ಚಕರು ಮತ್ತು ತಂತ್ರಿಗಳು ಇದ್ದಾರೆ. ಇಲ್ಲಿಯವರೆಗೆ ರವೀಶ್ ತಂತ್ರಿಗಳ ಮಾರ್ಗದರ್ಶನದಂತೆ ನಾವು ದೇವಸ್ಥಾನದ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದೇವೆ. ಈ ವಿಚಾರವನ್ನೂ ತಂತ್ರಿಗಳ ಗಮನಕ್ಕೆ ತಂದು ಅವರ ತೀರ್ಮಾನಕ್ಕೆ ನಾವು ಬದ್ಧರಾಗಬೇಕು. ಸಮಿತಿಯೂ ಬದ್ಧರಾಗುತ್ತದೆ. ಜಗನ್ನಿವಾಸ್ ರಾವ್ ಅವರಿಗೆ ದೇವಾಲಯದ ವ್ಯವಸ್ಥೆ ಯಲ್ಲಿ ಅವಕಾಶ ನೀಡಬಾರದು ಎಂದು ಈ ಹಿಂದೆ ಅರ್ಜಿ ಬಂದಿದೆ. ಅರ್ಜಿ ಪರಿಶೀಲನೆ ಮಾಡಿದ್ದೇನೆ. ರವೀಶ್ ತಂತ್ರಿಯವರ ಗಮನಕ್ಕೆ ತಂದು ಚರ್ಚಿಸಿ ತಂತ್ರಿಗಳ ಮಾರ್ಗದರ್ಶನ ಪಡೆದು ನಿರ್ಣಯ ತೆಗೆದುಕೊಳ್ಳುತ್ತೇವೆ. ಜಗನ್ನಿವಾಸ್ ರಾವ್ ನನ್ನು ದೇವಸ್ಥಾನಕ್ಕೆ ಬರುವಂತೆ ಸಮಿತಿ ಮಾಡಿದ್ದಲ್ಲ.ಅವರನ್ನು ದೇವಸ್ಥಾನದಿಂದ ಬಿಡುವ ರೈಟ್ಸ್ ಕೂಡ ನಮಗೆ ಇಲ್ಲ..ಸೇರಿಸುವ ರೈಟ್ಸ್ ಕೂಡ ನಮಗೆ ಇಲ್ಲ. ತಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಕಾರ್ಯಗಳು ನಡೆಯುತ್ತದೆ.

ಇದರ ಬಗ್ಗೆ ಮಾತುಕತೆ ಮಾಡಲು ಜಗನ್ನಿವಾಸ್ ರಾವ್ ಕೂಡ ನಮ್ಮ ಬಳಿಗೆ ಬರಲಿಲ್ಲ. ಹುಡುಗಿಯ ಕಡೆಯವರು ನಮ್ಮ ಬಳಿಗೆ ಬಂದಿಲ್ಲ.ದಯವಿಟ್ಟು ರಾಜಕೀಯ, ವೈಯಕ್ತಿಕ ವಿಚಾರವನ್ನು ದೇವಸ್ಥಾನದ ಒಳಗೆ ತರಬೇಡಿ.. ದೇವಸ್ಥಾನಕ್ಕೆ ಅದರದ್ದೆ ಆದ ಗೌರವ ಇದೆ.ಕೊಡಿ ಮರದ ಅಡಿಯಲ್ಲಿ. ದೇವಸ್ಥಾನದ ಒಳಗೆ ಯಾವುದೇ ವೈಯಕ್ತಿಕ ನಡೆಸುವಂತಿಲ್ಲ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!