ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.ಸಮೀರ್ ಎಂಬಾತನಿಂದ ಹಿಂದೂ ಯುವತಿಗೆ ಲವ್ ಜಿಹಾದ್ ಬಲೆ ಬೀಸಲಾಗಿತ್ತು ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ.ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅಲ್ಲಿಯೇ ಧರಣಿ ಕುಳಿತರು.
ಆರೋಪಿ ಸಮೀರ್ ಗಾಂಜಾ ವ್ಯಸನಿಯಾಗಿದ್ದಾನೆ ಎಂದ ಸಂಘಟನೆ ಕಾರ್ಯಕರ್ತರು ಆತನನ್ನು ಬಂಧಿಸಲು ಆಗ್ರಹಿಸಿದರು.ಸಮೀರ್ ನ ಮೊಬೈಲ್ ವಶಕ್ಕೆ ಪಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆ ಮೊಬೈಲ್ ನಲ್ಲಿ ಗಾಂಜಾ, ಮಾದಕ ವಸ್ತುಗಳ ಸೇವನೆ ಫೋಟೋ, ವಿಡಿಯೋ ಇರುವುದಾಗಿ ಹೇಳಿದ್ದಾರೆ.
ಆತ ಹಿಂದೂ ಹುಡುಗಿಯರಿಗೆ ಗಾಂಜಾ ಅಭ್ಯಾಸ ಮಾಡಿಸುತ್ತಿದ್ದ ಎಂದೂ ಆರೋಪಿಸಲಾಗುತ್ತಿದೆ.ಗಾಂಜಾ ವ್ಯಸನ ಮಾಡಿಸಿ ಅವರೊಂದಿಗೆ ಅಸಭ್ಯ ವರ್ತನೆ ಎಸಗುತ್ತಿದ್ದ. ಆದ್ದರಿಂದ ಆತನನ್ನು ಬಂಧಿಸುವಂತೆ ಠಾಣೆ ಎದುರು ಪ್ರತಿಭಟನೆ ನಡೆಸಿದವರು ಆಗ್ರಹಿಸಿದರು.