ಕಾರು ವೀಲಿಂಗ್‌ಗೆ ಬ್ರೇಕ್: ಆರೋಪಿ ಸಹಿತ ವಾಹನ ವಶಕ್ಕೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೀಲಿಂಗ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ, ಆರೋಪಿ ಸಹಿತ ಕಾರನ್ನು ಪೋಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ವೀಲಿಂಗ್ ಮಾಡಿದ ಸರ್ಫುದ್ದೀನ್ ಎಂಬಾತನನ್ನು ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದ್ದು, ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವೈರಲ್ ಆಗಿದ್ದ ವಿಡಿಯೋದಲ್ಲಿ KL-09-R-6971 ಸಂಖ್ಯೆಯ ಕಪ್ಪು ಬಣ್ಣದ ಕಾರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಪ್ರದೇಶದಲ್ಲಿ ವೀಲಿಂಗ್ ಮಾಡುವ ದೃಶ್ಯ ಕಂಡುಬಂದಿತ್ತು. ಈ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಪೊಲೀಸರು ತನಿಖೆ ನಡೆಸಿದಾಗ 2025ರಲ್ಲಿ ಈ ಘಟನೆ ನಡೆದಿರುವುದು ಹಾಗೂ ಸರ್ಫುದ್ದೀನ್ ಎಂಬಾತ ವೀಲಿಂಗ್ ಮಾಡಿರುವುದು ಖಚಿತವಾಗಿದ್ದು, ಆತನನ್ನು ವಾಹನ ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಈ ಕ್ರಮದಿಂದ ತಾಲೂಕಿನಲ್ಲಿನ ಅಪಾಯಕಾರಿ ವೀಲಿಂಗ್ ಸಾಹಸಕ್ಕೆ ಕೈ ಹಾಕುವವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!