ಮಂಗಳೂರಿನಲ್ಲಿ ಏ.11-12 ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ

ಮಂಗಳೂರು: ದ.ಕ. ಜಿಲ್ಲಾ ಪಂಜ ಕುಸ್ತಿ ಸಂಘದ ಆಶ್ರಯದಲ್ಲಿ ಎ. 11 ಮತ್ತು 12ರಂದು ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆ ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರೇಮಂಡ್ ಡಿಸೋಜಾ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈಗಾಗಲೇ 180 ಮಂದಿ ಕುಸ್ತಿ ಸ್ಪರ್ಧಿಗಳು ನೋಂದಾಯಿಸಿದ್ದು, 250ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪುರುಷರು, ಮಹಿಳೆಯರು ಮತ್ತು ವಿಕಲ ಚೇತನರಿಗೆ ವಿವಿಧ ದೇಹದಾರ್ಡ್ಯ ಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು .

ಈ ಸ್ಪರ್ಧೆಯ ವಿಜೇತರನ್ನು ಮುಂದೆ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕರೆದುಕೊಂಡು ಹೋಗಲಾಗುತ್ತದೆ .ಸ್ಪರ್ಧೆ ಎ. 11ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್‌ ಆಯುಕ್ತ ಸುಧೀ‌ರ್ ಕುಮಾ‌ರ್ ರೆಡ್ಡಿ ಉದ್ಘಾಟಿಸುವರು. ಎ. 12ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು

ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಸುನಿಲ್ ಕ್ಸೇವಿಯರ್ , ಉಪಾಧ್ಯಕ್ಷ ಕೃಷ್ಣ ಶೆಣೈ, ಕೋಶಾಧಿಕಾರಿ ಸುಜಿತ್ ಕುಮಾರ್, ಆನಂದ ಸೋನ್ಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!